ಹಿಮಾಪಾತದಿಂದ ವೀರಮರಣ ಹೊಂದಿದ ಯೋಧರಿಗೆ ಶೃದ್ಧಾಂಜಲಿ

Spread the love

ಹಿಮಾಪಾತದಿಂದ ವೀರಮರಣ ಹೊಂದಿದ ಯೋಧರಿಗೆ ಶೃದ್ಧಾಂಜಲಿ

ಮಂಗಳೂರು : ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ಮಂಗಳೂರು ನಗರದ ವತಿಯಿಂದ ಸಿಯಾಚಿನ್ ನಲ್ಲಿ ನವೆಂಬರ್ 8ನೇ ತಾರೀಕಿನಂದು ಹಿಮಾಪಾತದಿಂದ ವೀರಮರಣ ಹೊಂದಿದ ಎನ್.ಕೆ ಮನಿಂದರ್ ಸಿಂಗ್, ಮನೀಶ್ ಕುಮಾರ್, ದೀಪಾಲ್ ಕುಮಾರ್ ಹಾಗೂ ವೀರ್ಪಾಲ್ ಸಿಂಗ್ ಇವರಿಗೆ ಕದ್ರಿ ಯುದ್ಧ ಸ್ಮಾರಕದಲ್ಲಿ ಶೃದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿಯಾದ ಮಣಿಕಂಠ ಕಳಸ ಮಾತನಾಡಿ ಸಿಯಾಚಿನ್ ಯುದ್ಧ ಭೂಮಿಯ ಸ್ವರೂಪವನ್ನು ತಿಳಿಸಿ ಕಳೆದ ಹಲವು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಹಿಮಪಾತದಿಂದ ಮಡಿದವರನ್ನು ನೆನೆಸಿಕೊಳ್ಳುತ್ತಾ ನಮ್ಮ ರಾಜ್ಯದವರೇ ಆದಂತಹ ಲಯನ್ಸ್ ಸುಭೇದಾರ್ ಹನುಮಂತಪ್ಪ ಕೊಪ್ಪದ್ ಅವರು 2 ವರ್ಷದ ಹಿಂದೆ ಇದೇ ಹಿಮಪಾತದಿಂದ ವೀರಮರಣ ಹೊಂದಿದ ವಿಷಯವನ್ನು ನೆನೆಸಿಕೊಂಡರು. ರಾಜ್ಯ ಕಾನೂನು ವಿದ್ಯಾರ್ಥಿ ಸಮಿತಿ ಸದಸ್ಯರಾದ ಅಭಿಲಾಷ್ ಶಾಸ್ತ್ರಿಯವರು ಮಾತನಾಡಿ ನಮ್ಮ ದೇಶದ ಪ್ರತಿಯೊಬ್ಬ ವೀರಯೋಧರು ಸುರಕ್ಷಿತವಾಗಿರುವಂತೆ ದೇವರಲ್ಲಿ ಪ್ರಾರ್ಥಿಸಿದರು. ಮೊಂಬತ್ತಿ ಬೆಳಗಿ ಮೌನಾಚರಣೆಯೊಂದಿಗೆ ಶೃದ್ಧಾಂಜಲಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ನಗರ ಸಂಘಟನಾ ಕಾರ್ಯದರ್ಶಿಯಾದ ವೀರೇಶ್ ಅಜ್ಜಣ್ಣನವರು ಹಿರಿಯ ಕಾರ್ಯಕರ್ತರಾದ ಶೀತಲ್ ಕುಮಾರ್ ಹಾಗೂ ಕೆ.ಪಿ.ಟಿ ಕಾಲೇಜು ಘಟಕದ ಸಹಕಾರ್ಯದರ್ಶಿ ಚೇತನ್, ಉಪಾಧ್ಯಕ್ಷರಾದ ಶ್ರೇಯಸ್, ರಾಜ್ ಕಿರಣ್, ಶಬರೀಶ್, ಚೇತನ್, ಸಂಜಯ್, ರಾಕೇಶ್, ವರುಣ್, ವಿಜೇಶ್ ಇತರೆ ಎಬಿವಿಪಿ ಕಾರ್ಯಕರ್ತರು ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು


Spread the love