ಹಿರಿಯ ಸಾಹಿತಿ ಗ್ಲೇಡಿಸ್ ರೇಗೊ ನಿಧನ:  ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸಂತಾಪ

Spread the love

ಹಿರಿಯ ಸಾಹಿತಿ ಗ್ಲೇಡಿಸ್ ರೇಗೊ ನಿಧನ:  ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸಂತಾಪ

ಕೊಂಕಣಿಯ ವೀರ ಮಹಿಳೆ ನಾಮಾಂಕಿತ ಸಾಹಿತಿ, ಪ್ರಕಾಶಕಿ, ಸಿಂಪ್ರೊಜಾ ಫಿಲೊಮಿನಾ ಗ್ಲೇಡಿಸ್ ಸಿಕ್ವೇರಾ (ಗ್ಲೇಡಿಸ್ ರೇಗೊ) ಇವರು 21.07.2025ರಂದು ಉಲ್ಲಾಳದ ಸೊಮೇಶ್ವರದಲ್ಲಿರುವ ವೃದ್ದಾಶ್ರಮ ʼಪಶ್ಚಿಮ್ʼ ನಲ್ಲಿ ನಿಧನರಾದರು. ಇವರಿಗೆ 80 ವರ್ಷ ವಯಸ್ಸಾಗಿತ್ತು.

ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರ ಕಾರ್ಯ ನಿರ್ವಹಿಸಿ, ಕಥೆ, ಕಾದಂಬರಿ, ಕವನ, ಲೇಖನ ಹೀಗೆ ಹಲವು ವಿಷಯಗಳ ಮೂಲಕ ಸಾಹಿತ್ಯ ಕೃಷಿಯಲ್ಲಿ ತಮ್ಮ ದೇಣಿಗೆಯನ್ನು ನೀಡಿದ್ದಾರೆ. ಇವರು ಪ್ರಕಾಶಕಿ ಆಗಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ,

ಇವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರೂ ಆಗಿದ್ದರು. ಇವರಿಗೆ 2004ರಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ʼಗೌರವ ಪ್ರಶಸ್ತಿʼ ಲಭಿಸಿದೆ. ಸಂದೇಶ ಹಾಗೂ ದಾಯ್ಜಿ ದುಬಾಯ್ ಪುರಸ್ಕಾರವೂ ಲಭಿಸಿದೆ.

ಇವರ ನಿಧನದಿಂದ ಕೊಂಕಣಿಗೆ ಅಪಾರ ನಷ್ಟವಾಗಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಇವರ ನಿಧನದಿಂದ ದುಃಖಪಡುತ್ತದೆ ಎಂದು ಅಕಾಡೆಮಿ ಅಧ್ಯಕ್ಷರಾದ  ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಸಂತಾಪವನ್ನು ಸೂಚಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments