ಹುತಾತ್ಮ ವೀರಯೋಧರ ಪರಿಚಯ ಅಗತ್ಯ: ಕೆ. ಅಣ್ಣಾಮಲೈ

Spread the love

ಹುತಾತ್ಮ ವೀರಯೋಧರ ಪರಿಚಯ ಅಗತ್ಯ: ಕೆ. ಅಣ್ಣಾಮಲೈ

ಹೊಡೆಯಾಲ (ಎನ್.ಆರ್.ಪುರ): ಹುತಾತ್ಮ ಯೋಧರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಹುತಾತ್ಮ ಯೋಧರು ಓದಿದ ಶಾಲೆಯಲ್ಲಿ ಈದಿನಾಚರಣೆ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಎಸ್‌ಪಿ ಕೆ. ಅಣ್ಣಾಮಲೈ ಹೇಳಿದರು.

21ckm19ತಾಲ್ಲೂಕಿನ ಹೊಡೆಯಾಲ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಶುಕ್ರವಾರ ಕಾರ್ಯ ಕ್ರಮದಲ್ಲಿ ಹುತಾತ್ಮ ಹೊಡೆಯಾಲ ಗ್ರಾಮದ ಎಚ್.ಎನ್.ಶಿವಾನಂದ ಅವರಿಗೆ ಗೌರವ ಸಲ್ಲಿಸಿ ಮಾತನಾಡಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸೂಚನೆಯಂತೆ ಹುತಾತ್ಮರ ದಿನಾಚರಣೆಯನ್ನು ಅವರು ಓದಿದ ಶಾಲೆಯಲ್ಲಿ ಹಮ್ಮಿ ಕೊಳ್ಳಲಾಗಿದೆ. ಸಿಆರ್‌ ಪಿಎಫ್ ನಲ್ಲಿ ಸೇವೆಯಲ್ಲಿದ್ದ ಎಚ್ .ಎನ್. ಶಿವಾನಂದ 26 ವರ್ಷಗಳ ಹಿಂದೆ ಹುತಾತ್ಮರಾಗಿದ್ದಾರೆ. ಎಂದರು.

ಶೃಂಕೋನ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕ್ಯಾಪ್ಟನ್ ಎನ್.ಗೋಪಾಲ ಮಾತನಾಡಿ ದರು.

ಗ್ರಾಮಸ್ಥರಾದ ಎಚ್ .ಎಸ್. ಶಾಶ್ವತ್ ಹಾಗೂ ಹುತಾತ್ಮ ಯೋಧರ ಸ್ನೇಹಿತ ಚಂದ್ರಶೇಖರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಪ್ಪನಾಯ್ಕ, ತಹಶೀಲ್ದಾರ್ ಟಿ.ಗೋಪಿನಾಥ್, ಕೊಪ್ಪ ಡಿವೈಎಸ್‌ಪಿ ರವಿ ನಾಯ್ಕ, ಇನ್‌ಸ್ಪೆ ಕ್ಟರ್ ಜಗನ್ನಾಥ್, ಎಚ್.ಆರ್.ಲಕ್ಷ್ಮಣ್ ನಾಯಕ್,ಗ್ರಾಮ ಪಂಚಾಯಿತಿ ಸದಸ್ಯೆ ಪಾರ್ವತಿಬಾಯಿ, ಬೆಳ್ಳೆಗೌಡ, ನೇತ್ರಾವತಿ, ಎಚ್.ಎನ್. ಸತ್ಯನಾರಾಯಣ, ಪತ್ರಕರ್ತ ವೈ.ಎಸ್. ಮಂಜುನಾಥ್ ,ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಸುನಿತಾ ಇದ್ದರು.

ಪೊಲೀಸ್‌ ಸಿಬ್ಬಂದಿ ಜನಸ್ನೇಹಿಯಾಗಬೇಕು : ಜಿಲ್ಲಾಧಿ ಕಾರಿ ಜಿ. ಸತ್ಯವತಿ

ಚಿಕ್ಕಮಗಳೂರು: ಪೊಲೀಸ್‌ ಸಿಬ್ಬಂದಿ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸು ವುದರೊಂದಿಗೆ ದುರ್ಬಲ ವರ್ಗದವರ ರಕ್ಷಣೆ ಮುಂದಾಗಬೇಕೆಂದು ಜಿಲ್ಲಾಧಿ ಕಾರಿ ಜಿ. ಸತ್ಯವತಿ ತಿಳಿಸಿದರು.

ನಗರದ ಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಶುಕ್ರವಾರ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ದಲ್ಲಿ ಹುತಾತ್ಮ ಪೊಲೀಸ್ ಸಿಬ್ಬಂದಿಗಳಿಗೆ ಗೌರವ ಸಮರ್ಪಿಸಿ ಮಾತನಾಡಿದರು.

ದೇಶ ಕಾಯುವ ಕೆಲಸ ವೀರ ಯೋಧರು ಮಾಡುತ್ತಿದ್ದಾರೆ.ದೇಶಕ್ಕೆ ಆಂತರಿಕ ರಕ್ಷಣೆ, ಭದ್ರತೆಯನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಜನ ಸಾಮಾನ್ಯರು ಸುಖ, ಸಂತೋಷ, ನೆಮ್ಮದಿಯಿಂದ ಇರಲು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.

ದಿನದ 24 ಗಂಟೆ ತಮ್ಮ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ಗಳು, ದೈಹಿಕ,ಮಾನಸಿಕ ಸದೃಢತೆ ಕಾಪಾಡಿ ಕೊಳ್ಳ ಬೇಕು. ಪ್ರಕರಣಗಳು ಬಂದಾಗ ಒತ್ತಡಕ್ಕೆ ಮಣಿಯಬಾರದು ಎಂದು ಅವರು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಕಳೆದೊಂದು ವರ್ಷ ದಿಂದ ಹುತಾತ್ಮರಾದ 473 ಜನರ ಹೆಸರನ್ನು ಓದುವ ಮೂಲಕ ಅವರನ್ನು ಸ್ಮರಿಸಿದ್ದಾರೆ ಎಂದರು.

ಪೊಲೀಸ್ ಇಲಾಖೆ ಅಧಿಕಾರಿ ಗಳು, ಜನಪ್ರತಿನಿಧಿಗಳು,ಗಣ್ಯರು ಹಾಗೂ ಸಾರ್ವಜನಿಕರು ಹುತಾತ್ಮರ ಸ್ಮಾರಕಕ್ಕೆ ಪುಷ್ಪ ಗುಚ್ಚವಿರಿಸುವ ಮೂಲಕ ಗೌರವ ವಂದನೆ ಸಲ್ಲಿಸಿದರು.

ಹುತಾತ್ಮರ ಆತ್ಮಗಳಿಗೆ ಶಾಂತಿಕೋರಿ ಎರಡು ನಿಮಿಷ ಮೌನಾಚರಣೆ ಮಾಡ ಲಾಯಿತು. ಅಮರರ ಗೌರವಾರ್ಥ 3 ಸುತ್ತುಗಳ ತೋಪು ಆರಿಸಲಾಯಿತು.


Spread the love