ಹೆಬ್ರಿ: ಕೋಳಿ ಅಂಕಕ್ಕೆ ದಾಳಿ; ಕೋಳಿ, ನಗದು ಸಹಿತ ಆರೋಪಿಗಳು ಪೊಲೀಸ್ ವಶಕ್ಕೆ

Spread the love

ಹೆಬ್ರಿ: ಕೋಳಿ ಅಂಕಕ್ಕೆ ದಾಳಿ; ಕೋಳಿ, ನಗದು ಸಹಿತ ಆರೋಪಿಗಳು ಪೊಲೀಸ್ ವಶಕ್ಕೆ

ಹೆಬ್ರಿ: ಕೋಳಿ ಅಂಕ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಹೆಬ್ರಿ ಪೊಲೀಸರು ಕೋಳಿ, ನಗದು ಸಹಿತ ಕೋಳಿ ಅಂಕದಲ್ಲಿ ಭಾಗವಹಸಿದ್ದವರನ್ನು ವಶಕ್ಕೆ ಪಡೆದುಕೊಂಡ ಘಟನೆ ವರಂಗ ಗ್ರಾಮದ ತಲಮನೆ ಎಂಬಲ್ಲಿ ನಡೆದಿದೆ.

ವಶಕ್ಕೆ ಪಡೆದವರನ್ನು ಉದಯ , ಸುದರ್ಶನ್ @ ಬಾಬು , ಸುಧೀರ್ , ಭಾಸ್ಕರ, ಸುನೀಲ್, ಸಂತೋಷ್ , ಚರಣ್ ಕುಮಾರ್ , ಶ್ರೀಧರ ಶೆಟ್ಟಿ , ರಘುನಾಥ ಪೂಜಾರಿ , ರಮೇಶ್ ಶೆಟ್ಟಿ , ಮಂಜುನಾಥ , ಪ್ರಜ್ವಲ್ , ಸುಧೀರ್ ಪೂಜಾರಿ ಎಂದು ಗುರುತಿಸಲಾಗಿದೆ.

ಸೆಪ್ಟೆಂಬರ್ 29ರಂದು ವರಂಗ ಗ್ರಾಮದ ತಲೆ ಮನೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಸುಮ.ಬಿ-ಪಿಎಸ್ಐ ಹೆಬ್ರಿ ಪೊಲೀಸ್ ಠಾಣೆ ಇವರಿಗೆ ಬಂದ ಖಚಿತ ಮಾಹಿತಿ ದೊರೆತ ಮೇರೆಗೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದು, ಸಾರ್ವಜನಿಕ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿ ಸುಮಾರು 20 ರಿಂದ 30 ಜನರು ಲ್ಯಾಂಪ್ ಗಳ ಬೆಳಕಿನ ಸಹಾಯದಿಂದ ಕೋಳಿಗಳ ಕಾಲಿಗೆ ಹರಿತವಾದ ಬಾಳುಗಳನ್ನು ಕಟ್ಟಿ ಅವುಗಳಿಗೆ ಹಿಂಸೆಯಾಗುವಂತೆ ಕಾಳಗಕ್ಕೆ ಬಿಟ್ಟು ವಿಜೇತ ಕೋಳಿಗಳ ಮೇಲೆ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ಆಡುತ್ತಿರುವುದು ಕಂಡು ಬಂದಿದೆ.

ಈ ವೇಳೆ 11 ಜನರನ್ನು ವಶಕ್ಕೆ ಪಡೆದು ಕೊಂಡಿದ್ದು. ಉಳಿದವರು ಓಡಿ ಹೋಗಿದ್ದು ಈ ಕೋಳಿ ಅಂಕವನ್ನು ತಲೆಮನೆಯ ಉದಯ ಮತ್ತು ಸುದರ್ಶನ್ @ ಬಾಬು ಎಂಬವರು ನಡೆಸುತ್ತಿರುವುದಾಗಿ ಅವರುಗಳು ನುಡಿದಿದ್ದು. ಅರೋಪಿತರುಗಳನ್ನು ದಸ್ತಗಿರಿ ಮಾಡಿ ಅವರುಗಳು ಕೋಳಿ ಅಂಕಕ್ಕೆ ಬಳಸಿದ 19 ಕೋಳಿ ಹುಂಜಗಳನ್ನು ಹಾಗೂ ಅರೋಪಿತರುಗಳ ಬಳಿ ಇದ್ದ ಕೋಳಿ ಅಂಕಕ್ಕೆ ಬಳಸಿದ ನಗದು 17,040/ರೂ ಹಾಗೂ ಕೋಳಿಗಳಿಗೆ ಕಟ್ಟಿದ 10 ಬಾಳುಗಳು ಹಾಗೂ ಸ್ಥಳದಲ್ಲಿದ್ದ ಒಟ್ಟು 25 ವಾಹನಗಳನ್ನು ಮತ್ತು ಎರಡು ಲ್ಯಾಂಪ್ ಇವುಗಳನ್ನು ಮೇಲಿನ ಎಲ್ಲಾ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love