15 ರ ಹರೆಯದ ಬಾಲಕಿ ಆತ್ಮಹತ್ಯೆ

Spread the love

15 ರ ಹರೆಯದ ಬಾಲಕಿ ಆತ್ಮಹತ್ಯೆ
ಮಂಗಳೂರು: 15 ವರ್ಷದ ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಣಾಜೆ ಪೋಲಿಸ್ ಠಾಣಾ ವ್ಯಾಪ್ತಿಯ ನರಿಂಗಾನ ನೆತ್ತಿಲಪದವು ಎಂಬಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ನೆತ್ತಿಲಪದವಿನ ಯೂಸೂಫ್ ಎಂಬವರ ಪುತ್ರಿ ಶೈನಾ ಎಂದು ಗುರುತಿಸಲಾಗಿದೆ.
ಶುಕ್ರವಾರ ಮನೆಯಲ್ಲಿನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಈಕೆಯ ತಂದೆ ಯೂಸೂಫ್ ಅವರಿಗೆ ಎರಡನೇ ಮದುವೆಯಾಗಿದ್ದು, ಆತ್ಮಹತ್ಯೆಗೈದ ಬಾಲಕಿ ಎರಡನೆ ಪತ್ನಿಯ ಮಗಳಾಗಿದ್ದಾಳೆ. ಯೂಸೂಫ್ ಎರಡನೇ ಪತ್ನಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love