ಉಡುಪಿ: ಉಪ್ಪಾ ಮೂಡ್ಸ್ ಆಫ್ ಶ್ರೀಕೃಷ್ಣ ಜನ್ಮಾಷ್ಟಮಿ ಛಾಯಾಚಿತ್ರ ಪ್ರದರ್ಶನ

Spread the love

ಉಡುಪಿ: ಉಡುಪಿಯಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಹಬ್ಬ ಅಂಗವಾಗಿ ಉಡುಪಿ ಪ್ರೆಸ್ ಫೆÇಟೋಗ್ರಾಫರ್ಸ್ ಅಸೋಸಿಯೇಶನ್ (ಉಪ್ಪಾ) ನೇತೃತ್ವದಲ್ಲಿ ಶ್ರೀಕೃಷ್ಣಮಠ, ಪರ್ಯಾಯ ಶ್ರೀ ಕಾಣಿಯೂರು ಮಠದ ಪ್ರಾಯೋಜಕತ್ವದಲ್ಲಿ `ಉಪ್ಪಾ ಮೂಡ್ಸ್ ಆಫ್ ಶ್ರೀಕೃಷ್ಣ ಜನ್ಮಾಷ್ಟಮಿ’ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ ಆಯೋಜಿಸಿತ್ತು.

uppa

ಸ್ಪರ್ಧೆಯಲ್ಲಿದ್ದ ಆಯ್ದ ಚಿತ್ರಗಳ ಛಾಯಾಚಿತ್ರ ಪ್ರದರ್ಶನವನ್ನು ಪರ್ಯಾಯ ಶ್ರಿ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥಶ್ರೀಪಾದರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶಾಸಕ ಪ್ರಮೋದ್ ಮದ್ವರಾಜ್, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಅಣ್ಣಾಮಲೈ, ನಗರಸಭೆ ಅದ್ಯಕ್ಷ ಯುವರಾಜ್, ಉಪ್ಪಾ ಅಧ್ಯಕ್ಷ ಜನಾರ್ದನ ಕೊಡವೂರು, ಕೋಶಾದ್ಯಕ್ಷ ಆಸ್ಟ್ರೋಮೋಹನ್, ಕಾರ್ಯದರ್ಶಿ ಗಣೇಶ್ ಕಲ್ಯಾಣಪುರ, ಅನಂತಕೃಷ್ಣ ಭಾಗವತ್ ಉಪಸ್ಥಿರಿದ್ದರು.


Spread the love