2 ವರ್ಷಗಳಿಂದ ವಿದೇಶದಲ್ಲಿ ಅಡಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿ ಬಂಧನ
ಮಂಗಳೂರು: 2021ರಲ್ಲಿ ಉರ್ವಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿ ಇಬ್ಬರು ವರ್ಷಗಳ ಬಳಿಕ ಕತಾರ್ನಿಂದ ಮಂಗಳೂರಿಗೆ ಬಂದ ಕ್ಷಣದಲ್ಲೇ ಬಂಧಿತನಾಗಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ, ಮೊಹಮ್ಮದ್ ಸಿನಾನ್ (24), ತಂದೆ: ಮೊಹಮ್ಮದ್ ಸಲೀಂ, ವಾಸ: ಯಾಸಿನ್ ಕಂಪೌಂಡ್, ಕುದ್ರೋಳಿ, ಮಂಗಳೂರು, ಇವರ ವಿರುದ್ಧ 2021ರಲ್ಲಿ Urwa PS Cr. No. 07/2021 ಅಡಿ IPC ಸೆಕ್ಷನ್ಗಳು 143, 147, 148, 301, 323, 324, 307, 504, 506 r/w 149 ಅನ್ವಯ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.
ಆದರೆ, ಆರೋಪಿ ಮೊಹಮ್ಮದ್ ಸಿನಾನ್ ಕಳೆದ ಎರಡು ವರ್ಷಗಳಿಂದ ಘನ ನ್ಯಾಯಾಲಯಕ್ಕೆ ಹಾಜರಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರಿಂದ, ನ್ಯಾಯಾಲಯವು ಅವನ ವಿರುದ್ಧ ವಾರೆಂಟ್ ಹೊರಡಿಸಿತ್ತು. ನಂತರ, ವಾರೆಂಟ್ ಜಾರಿಗೆ ತರಲು ಭಾರತ ಸರ್ಕಾರದ ಇಮಿಗ್ರೇಶನ್ ಬ್ಯೂರೋ (Bureau of Immigration, New Delhi) ಮೂಲಕ ಲುಕ್ ಔಟ್ ಸರ್ಕ್ಯುಲರ್ (LOC) ತೆರೆಯಲಾಗಿತ್ತು.
ದಿನಾಂಕ 08.10.2025 ರಂದು ಕತಾರ್ನಿಂದ ಮಂಗಳೂರಿಗೆ ವಿಮಾನ ಮುಖೇನ ಬಂದಾಗ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಶನ್ ಅಧಿಕಾರಿಗಳು ಸಿನಾನ್ರನ್ನು ವಶಕ್ಕೆ ಪಡೆದು ಉರ್ವಾ ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು.
ನಂತರ ಪೊಲೀಸರು ಆರೋಪಿಯನ್ನು ಇದೇ ದಿನ ರಾತ್ರಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಅದೇ ದಿನ, ನ್ಯಾಯಾಲಯದ ಜಾಮೀನು ಷರತ್ತು ಉಲ್ಲಂಘಿಸಿ ಕಲಾಪಗಳಿಗೆ ಹಾಜರಾಗದ ಹಿನ್ನೆಲೆಯಲ್ಲಿ, ಉರ್ವಾ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 100/2025, ಕಲಂ 269 (BNS) ಅಡಿ ಹೊಸ ಪ್ರಕರಣವನ್ನು ದಾಖಲಿಸಲಾಗಿದೆ.