2018ರಿಂದ ಕಾಲೇಜು ವಿದ್ಯಾರ್ಥಿ ನಾಪತ್ತೆ – ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ

Spread the love

2018ರಿಂದ ಕಾಲೇಜು ವಿದ್ಯಾರ್ಥಿ ನಾಪತ್ತೆ – ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ

ಮಂಗಳೂರು: ಪಿ.ಎ ಕಾಲೇಜಿನ ವಿದ್ಯಾರ್ಥಿ ಒಬ್ಬರು 2018ರಿಂದ ನಾಪತ್ತೆಯಾಗಿರುವ ಪ್ರಕರಣದಲ್ಲಿ ಪೊಲೀಸರು ಸಾರ್ವಜನಿಕರಿಂದ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ದಿನಾಂಕ 18-04-2018 ರಂದು, ಉಳ್ಳಾಲ ತಾಲೂಕಿನ ಕೈರಂಗಳ ಗ್ರಾಮದ ಪಿ.ಎ ಕಾಲೇಜಿನ ಪ್ರಾಂಶುಪಾಲರಾದ ಅಬ್ದುಲ್ ಶರೀಪ್ (58) ಅವರು ಕೊಣಾಜೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿ ಮೊಹಮ್ಮದ್ ಶಾಮೀಲ್ (21), ತಂದೆ: ಸಲೀಂ ಕೆ.ಎಮ್, ನಿವಾಸ: ಬೈತುಲ್ ಆಯಿಶಾ, ಪಚ್ಚಕಾಡ್, ಕಾಸರಗೋಡು, ದಿನಾಂಕ 17-04-2018ರಂದು ಬೆಳಗ್ಗೆ 11:34ಕ್ಕೆ ಕಾಲೇಜಿನ ಪಾರ್ಕಿಂಗ್ ಪ್ರದೇಶಕ್ಕೆ ಬಂದು ಕಾಲೇಜಿನ ಒಳಗೆ ಪ್ರವೇಶಿಸದೆ ಹಾಗೂ ಮನೆಗೂ ಹೋಗದೆ ನಾಪತ್ತೆಯಾಗಿದ್ದಾನೆ.

ಇದೀಗಲೂ ಆತನ ಇರುವಿಕೆಯ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮೊ.ನಂ: 83/2018 ರಂತೆ “ಗಂಡಸು ಕಾಣೆ” ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಕಾಣೆಯಾದ ವ್ಯಕ್ತಿಯ ವಿವರಗಳು:
1️⃣ ಹೆಸರು: ಮೊಹಮ್ಮದ್ ಶಾಮೀಲ್
2️⃣ ಪ್ರಾಯ: 21 ವರ್ಷ
3️⃣ ಎತ್ತರ: 168 ಸೆಂ.ಮೀ
4️⃣ ಮೈಬಣ್ಣ: ಗೋಧಿ ಬಣ್ಣ
5️⃣ ಶರೀರ: ಸಾದರಣ, ಕೋಲುಮುಖ
6️⃣ ಧರಿಸಿದ್ದ ವಸ್ತ್ರ: ಕಪ್ಪು ಬಣ್ಣದ ಉಡುಪು
7️⃣ ವಿಶೇಷತೆ: ಕುರುಚಲು ಗಡ್ಡ, ಮೀಸೆ, ಉದ್ದ ತಲೆಕೂದಲು
8️⃣ ಮಾತನಾಡುವ ಭಾಷೆಗಳು: ಮಲಯಾಳಂ, ಇಂಗ್ಲಿಷ್, ಹಿಂದಿ

ಕಾಣೆಯಾದ ಮೊಹಮ್ಮದ್ ಶಾಮೀಲ್ ಪತ್ತೆಯಾದಲ್ಲಿ ಅಥವಾ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ, ದಯವಿಟ್ಟು ಪೊಲೀಸ್ ಆಯುಕ್ತರ ಕಚೇರಿ ಮಂಗಳೂರು ನಗರ ನಿಯಂತ್ರಣ ಕೊಠಡಿ (ದೂರವಾಣಿ: 0824-2220800) ಅಥವಾ ಕೊಣಾಜೆ ಪೊಲೀಸ್ ಠಾಣೆ (ದೂರವಾಣಿ: 0824-2220536, 9091873198, 9535247535) ಗೆ ತಕ್ಷಣ ಸಂಪರ್ಕಿಸಲು ಮನವಿ ಮಾಡಲಾಗಿದೆ.


Spread the love
Subscribe
Notify of

0 Comments
Inline Feedbacks
View all comments