24 ನೇ ವರ್ಷದ ಕೆಮ್ತೂರು ತುಳು ನಾಟಕ ಸ್ಪರ್ಧೆ: ಯೇಸ ಪ್ರಥಮ, ಮಾಯೋಕದ ಮಣ್ಣಕರ ದ್ವಿತೀಯ
ಉಡುಪಿ: ತುಳುಕೂಟ ಉಡುಪಿ(ರಿ). ಮತ್ತು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸಹಭಾಗಿತ್ವದಲ್ಲಿ ಉಡುಪಿ ಎಮ್.ಜಿ.ಎಮ್.ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ 24 ನೇ ವರ್ಷದ ಕೆಮ್ತೂರು ತುಳುನಾಟಕ ಸ್ಪರ್ಧೆಯಲ್ಲಿ ಪ್ರಥಮ ಶ್ರೇಷ್ಠ ನಾಟಕ ಪ್ರಶಸ್ತಿ ಯನ್ನು ಸುಮನಸಾ ಕೊಡವೂರು ತಂಡದ “ಯೇಸ” ನಾಟಕ ಪಡೆದುಕೊಂಡಿದೆ. ಸಂಗಮ ಕಲಾವಿದರು ಮಣಿಪಾಲ ತಂಡದ “ಮಾಯೊಕದ ಮಣ್ಣಕರ” ನಾಟಕ ದ್ವಿತೀಯ ಶ್ರೇಷ್ಠ ನಾಟಕ ಪ್ರಶಸ್ತಿ ಯನ್ನು ಪಡೆದುಕೊಂಡಿದೆ. ಮುಂಬಯಿಯ ರಂಗಮಿಲನ ತಂಡ ದ “ನಾಗ ಸಂಪಿಗೆ” ನಾಟಕ ತೃತೀಯ ಶ್ರೇಷ್ಠ ನಾಟಕ ಪ್ರಶಸ್ತಿ ಯನ್ನು ಪಡೆದುಕೊಂಡಿದೆ.
ಸುಮನಸಾ ಕೊಡವೂರು ತಂಡದ “ಯೇಸ” ನಾಟಕ
ಶ್ರೇಷ್ಠ ನಿರ್ದೇಶನದಲ್ಲಿ ಸುಮನಸಾ ಕೊಡವೂರು ತಂಡದ ಯೇಸ ನಾಟಕದ ನಿರ್ದೇಶಕ ವಿದ್ದು ಉಚ್ಚಿಲ್ ಇವರಿಗೆ ಪ್ರಥಮ, ಸಂಗಮ ಕಲಾವಿದರು ಮಣಿಪಾಲ ತಂಡದ ಮಾಯಕೊದ ಮಣ್ಣಕರ ನಾಟಕದ ನಿರ್ದೇಶಕ ರಮೇಶ್ ಕೆ ಬೆಣಕಲ್ ಇವರಿಗೆ ದ್ವಿತೀಯ ಮತ್ತು ಮುಂಬಯಿ ರಂಗಮಿಲನ ತಂಡದ ನಾಗಸಂಪಿಗೆ ನಾಟಕದ ನಿರ್ದೇಶಕ ಮನೋಹರ್ ಶೆಟ್ಟಿ ನಂದಳಿಕೆ ಇವರಿಗೆ ತೃತೀಯ ಸ್ಥಾನ ಲಭಿಸಿದೆ.
ಶ್ರೇಷ್ಠ ರಂಗಪರಿಕರ/ಪ್ರಸಾದನದಲ್ಲಿ ಸಂಗಮ ಕಲಾವಿದೆರ್ ಮಣಿಪಾಲ (ರಿ) ಪ್ರಥಮ,ಸುಮನಸಾ ಕೊಡವೂರು(ರಿ). ಉಡುಪಿ ದ್ವಿತೀಯ, ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ತೃತೀಯ ಸ್ಥಾನ ಪಡೆದಿದೆ.

ಸಂಗಮ ಕಲಾವಿದರು ಮಣಿಪಾಲ ತಂಡದ “ಮಾಯೊಕದ ಮಣ್ಣಕರ” ನಾಟಕ
ಶ್ರೇಷ್ಠ ಬೆಳಕಿನಲ್ಲಿ ಯೇಸ ನಾಟಕದ ನಿಖಿಲ್ ಮೈಂದನ್ ಪ್ರಥಮ, ನೆಲ ನೀರ್‌ದ ದುನಿಪು ನಾಟಕದ ಪ್ರಥ್ವಿನ್ ಕೆ ಉಡುಪಿ ದ್ವಿತೀಯ, ನಾಗ ಸಂಪಿಗೆ ನಾಟಕದ ನಿತಿನ್ ಪೆರಂಪಳ್ಳಿ ತೃತೀಯ ಸ್ಥಾನಿಯಾಗಿದ್ದಾರೆ.ಶ್ರೇಷ್ಠ ಸಂಗೀತದಲ್ಲಿ ಯೇಸ ನಾಟಕದ ಶೋಧನ್ ಎರ್ಮಾಳ್ ಪ್ರಥಮ, ಮಾಯೊಕದ ಮಣ್ಣಕರ ನಾಟಕದ ಶುಭಕರ ಪುತ್ತೂರು ದ್ವಿತೀಯ ಸ್ಥಾನ, ನಾಗ ಸಂಪಿಗೆ ನಾಟಕದ ದಿವಾಕರ್ ಕಟೀಲ್ ತೃತೀಯ ಸ್ಥಾನ ಪಡೆದಿದ್ದಾರೆ.
ಶ್ರೇಷ್ಠ ನಟರಾಗಿ ಮಾಯೊಕದ ಮಣ್ಣಕರ ನಾಟಕದ ‘ಅಡ್ಕ ಪಾತ್ರಧಾರಿ ಸಂತೋಷ್ ಶೆಟ್ಟಿ ಹಿರಿಯಡ್ಕ ಪ್ರಥಮ,ಮುಗಿಯಂದಿ ಕಥೆ ನಾಟಕದ ವಿಜಯ ಪಾತ್ರಧಾರಿ
ಮಂಜುನಾಥ್ ಆಚಾರ್ಯ ಕುಂಜೂರು ದ್ವಿತೀಯ,ಯೇಸ ನಾಟಕದ ಸಜ್ಜನ ಹೇಮಂತ್ ಪಾತ್ರಧಾರಿ ಕಿರಣ್ ಭಟ್ ತೃತೀಯ ಸ್ಥಾನ ಪಡೆದಿದ್ದಾರೆ.
ಶ್ರೇಷ್ಠ ನಟಿಯಾಗಿ ಯೇಸ ನಾಟಕದ ಸತ್ಯಶ್ರೀ ಪಾತ್ರಧಾರಿಣಿ ಸೌಭಾಗ್ಯ ಲಕ್ಷ್ಮೀ ಪ್ರಥಮ, ಮಗಿಯಂದಿ ಕಥೆ ನಾಟಕದ ಕುಸುಮಾ ಪಾತ್ರಧಾರಿಣಿ ಕುಸುಮಾ ಕಾಮತ್ ಕರ್ವಾಲ್ ದ್ವಿತೀಯ,ಮಯೊಕದ ಮಣ್ಣಕರ ನಾಟಕದ ಮುಡ್ಕ ಪಾತ್ರಧಾರಿಣಿ ವೈಷ್ಣವಿ ಭಂಡಾರ್ಕರ್ ತೃತೀಯ ಸ್ಥಾನ ಪಡೆದಿದ್ದಾರೆ.
ತೀರ್ಪುಗಾರರ ಮೆಚ್ಚುಗೆ ಪಡೆದ ನಟ/ನಟಿಯರು/: ದಿನೇಶ್ ಅಮೀನ್ ಕದಿಕೆ ಪಿಲಿ ನಾಟಕದ ಮಾರ + ಅಜೈರ್ ಪಾತ್ರಧಾರಿ,ಕಾಶೀತೀರ್ಥ ನಾಟಕದ MLA ಭರತ್ ರಾಜ್ ಪಾತ್ರಧಾರಿ ಶಿವಪ್ಪ ಬಿರುವ ಗುರುವಾಯನಕೆರೆ,ನಾಗಸಂಪಿಗೆ ನಾಟಕದ ಕಾಳಿಂಗ ಪಾತ್ರಧಾರಿ ಸಚಿನ್ ಬಿವಂಡಿ,ನೆಲ ನೀರದ್ ದುನಿಪು ನಾಟಕದ ಚೋಮ ಪಾತ್ರಧಾರಿ ಅನಿಲ್ ಕುಮಾರ್ ಶಂಕರಪುರ,ಯೇಸ ನಾಟಕದ ಹೇಮಂತ್ ಪಾತ್ರಧಾರಿ ಕಾರ್ತಿಕ್ ಪ್ರಭು, ಮಾಯೊಕದ ಮಣ್ಣಕರ ನಾಟಕದ ಕೇಶವ ಆಚಾರ್ಯ, ಕಿಡ್ನಾಪರ್ಸ, ಡಾನ್ಸರ್ಸ್ ರೈತ, ಪೊಲಿಟಿಷಿಯನ್, ಬಾರ್ ಕುಡ್ಕ, ಕಾನ್ಸಬಲ್ ಪಾತ್ರಧಾರಿ ಭುವನ್ ಮಣಿಪಾಲ್,ನಾಗಸಂಪಿಗೆ ನಾಟಕದ ಸಂಪಿಗೆ ಪಾತ್ರಧಾರಿಣಿ ದೀಕ್ಷಾ ದೇವಾಡಿಗ,ಮುಗಿಯಂದೆ ನಾಟಕದ ಚಂದ್ರ ಪಾತ್ರಧಾರಿಣಿ ಚಂದ್ರಕಲಾ ರಾವ್ ಕದಿಕೆ, ಯೇಸ ನಾಟಕದ ರೋಜಿ ಪಾತ್ರಧಾರಿಣಿ ವಸುಪ್ರದ, ಮಾಯೊಕದ ಮಣ್ಣಕರ ನಾಟಕದ ತಿಮ್ಮ,ತಿಮ್ಮದೇವ, ಕಾಗೆ ಪಾತ್ರಧಾರಿಣಿ ನಮ್ರತಾ,
ತೀರ್ಪುಗಾರರ ಮೆಚ್ಚುಗೆ ಪಡೆದ ಬಾಲನಟ/ನಟಿಯರು : ಪಿಲಿ ನಾಟಕದ ಸುಬ್ಬು ಪಾತ್ರಧಾರಿ ಪ್ರಣವ್ ಆಚಾರ್ಯ,ಪಿಲಿ ನಾಟಕದ ನೀಲಾ ಪಾತ್ರಧಾರಿಣಿ ಪ್ರಾಪ್ತಿ ಆಚಾರ್ಯ,ಯೇಸ ನಾಟಕದ ಹೋರಾಟಗಾರ ಮೃಣಾಲ್ ಪ್ರಕಾಶ್,ಮಾಯೊಕದ ಮಣ್ಣಕರ ನಾಟಕದ ನಾಯಿ ಪಾತ್ರಧಾರಿ ವಿಶಾಂತ್, ಇವರುಗಳು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಮುಂಬಯಿಯ ರಂಗಮಿಲನ ತಂಡ ದ “ನಾಗ ಸಂಪಿಗೆ” ನಾಟಕ
24ನೇ ವರ್ಷದ ಕೆಮ್ತೂರು ತುಳುನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಖ್ಯಾತ ರಂಗಕರ್ಮಿಗಳಾದ ಶ್ರೀಯುತ ಮೋಹನ್ ಶೆಣಿ, ಶ್ರೀಯುತ ಗಂಗಾಧರ ಪಣಿಯೂರು, ಡಾ. ಸುಕನ್ಯ ಮೇರಿ ಮಾರ್ಟಿಸ್ ಇವರು ಸಹಕರಿಸಿದ್ದರು.
ನಾಟಕ ಸ್ಪರ್ಧೆಯ ಪ್ರಶಸ್ತಿ ಪ್ರಧಾನ ಸಮಾರಂಭವು ಫೆಬ್ರವರಿ 8, 2026 ರಂದು ಉಡುಪಿ ಎಮ್. ಜಿ. ಎಮ್. ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಲಿರುವುದು. ಅಂದು ಪ್ರಥಮ ಪ್ರಶಸ್ತಿ ವಿಜೇತ ನಾಟಕದ ಮರುಪ್ರದರ್ಶನ ನಡೆಯಲಿದೆ ಎಂದುತುಳುಕೂಟ ಉಡುಪಿ(ರಿ). ಇದರ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಕಾರ್ಯದರ್ಶಿ ಶ್ರೀ ಗಂಗಾಧರ ಕಿದಿಯೂರು, ಕೆಸ್ತೂರು ನಾಟಕ ಸ್ಪರ್ಧೆಯ ಸಂಚಾಲಕರಾದ ಶ್ರೀ ಬಿ. ಪ್ರಭಾಕರ ಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












