30 ದಿನಗಳ ಒಳಗೆ ಪ್ರಮೋದ್ ನನ್ನ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲಿ; ಅಬ್ರಹಾಂ

Spread the love

30 ದಿನಗಳ ಒಳಗೆ ಪ್ರಮೋದ್ ನನ್ನ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲಿ; ಅಬ್ರಹಾಂ

ಉಡುಪಿ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ನನಗೆ ಕಳುಹಿಸಿರುವ ಲೀಗಲ್ ನೋಟಿಸನ್ನು ನಾನು ಸ್ವಾಗತಿಸುತ್ತೇನೆ ಹೀಗಂದವರು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ. ಈ ಮೂಲಕ ಅವರು 10 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆಯನ್ನು ಸ್ವಾಗತಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನೋಟಿಸ್ ನೋಡಿ ನನಗೆ ಬಹಳ ಸಂತೋಷವಾಗಿದೆ. ನಾನು 30 ದಿನದ ಗಡುವು ಕೊಡುತ್ತೇನೆ. ನನ್ನ ವಿರುದ್ದ ಮಧ್ವರಾಜ್ ಕೋರ್ಟಿನಲ್ಲಿ ಕೇಸು ದಾಖಲು ಮಾಡಲಿ,” ಎಂದು ಸವಾಲು ಹಾಕಿದರು.

ಮಧ್ವರಾಜ್ ಬ್ಯಾಂಕಿಗೆ ಮಾಡಿರುವ ವಂಚನೆಯ ಎಲ್ಲಾ ದಾಖಲೆ ಕೋರ್ಟಿಗೆ ಸಲ್ಲಿಸಿ ಕೋರ್ಟಿಗೆ ಎಳೆಯುತ್ತೇನೆ ಎಂದು ಹೇಳಿದ ಅವರು, “ಆಗ ಪ್ರತಿಯೊಂದು ದಾಖಲೆಯೂ ಹೊರಗೆ ಬರುತ್ತದೆ,” ಎಂದು ಅವರು ಕಿಡಿಕಾರಿದರು.

30 ದಿನದಲ್ಲಿ ಮಧ್ವರಾಜ್ ನಾನು ಹೇಳಿರುವುದೆಲ್ಲ ಸುಳ್ಳು ಎಂದು ಸಾಬೀತುಪಡಿಸದಿದ್ದರೆ ನಾನೇ ಮಧ್ವರಾಜ್ ವಿರುದ್ದ ಕೇಸು ದಾಖಲು ಮಾಡುತ್ತೇನೆ ಎಂದು ಅವರು ತಿಳಿಸಿದರು. ಆದಷ್ಟು ಬೇಗ ಮಾನನಷ್ಟ ಮೊಕದ್ದಮೆ ದಾಖಲು ಮಾಡಿ ಎಂದು ಮಧ್ವರಾಜ್ ಗೆ ಮನವಿ ಮಾಡಿದ ಅವರು ಪ್ರಮೋದ್ ಮಧ್ವರಾಜ್ ಲೋಕಾಯುಕ್ತರಿಗೆ ಸಲ್ಲಿಸಿದ ದಾಖಲೆಯಲ್ಲಿ 40 ಕೋಟಿ ರೂಪಾಯಿಯ ದಾಖಲೆ ಮಾತ್ರ ತೋರಿಸಿದ್ದಾರೆ ಎಂದು ಅರೋಪಿಸಿದರು. ಸಚಿವ ಮಧ್ವರಾಜ್ ನನಗೆ 3ದಿನ ಗಡುವು ಕೊಟ್ಟಿದ್ದರು. ನಾನು ಎರಡನೇ ದಿನಕ್ಕೆ ಉಡುಪಿಗೆ ಬಂದಿದ್ದೇನೆ. ನನ್ನ ವಿರುದ್ದ 10 ಕೋಟಿ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿದ್ದಾರೆ.

ನಾನು ನನ್ನ ಹೇಳಿಕೆ ಹಿಂಪಡೆಯುವ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಸಚಿವ ಮದ್ವರಾಜ್ 1.10 ಕೋಟಿ ಆಸ್ತಿ ಅಡವಿಟ್ಟು 193 ಕೋಟಿ ಸಾಲ ಪಡೆದಿದ್ದಾರೆ ಎಂದು ಹೇಳಿದ ಅವರು, ಸಚಿವ ಮಧ್ವರಾಜ್ ಮಾಡಿರೋದು ದೊಡ್ಡ ವಂಚನೆ ಎಂದು ಆಕ್ರೋಶ ವ್ಯಕ್ತಪಡಿಸಿದರು


Spread the love

1 Comment

  1. Pamma is in double trouble. On one side Ramesh Shetty is contesting. On another, Udipi Swamy. On top of this, this development. Udipi people, a age age dekhiye, hota hai kya.

Comments are closed.