ಪರ್ಯಾಯ: ಶ್ರೀ ಕೃಷ್ಣ ಗ್ರೂಪ್ ಆಫ್ ಡ್ಯಾನ್ ವತಿಯಿಂದ ಸಾಂಸ್ಕೃತಿಕ ಕಲಾ ಸಂಜೆ ವೈಭವ

Spread the love

ಪರ್ಯಾಯ: ಶ್ರೀ ಕೃಷ್ಣ ಗ್ರೂಪ್ ಆಫ್ ಡ್ಯಾನ್ ವತಿಯಿಂದ ಸಾಂಸ್ಕೃತಿಕ ಕಲಾ ಸಂಜೆ ವೈಭವ

ಉಡುಪಿ: ಶೀರೂರು ಪರ್ಯಾಯ ಮಹೋತ್ಸವದ ಪ್ರಯುಕ್ತ ಕಿನ್ನಿಮೂಲ್ಕಿ ಶ್ರೀ ಕೃಷ್ಣ ಗ್ರೂಪ್ ಆಫ್ ಡ್ಯಾನ್ಸ್ ವತಿಯಿಂದ ಕಿನ್ನಿಮೂಲ್ಕಿ ಜಂಕ್ಷನ್ ಬಳಿ ರಸಮಂಜರಿ, ನೃತ್ಯ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮನ್ನು ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ಉದ್ಘಾಟಿಸಿ ನಮ್ಮ ಧಾರ್ಮಿಕ ನಂಬಿಕೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸುವ ಮೂಲಕ ಹಿಂದಿನಿಂದಲೂ ನಡೆದು ಬಂದ ಸಂಸ್ಕಾರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜತೆಗೆ ಮುಂದಿನ ಪೀಳಿಗೆಗೆ ರವಾನಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ|ಕೃಷ್ಣಪ್ರಸಾದ್ ಕೂಡ್ಲು ವಹಿಸಿದ್ದರು.

ಶಾಲೆಗಳಿಗೆ ಸ್ಪೋರ್ಟ್ಸ್ ಕಿಟ್ ಅನ್ನು ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಆಟೋರಿಕ್ಷಾ ಚಾಲಕರಿಗೆ ವಿಮೆಯನ್ನು ಮಾಜಿ ಸಂಸದ ಕೆ ಜಯಪ್ರಕಾಶ್ ಹೆಗ್ಡೆ, ಅಂಗನವಾಡಿಗಳಿಗೆ ಕುಕ್ಕರ್ ಗಳನ್ನು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಆರೋಗ್ಯ ನಿಧಿಯನ್ನು ಬಡಗಬೆಟ್ಟು ಸೊಸೈಟಿಯ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ವಿತರಿಸಿದರು.

ಕಾರ್ಯಕ್ರಮದಲ್ಲಿ ಗಣ್ಯರಾದ ರಾಮಪ್ರಸಾದ್ ಬೆಂಗಳೂರು, ತಲ್ಲೂರು ಶಿವರಾಮ್ ಶೆಟ್ಟಿ, ರವಿ ಶೆಟ್ಟಿ, ರಮೇಶ್ ಕಾಂಚನ್, ನಾಗರಾಜ್ ಸುವರ್ಣ, ಮಹಾಬಲ ಸಾಲ್ಯಾನ್, ರೋನಾಲ್ಡ್ ಪ್ರವೀಣ್ ಕುಮಾರ್, ಸೃಜನ್ ಶೆಟ್ಟಿ, ಹರಿಪ್ರಸಾದ್ ರೈ, ನಗರ ಸಭೆಯ ಮಾಜಿ ಸದಸ್ಯೆ ಅಮೃತಾ ಕೃಷ್ಣ ಮೂರ್ತಿ, ಹರೀಶ್, ಪ್ರಶಾಂತ್ ಆಚಾರ್ಯ, ಚಿತ್ರ ನಟ ನಟಿಯರಾದ ಡಾ|ರಾಜ್ ಕುಮಾರ್ ಪುತ್ರಿ ಪೂರ್ಣಿಮಾ, ಶೈನ್ ಶೆಟ್ಟಿ, ಕೃತಿ ಬಿ ಶೆಟ್ಟಿ, ಕಾಜಲ್ ಕುಂದರ್, ಸಂಚಿತ್ ಸಂಜೀವ್, ಜೆಪಿ ತುಮಿನಾಡು ಮೊದಲಾದವರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದ ಸಾಧಕರಾದ ಪದ್ಮಶ್ರೀ ಡಾ|ಚಂದ್ರಶೇಖರ್ ವಿ ಎಸ್, ಸತೀಶ್ ಸುವರ್ಣ ಪಂದುಬೆಟ್ಟು, ಡಾ|ಜಯಂತ್ ಭಟ್ ಮಣೋಳಿಗುಜ್ಜಿ, ರಕ್ಷಿತ್ (ಮುನ್ನ) ಮಲ್ಪೆ, ಕಮಲಾ ಪೂಜಾರಿ, ವನಜಾ ಪೂಜಾರಿ, ಸೋಜಾ ಅಡ್ಕರ್ ಸುಳ್ಯ, ಮೋಹಿತ್ ಅವರನ್ನು ಸನ್ಮಾನಿಸಲಾಯಿತು.

100ಕ್ಕೂ ಅಧಿಕ ಅಂಗನವಾಡಿಗಳಿಗೆ ಕುಕ್ಕರ್, 100 ಶಾಲೆಗಳಿಗೆ ಫ್ಯಾನ್, 100 ಶಾಲೆಗಳಿಗೆ ಸ್ಪೋರ್ಟ್ಸ್ ಕಿಟ್, ರಿಕ್ಷಾ ಚಾಲಕರಿಗೆ ವಿಮೆಯನ್ನು ವಿತರಿಸಲಾಯಿತು.

ಸಭಾ ಕಾರ್ಯಕ್ರಮದ ಬಳಿಕ ಗಿಟಾರ್ ವಾದಕ ರಾಜ್ ಗೋಪಾಲ್ ನೇತೃತ್ವದಲ್ಲಿ ಝೀ ಟಿವಿ ಸರಿಗಮಪ ಹಾಗೂ ಕಲರ್ಸ್ ವಾಹಿನಿಯ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋ ಗಾಯಕರನ್ನು ಒಳಗೊಂಟ ತಾರೆಯರ ರಸಮಂಜರಿ , ನೃತ್ಯ ಪ್ರಸ್ತುಗೊಂಡಿತು.

ಶ್ರೀ ಕೃಷ್ಣ ಗ್ರೂಪ್ ಆಫ್ ಡ್ಯಾನ್ಸ್ ನ ಸಂಸ್ಥಾಪಕ ಅಧ್ಯಕ್ಷ ಕೆ ಕೃಷ್ಣಮೂರ್ತಿ ಆಚಾರ್ಯ ಸ್ವಾಗತಿಸಿ ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.


Spread the love
Subscribe
Notify of

0 Comments
Inline Feedbacks
View all comments