Spread the love
ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕರಾಗಿ ಅಂಕಿತ್ ಶೆಟ್ಟಿ ಆಯ್ಕೆ
ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಘಟಕ ಉಡುಪಿ ಪತ್ರಿಕಾ ಭವನ ಸಮಿತಿಯ 2025–28ನೇ ಸಾಲಿನ ನೂತನ ಸಂಚಾಲಕರಾಗಿ ಚಾನೆಲ್ 9 ವಾಹಿನಿಯ ಅಂಕಿತ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿರುವ ವಾರ್ತಾಧಿಕಾರಿ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಸಹ ಸಂಚಾಲಕರಾಗಿ ಉದಯವಾಣಿಯ ಗಣೇಶ್ ಕಲ್ಯಾಣಪುರ, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ನಮ್ಮ ಟಿವಿಯ ರಾಜೇಶ್ ಶೆಟ್ಟಿ, ಉದಯವಾಣಿಯ ರಾಜು ಖಾರ್ವಿ, ಪುನೀತ್ ಸಾಲ್ಯಾನ್, ಎಸ್.ಜಿ. ನಾಯ್ಕ್, ರಿಪಬ್ಲಿಕ್ ಚಾನೆಲ್ನ ಹರೀಶ್ ಪಿ., ವಿಜಯವಾಣಿ ಪತ್ರಿಕೆಯ ಗೋಪಾಲಕೃಷ್ಣ ಪಾದೂರು, ಸ್ಪಂದನಾ ಟಿವಿಯ ನಾಗರಾಜ್ ರಾವ್, ಮಂಗಳೂರಿಯನ್ ಡಾಟ್ ಕಾಮ್ನ ಮೈಕಲ್ ರೋಡ್ರಿಗಸ್, ಅಭಿಮತ ಟಿವಿಯ ನಿತೀಶ್ ಮಂಚಿ ಹಾಗೂ ಪ್ರಜಾ ಟಿವಿಯ ಜಯಂತ್ ಎ. ಅವಿರೋಧವಾಗಿ ಆಯ್ಕೆಯಾದರು.
Spread the love













