ಬಡಗಬೆಟ್ಟು ಗ್ರಾಮದಲ್ಲಿ ನಿಷೇಧಾಜ್ಞೆ ಉಲ್ಲಂಘನೆ ಸಂಸದ ಶಾಸಕರು ಸೇರಿದಂತೆ ಹಲವರ ವಿರುದ್ದ ಪ್ರಕರಣ ದಾಖಲು

Spread the love

ಬಡಗಬೆಟ್ಟು ಗ್ರಾಮದಲ್ಲಿ ನಿಷೇಧಾಜ್ಞೆ ಉಲ್ಲಂಘನೆ ಸಂಸದ ಶಾಸಕರು ಸೇರಿದಂತೆ ಹಲವರ ವಿರುದ್ದ ಪ್ರಕರಣ ದಾಖಲು

ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ, 80 ಬಡಗಬೆಟ್ಟು ಗ್ರಾಮದ ಸ.ನಂ 11/1 ರಲ್ಲಿ 6.30 ಎಕ್ರೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಮೀನಿನಲ್ಲಿ ಉಡುಪಿ ಕಂಬಳ ಕೆರೆ ಶಂಕುಸ್ಥಾಪನೆ ವಿಚಾರದಲ್ಲಿ ಗೊಂದಲವಿದ್ದು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಫೆಬ್ರವರಿ 28 ರಂದು ಬೆಳಿಗ್ಗೆ 06.00 ಗಂಟೆಯಿಂದ ರಾತ್ರಿ 10.00 ಗಂಟೆವರೆಗೆ 80 ಬಡಗಬೆಟ್ಟು ಗ್ರಾಮ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ  ಜಿಲ್ಲಾಧಿಕಾರಿ ಆದೇಶವನ್ನು ಉಲ್ಲಂಘಿಸಿದ ಕಾರಣಕ್ಕಾಗಿ 7 ಮಂದಿ ಶಾಸಕರು, ಸಂಸದರು ಸೇರಿದಂತೆ 38 ಮಂದಿ ಸೇರಿದಂತೆ ಹಲವರ ವಿರುದ್ದ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ತಹಶೀಲ್ದಾರ್ ಗುರುರಾಜ್ ನೀಡಿದ ದೂರಿನಂತೆ ನಿಷೇಧಾಜ್ಞೆ ಉಲ್ಲಂಘಿಸಿದ   ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ್ ಸುವರ್ಣ, ಸುನಿಲ್ ಕುಮಾರ್, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಹರೀಶ್ ಪೂಂಜಾ,  ರಾಜೇಶ್ ನಾಯಕ್, ಪರಿಷತ್ ಸದಸ್ಯ ಧನಂಜಯ ಸರ್ಜಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಸಭೆಯಲ್ಲಿ ಭಾಗವಹಿಸಿದ ಇತರ ವ್ಯಕ್ತಿಗಳಾದ  ಮಟ್ಟಾರು ರತ್ನಾಕರ ಹೆಗ್ಡೆ,  ಶಿಲ್ಪಾ ಸುವರ್ಣ ಕಾಪು, ಗೀತಾಂಜಲಿ ಸುವರ್ಣ ಕಟಪಾಡಿ, ನಂದಳಿಕೆ ಶ್ರೀಕಾಂತ್‌ ಭಟ್‌, ಶುಭಕರ ಶೆಟ್ಟಿ 80 ಬಡಗಬೆಟ್ಟು ಗ್ರಾಮ,.ಸಂದೀಪ್‌ ಶೆಟ್ಟಿ 80 ಬಡಗಬೆಟ್ಟು ಗ್ರಾಮ, ಜಿಯಾನಂದ ಹೆಗ್ಡೆ ಬೈರಂಪಳ್ಳಿ, ವೀಣಾ ಶೆಟ್ಟಿ ಉಡುಪಿ, ಸಾಯಿಶ ಸುಧಾಕರ ಶೆಟ್ಟಿ ಪೆರ್ಡೂರು, ಬೆಳಪು ದೇವಿಪ್ರಸಾದ್‌ ಶೆಟ್ಟಿ, ಕುತ್ಯಾರು ನವೀನ್‌ ಶೆಟ್ಟಿ, ಶ್ರೀನಿಧಿ ಹೆಗ್ಡೆ ಉಡುಪಿ, ಹರಿಕೃಷ್ಣ ಬಂಟ್ವಾಳ, ರವೀಂದ್ರ ಮಡಿವಾಳ್‌ ಕಾರ್ಕಳ, ಅಂತೋನಿ ಡಿಸೋಜಾ ನಕ್ರೆ, ವಿಜಯ್‌ ಕುಮಾರ್‌ ಕಂಗಿನ ಮನೆ ಹೊಸ್ಮಾರ್‌ ಶ್ಯಾಮಲಾ ಕುಂದರ್‌ ಹಿರಿಯಡ್ಕ, ಲೋಕೇಶ್‌ ಶೆಟ್ಟಿ ಕಾರ್ಕಳ, ಮೋಹನ್‌ ಭಟ್‌ ಹಿರಿಯಡ್ಕ, ದಿಲ್ಲೇಶ್‌ ಶೆಟ್ಟಿ ಕುಕ್ಕೆಹಳ್ಳಿ, ಶಾಂತಾರಾಮ ಶೆಟ್ಟಿ ರಾಜೀವನಗರ, ರವೀಂದ್ರ ನಾಯ್ಕ ಕುಕ್ಕುದಕಟ್ಟೆ 80 ಬಡಗಬೆಟ್ಟು ಗ್ರಾಮ,  ಗೋಪಾಲ ಕೃಷ್ಣ ಮಟ್ಟು, ಸುಭಾಷ್‌ ಬಲ್ಲಾಳ್‌ ಕಟಪಾಡಿ ಶಿವಪುನಾರ್‌ ಹಿರೇಬೆಟ್ಟು, ಸ್ಥಳೀಯ ಕಾರ್ಯಕರ್ತರು, ಮೋಹನ್‌ ಶೆಟ್ಟಿ ಕಬ್ಯಾಡಿ, ಕೃಷ್ಣ ಕುಲಾಲ್‌ ವರ್ವಾಡಿ ಹಾಗೂ ಇತರರ ವಿರುದ್ದ 189(2), 191(2), 329(3), 190 BNS  and 37, 109 KP Act ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಕಂಬಳವನ್ನು ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಸಲು ನಿರ್ಧರಿಸಲಾಗಿದ್ದು ಮಾರ್ಚ್ 4 ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕಂಬಳ ಕೆರೆಗೆ ಶಂಕುಸ್ಥಾಪನೆ ಆಯೋಜಿಸಿದ್ದು ಇದಕ್ಕೂ ಮುನ್ನ ಕಂಬಳ ಸಮಿತಿಯ ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಫೆಬ್ರವರಿ 28 ಶಂಕುಸ್ಥಾಪನೆ ಆಯೋಜಿಸಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ಇದಕ್ಕಾಗಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸ್ವರೂಪಾ ಟಿ ಕೆ ಅವರು ಫೆಬ್ರವರಿ 28 ರಂದು ಬೆಳಿಗ್ಗೆ 06.00 ಗಂಟೆಯಿಂದ ರಾತ್ರಿ 10.00 ಗಂಟೆವರೆಗೆ 80 ಬಡಗಬೆಟ್ಟು ಗ್ರಾಮ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಕಾಪು ಶಾಸಕರ ನೇತೃತ್ವದಲ್ಲಿ ಶನಿವಾರ ಶಂಕು ಸ್ಥಾಪನೆ ನೆರವೇರಿಸಿದ್ದು ದಕ ಮತ್ತು ಉಡುಪಿ ಜಿಲ್ಲೆಯ 7 ಶಾಸಕರು, ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರು ಸೇರಿದಂತೆ ಹಲವರು ಭಾಗವಹಿಸಿದ್ದು ನಿಷೇಧಾಜ್ಞೆ ಉಲ್ಲಂಘನೆ ಆರೋಪದಡಿ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments