ಕೊಡವೂರು ದೇವಸ್ಥಾನದಲ್ಲಿ ಮಹಾರುದ್ರಯಾಗದ ಪೂರ್ವ ಭಾವಿಯಾಗಿ ಚಪ್ಪರ ಮುಹೂರ್ತ

Spread the love

ಕೊಡವೂರು ದೇವಸ್ಥಾನದಲ್ಲಿ ಮಹಾರುದ್ರಯಾಗದ ಪೂರ್ವ ಭಾವಿಯಾಗಿ ಚಪ್ಪರ ಮುಹೂರ್ತ

ಮಲ್ಪೆ: ಇಲ್ಲಿನ ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ, ನಾಡಿನ ಜನರ ಸುಭೀಕ್ಷೆಗಾಗಿ ಮೇ 14ರಿಂದ 19ರವರೆಗೆ ಮಹಾ ರುದ್ರಯಾಗದ ಪೂರ್ವಭಾವಿಯಾಗಿ ರವಿವಾರ ಚಪ್ಪರ ಮುಹೂರ್ತ ಕಾರ್ಯಕ್ರಮ ಜರಗಿತು.

ದೇವಸ್ಥಾನದ ಪ್ರಧಾನ ಅರ್ಚಕ ಸೀತಾರಾಮ ಆಚಾರ್ಯ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧವಿಧಾನಗಳು ನಡೆಯಿತು.

ಮಹಾ ರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್ರಾಜ್ ಕಾಂಚನ್ ಮಹಾರುದ್ರ ಯಾಗವನ್ನು ನಾಡ ಹಬ್ಬದಂತೆ ಆಚರಿಸಲು ನಿರ್ಧರಿಸಿದ್ದೇವೆ. ವಿವಿಧ ಧಾರ್ಮಿಕ, ಮನರಂಜನೆ, ಕ್ರೀಡೋತ್ಸವ, ಆರೋಗ್ಯ ಶಿಬಿರ, ಉದ್ಯೋಗ ಮೇಳಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮೇ 10ರಿಂದ 20ರವರೆಗೆ ಮನರಂಜನೆಗಾಗಿ ಜಾಯಿಂಟ್ ವಿಲ್, ಬೃಹತ್ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. 14ರಂದು ಮಲ್ಪೆಯಿಂದ ಕೊಡವೂರು ಮಹತೋಭಾರ ಶಂಕರನಾರಯಣ ದೇವಸ್ಥಾನದವರೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. 15 ರಂದು ಮಹಾರುದ್ರ ಯಾಗ, ಗಣ ಯಾಗ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿದೆ. ಅಂದು ಸಂಜೆ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು. 4

16ರಂದು ಉಚಿತ ಆರೋಗ್ಯ ಶಿಬಿರ ನಡೆಯಲಿದೆ. 17ರಂದು ಮಲ್ಪೆ ಬೀಚ್ನಲ್ಲಿ ವಿವಿಧ ಸಾಂಪ್ರದಾಯಿಕ ಕ್ರೀಡಾಕೂಟಗಳು ನಡೆಯಲಿದ್ದು, ಅಂದು ಸಂಜೆ 6ಗಂಟೆಗೆ ಮಲ್ಪೆ ಕಡಲ ತೀರದಲ್ಲಿ ವಾರಣಾಸಿಯ ಪುರೋಹಿತರಿಂದ ಗಂಗಾರತಿ ನೆರವೇರಲಿದೆ. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ ಎಂದರು.

ಅಂದು ರಾತ್ರಿ 8ಕ್ಕೆ ದಕ್ಷಿಣ ಗಾಯಕಿ ಮಂಗ್ಲಿ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. 18ರಂದು ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.

ಮಹಾ ರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್ರಾಜ್ ಕಾಂಚನ್, ಸಮಿತಿಯ ಸಂಚಾಲಕ ಕೆ. ಕೃಷ್ಣಮೂರ್ತಿ ಆಚಾರ್ಯ, ಶಂಕರನಾರಾಯಣದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ರುದ್ರಯಾಗ ಸಮಿತಿಯ ಸಂಚಾಲಕರಾದ ರಮೇಶ್ ಎಸ್. ತಿಂಗಳಾಯ, ನಂದಕಿಶೋರ್ ಕೆಮ್ಮಣ್ಣು, ಬಾಲಕೃಷ್ಣ ಕೊಡವೂರು, ಭಜನಾ ಸಂಚಾಲಕ ಧನಂಜಯ ಕಾಂಚನ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಭಾಸ್ಕರ ಪಾಲನ್, ಎ. ರಾಜ ಸೇರಿಗಾರ, ವಾದಿರಾಜ್ ಸಾಲ್ಯಾನ್, ಯಶೋದರ ಸಾಲ್ಯಾನ್, ಬಾಬ ಕೆ., ಉಷಾ ಆನಂದ ಸುವರ್ಣ, ಶೀಲಾ ದೇವಾಡಿಗ, ಪ್ರಮುಖರಾದ ಪಿ. ಗುರುರಾಜ್ ರಾವ್, ಯಾದವ ಅಮೀನ್, ಸದಾನಂದ ಮೂಲ್ಯ, ಬಿ. ಕುಶಲ ಶೆಟ್ಟಿ, ಆಶಾ ಚಂದ್ರಶೇಖರ್, ಸುರೇಂದ್ರ ಆಚಾರ್ಯ, ಸುನೀಲ್ ಪೂಜಾರಿ, ಶಂಕರ ಕುಂದರ್, ಹರಿಪ್ರಸಾದ್ ಮಲ್ಪೆ, ಶರತ್ ಹನುಮಾನ್ನಗರ, ಕುಸುಮ ಕರ್ಕೇರ, ಯಶೋದ ಕೆಮ್ಮಣ್ಣು, ಸತೀಶ್ ಕಲ್ಯಾಣಪುರ, ವಿಠಲ ಪೂಜಾರಿ, ಶಾಲಿನಿ ಸಾಲ್ಯಾನ್, ಅರ್ಚನಾ ದೇವಾಡಿಗ, ವಿಜಯ ಭಾಸ್ಕರ, ಸಂದ್ಯಾ ಪ್ರಕಾಶ್, ಸುಕನ್ಯ ಪೂಜಾರಿ, ಶಕುಂತಳ ಸದಾನಂದ ಉಮೇಶ್ ರಾವ್ ಕೊಡವೂರು ಮೊದಲಾದವರು ಪಾಲ್ಗೊಂಡಿದ್ದರು


Spread the love
Subscribe
Notify of

0 Comments
Inline Feedbacks
View all comments