ಶಾಸಕಿ ಭಾಗೀರಥಿ ಮುರುಳ್ಯ ವಿರುದ್ಧ ಅವಹೇಳನಕಾರಿ ಬರಹ: ದೂರು ದಾಖಲು

Spread the love

ಶಾಸಕಿ ಭಾಗೀರಥಿ ಮುರುಳ್ಯ ವಿರುದ್ಧ ಅವಹೇಳನಕಾರಿ ಬರಹ: ದೂರು ದಾಖಲು

ಬಂಟ್ವಾಳ : ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಫೋಟೋ ಬಳಸಿ ಅವಹೇಳನಕಾರಿ ಬರಹಗಳನ್ನು ಹಾಗೂ ಸುಳ್ಳು ಅಪಪ್ರಚಾರ ನಡೆಸಿ ಸಾಮಾಜಿಕ ಜಾಲತಾಣ ಫೇಸ್ ಬುಕ್‌ ನಲ್ಲಿ ಪ್ರಚಾರ ಮಾಡಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಡಿ. 7 ರಂದು ಸದಾನಂದ ಬಂಟ್ವಾಳ ತನ್ನ ಮೊಬೈಲ್ ಮೂಲಕ ಫೇಸ್ ಬುಕ್ ಖಾತೆ ಗಮನಿಸುತ್ತಿದ್ದ ವೇಳೆ ‘ಬಿಲ್ಲವ ಸಂದೇಶ’ ಎಂಬ ಫೇಸ್ ಬುಕ್ ಖಾತೆಯಲ್ಲಿ ಸುಳ್ಯ ಶಾಸಕಿಯ ಫೋಟೋ ಬಳಸಿ ಅವಹೇಳನಕಾರಿ ಬರಹ ಹಾಗೂ ಸುಳ್ಳು ಅಪಪ್ರಚಾರ ಮಾಡಲಾಗಿದೆ ಎಂದು ನೀಡಲಾಗಿರುವ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments