ಮಹಾ ರುದ್ರ ಯಾಗ ಪುಣ್ಯ ಕಾರ್ಯಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರು ಹಾಗೂ ಗಣ್ಯರಿಗೆ ಅಹ್ವಾನ

Spread the love

ಮಹಾ ರುದ್ರ ಯಾಗ ಪುಣ್ಯ ಕಾರ್ಯಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರು ಹಾಗೂ ಗಣ್ಯರಿಗೆ ಅಹ್ವಾನ

ಉಡುಪಿ: ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ನಡೆಯಲಿರುವ ಮಹಾ ರುದ್ರ ಯಾಗ ಕಾರ್ಯಕ್ರಮಕ್ಕೆ ರಾಜ್ಯದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಅಮಂತ್ರಣ ಪತ್ರಿಕೆ ನೀಡಿ ಅಹ್ವಾನಿಸಲಾಯಿತು .

ಇದೇ ಸಂದರ್ಭದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಭಾ ಕಾರ್ಯಕ್ರಮದ ಉದ್ಘಾಟನೆಗೆ ಅಗಮಿಸಲಿರುವ ರಾಜ್ಯ ಸಾರಿಗೆ ಮತ್ತು ಮುಜುರಾಯಿ ಇಲಾಖೆ ಸಚಿವರಾದ , ರಾಮ ಲಿಂಗ ರೆಡ್ಡಿಯವರಿಗೆ, ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ,ವಿಧಾನ ಪರಿಷತ್ ಸದಸ್ಯರಾದ ಅರತಿ ಕೃಷ್ಣ, ಮತ್ತು ಇತರ ಗಣ್ಯರನ್ನು ಮಹಾ ರುದ್ರ ಯಾಗ ಸಮಿತಿಯ ಸೇವಾಕರ್ತರು ,ಮಹಾ ರುದ್ರಯಾಗ ಸಮಿತಿಯ ಕಾರ್ಯಧ್ಯಕ್ಷರು ಅಗಿರುವ ಪ್ರಸಾದ್ ರಾಜ್ ಕಾಂಚನ್ ಅಮಂತ್ರಣ ಪತ್ರಿಕೆ ನೀಡಿ ಅಹ್ವಾನಿಸಿದರು.

ಈ ಸಂಧರ್ಭದಲ್ಲಿ ಮಹಾ ರುದ್ರ ಯಾಗ ಸಮಿತಿಯ ಪ್ರಧಾನ ಸಂಚಾಲಕರುಗಳಾದ ಕೃಷ್ಣ ಮೂರ್ತಿ ಅಚಾರ್ಯ ಕಿನ್ನಿಮುಲ್ಕಿ ,ತಾರನಾಥ ಪೂಜಾರಿ ಉಪಸ್ಥಿತರಿದ್ದರು.


Spread the love