ದೇವೇಗೌಡರ ಹುಟ್ಟು ಹಬ್ಬ : ದಕ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ನಿರಾಶ್ರಿತರಿಗೆ ಊಟ
ದಕ್ಷಿಣಕನ್ನಡ ಜಿಲ್ಲಾ ಯುವ ಜನತಾದಳ ವತಿಯಿಂದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಅವರ ನೇತೃತ್ವದಲ್ಲಿ ಮಾಜಿ ಪ್ರಧಾನಿ. ರಾಜಕೀಯ ಭೀಷ್ಮ, ಹಿರಿಯ ಮುತ್ಸದ್ದಿ,ಮಣ್ಣಿನ ಮಗ. ಕರ್ನಾಟಕ ರತ್ನ. ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ರವರ ಹುಟ್ಟು ಹಬ್ಬವನ್ನು ನಗರದಲ್ಲಿರುವ ನಿರಾಶ್ರಿತರಿಗೆ ಊಟ ಹಂಚುವುದರ ಮುಖಾಂತರ ಆಚರಿಸಲಾಯಿತು
ಇದೇ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣಕನ್ನಡ ಜಿಲ್ಲಾ ಯುವ ಜನತಾದಳ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ಈ ದೇಶದ 11ನೇ ಪ್ರಧಾನಿ ಯಾಗಿ ಹೆಚ್ ಡಿ ದೇವೇಗೌಡರು ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ನಾವು ನೆನಪಿಸಬೇಕಾಗುತ್ತದೆ.ಮಹಿಳಾ ಮೀಸಲಾತಿ. ಕಾಶ್ಮೀರ ಸಮಸ್ಯೆ. ರೈತರಿಗೆ ರಸಗೋಬ್ಬರ ಸಬಡ್ಸಿ. ಕಾವೇರಿ ನೀರಿನ ಸಮಸ್ಯೆ. ಮಹಾದಾಯಿ ಸಮಸ್ಯೆಯ ಹೋರಾಟ ಅವರ ರೈತರ ಮೇಲೆ ಇರುವ ಕಾಳಜಿ ಇಂದಿನ ರಾಜಕಾರಣಿಗಳಿಗೆ ಹಾಗೂ ಯುವಕರಿಗೆ ಮಾರ್ಗದರ್ಶನವಾಗಿದೆ, ಭಗವಂತ ಇನ್ನಷ್ಟು ಆಯಸ್ಸು ,ಆರೋಗ್ಯ ನೀಡಿ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ. ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಜೆಡಿಎಸ್ ದ.ಕ ಜಿಲ್ಲಾ ಕಾರ್ಯಾಧ್ಯಕ್ಷ ವಸಂತ್ ಪೂಜಾರಿ ಮಾತನಾಡಿ ಶುಭ ಹಾರೈಸಿದರು
ಇದೇ ಸಂದರ್ಭದಲ್ಲಿ ಮೀನುಗಾರ ಘಟಕ ರಾಜ್ಯಾಧ್ಯಕ್ಷ ರತ್ನಾಕರ ಸುವರ್ಣ ಯುವ ಜೆಡಿಎಸ್ ಮಂಗಳೂರು ಉತ್ತರ ವಿಧಾನಸಭಾ ಅಧ್ಯಕ್ಷ ರತೀಶ್ ಕರ್ಕೇರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿತೇಶ್ ರೈ, ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷ ಸತ್ತಾರ್ ಬಂದರು, ಹಾಗು ಜಿಲ್ಲಾ ಮುಖಂಡರುಗಳಾದ ವಿನ್ಸೆಂಟ್ ಸುರತ್ಕಲ್, ಪುಷ್ಪರಾಜ್, ಭಾರತಿ, ಕನಕದಾಸ ಕುಳೂರು, ಚೂಡಮಣಿ ಹಾಗು ಯುವ ಜೆಡಿಎಸ್ ಪಧಾದಿಕಾರಿಗಳಾದ ಸುಶಾಂತ್ ಪೂಜಾರಿ,ವಿಖ್ಯಾತ್, ಪ್ರೀತೇಶ್, ರಕ್ಷಿತ್, ವಿನಿತ್ ಪೂಜಾರಿ,ಆದರ್ಶ ಪೂಜಾರಿ, ಮುಂತಾದವರು ಪಾಲ್ಗೊಂಡಿದ್ದರು.













