ಐವರು ಕಲಾವಿದರಿಗೆ ಮಲಬಾರ್ ವಿಶ್ವ ರಂಗ ಪುರಸ್ಕಾರ – 2026 ಪ್ರದಾನ
ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ)ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಇದರ ಆಶ್ರಯದಲ್ಲಿ ಮಲಬಾರ್ ವಿಶ್ವ ರಂಗ ಪುರಸ್ಕಾರ 2026 ಕಾರ್ಯಕ್ರಮ ಮಾ.26 ರಂದು ನಡೆಯಿತು.

ಹಿರಿಯ ರಂಗ ಕಲಾವಿದರಾದ ಶ್ರೀಪತಿ ಮಂಜನಬೈಲು ಬೆಂಗಳೂರು, ಗೀತಾ ಸುರತ್ಕಲ್, ಎಸ್ ನಿತ್ಯಾನಂದ ಪೈ ಕಾರ್ಕಳ, ಅವಿನಾಶ್ ಕಾಮತ್ ಮುಂಬೈ, ರಾಮ್ ಶೆಟ್ಟಿ ಹಾರಾಡಿ ಇವರಿಗೆ ಈ ಬಾರಿಯ ಮಲಬಾರ್ ವಿಶ್ವ ರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಪ್ರತಿಯೊಂದು ನಾಟಕವು ಸಮಾಜಕ್ಕೆ ಹೊಸ ಆಲೋಚನೆ ನೀಡುವ ಬೆಳಕಿನ ಕಿರಣವಾಗಿದೆ ಕಲಾವಿದರು ಆ ಪಾತ್ರಕ್ಕೆ ಶಕ್ತಿ ತುಂಬುವ ಮೂಲಕ ಪ್ರೇಕ್ಷಕರಿಗೆ ಹೊಸ ಭರವಸೆ ಮತ್ತು ಸಂದೇಶ ನೀಡುವ ಕಾರ್ಯ ಮಾಡುತ್ತಾರೆ. ಉಡುಪಿ ಜಿಲ್ಲೆಯು ಸಾಂಸ್ಕೃತಿಕ ಮತ್ತು ಸಾಹಿತ್ಯದ ಚಿಂತನೆ ಬೆಸೆಯುವ ಜಿಲ್ಲೆಯಾಗಿದೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನವು ಕಳೆದ ಏಳು ವರ್ಷದಿಂದ ಮಾಡುತ್ತಿರುವ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿ ಎಂದರು.
ಶಂಕರ್ ಸಮೂಹ ಸಂಸ್ಥೆಯ ಆಡಳಿತ ನಿದೇ೯ಶಕಿ ಸುಗುಣ ಸುವಣ೯, ರಂಗಭೂಮಿಯು ಸಮಾಜವನ್ನು ಸರಿದಾರಿಗೆ ತಲುಪಲು ನೆರವು ನೀಡುತ್ತದೆ. ಕಲಾವಿದರಿಗೆ ಗೌರವ ನೀಡಿದಾಗ ಅವರಿಗೆ ಮತ್ತಷ್ಟು ಸೇವೆ ಮಾಡಲು ಉತ್ಸಾಹ ಸಿಗುತ್ತದೆ ಎಂದರು.
ಸರಬರಾಜು ನಿರ್ವಹಣೆ ಪಾವತಿ ಮತ್ತು ಗುರುತಿನ ಪರಿಹಾರಗಳು ಮಣಿಪಾಲ ಉಪಾಧ್ಯಕ್ಷ ನವೀನ್ ಕುಮಾರ್ ಶುಭ ಹಾರೈಸಿದರು.
ವೇದಿಕೆಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಮಲಬಾರ್ ಗೋಲ್ಡ್ ನ ಶಾಖ ವ್ಯವಸ್ಥಾಪಕ ಹಫೀಸ್ ರೆಹಮಾನ್, ಮಲಬಾರ್ ವಿಶ್ವ ರಂಗ ಪುರಸ್ಕಾರ ಸಮಿತಿಯ ಸಂಚಾಲಕ ರಾಜೇಶ್ ಭಟ್ ಪಣಿಯಾಡಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಸಿಬ್ಬಂದಿ ,ರಂಗ ನಟ ವಿಘ್ನೇಶ್ ಹಿರಿಯಡಕ ರವರನ್ನು ಗೌರವಿಸಲಾಯಿತು. ಡಾ. ಭಾರ್ಗವಿ ಐತಾಳ, ರಂಜನಿ ವಸಂತ್ , ವಿದ್ಯಾಸರಸ್ವತಿ, ಪೂಣಿ೯ಮಾ ಜನಾದ೯ನ್, ವಿದ್ಯಾ ಶ್ಯಾಮಸುಂದರ್, ಪರಿಚಯಿಸಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಹೆಚ್.ಪಿ ಪ್ರಸ್ತಾವನೆಗೈದರು.
ರಾಜೇಶ್ ಭಟ್ ಪಣಿಯಾಡಿ ಸ್ವಾಗತಿಸಿದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು. ಸಂಧ್ಯಾ ಶೆಣೈ ವಂದಿಸಿದರು.












