ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಅಶ್ರಯದಲ್ಲಿ ಉಚಿತ ನೇತ್ರ ಪರೀಕ್ಷೆ ಹಾಗೂ ರಕ್ತದಾನ ಶಿಬಿರ
ಮುಂಬಯಿ : ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ ಹಾಗೂ ಯುವ ವಿಭಾಗದ ವತಿಯಿಂದ ಮಾ. 22 ರಂದು ಬಂಟರ ಸಂಘ ಮುಂಬಯಿಯ ಬಂಟ್ಸ್ ಹೆಲ್ತ್ ಕೇರ್ ಸಮಿತಿ ಹಾಗೂ ಬಂಟ್ಸ್ ಡಾಕ್ಸರ್ಸ್ ಎಸೋಶಿಯೇಶನ್, ಮುಂಬಯಿಯ ಸಹಭಾಗಿತ್ವದಲ್ಲಿ ‘ಉಚಿತ ನೇತ್ರ ಪರೀಕ್ಷೆ , ಕನ್ನಡಕ ವಿತರಣೆ ಹಾಗೂ ರಕ್ತದಾನ ಶಿಬಿರ’ ವನ್ನು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ, ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿಯವರ ನೇತೃತ್ವದಲ್ಲಿ ಕಾಂದಿವಲಿ ಪಶ್ಚಿಮದ ಕಮಲಾ ವಿಹಾರ್ ಸ್ಪೋರ್ಟ್ಸ್ ಕ್ಲಬ್, ಪೊಯಿಸರ್ ಜಿಮ್ಖಾನ ರೋಡ್, ಮಹಾವೀರ ನಗರ, ಮುಂಬಯಿ ಇಲ್ಲಿ ಆಯೋಜಿಸಲಾಯಿತು.

ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಪ್ರವೀಣ್ ಭೋಜ ಶೆಟ್ಟಿಯವರು ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿಯವರ ನೇತೃತ್ವದಲ್ಲಿ ಯುವ ವಿಭಾಗದ ವತಿಯಿಂದ ನಡೆಯುತ್ತಿರುವ ಪ್ರಾದೇಶಿಕ ಸಮಿತಿಯ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡಾಕ್ಟರ್ ಗಳು ಭಾಗವಹಿಸುತ್ತಿರುವುದು ಪ್ರಥಮ. ಯುವ ವಿಭಾಗದ ಈ ಕಾರ್ಯಕ್ರಮದಲ್ಲಿ ಹೊಸ ಪೀಳಿಗೆಯು ಹೆಚ್ಚಿನ ಮಟ್ಟದಲ್ಲಿ ಕ್ರೀಯಾಶೀಲವಾಗಿದ್ದು ಮುಂದೆ ಇದು ಹೊಸ ಪೀಳಿಗೆಯ ನಾಯಕತ್ವಕ್ಕೆ ಪೂರಕವಾಗಿರುವುದು, ಅದು ಇಲ್ಲಿ ಕಾಣುತ್ತಿದೆ. ಇಂದು ರಕ್ತ ದಾನ, ಉಚಿತ ಕಣ್ಣಿನ ಪರೀಕ್ಷೆ ಹಾಗೂ ಕನ್ನಡಕ ವಿತರಣೆಯಂತಹ ಸಮಾಜಮುಖಿ ಕಾರ್ಯ ನಡೆಯುತ್ತಿದ್ದು ಇದರಿಂದ ಸಮಾಜಕ್ಕೆ ನಮ್ಮ ಸಂಘವು ಸಮಾಜಮುಖಿ ಕಾರ್ಯದಲ್ಲಿ ಯಾವಾಗಲೂ ನಮ್ಮೊಂದಿಗೆ ಇದೆ ಎಂಬ ಉತ್ತಮ ಸಂದೇಶಗಳು ದೊರೆಯುವಂತಾಗುತ್ತದೆ ಎನ್ನುತ್ತಾ ಅಸೋಷಿಯೇಶನ್ ಆಫ್ ಬಂಟ್ಸ್ ಡಾಕ್ಟರ್ಸ್ ನ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿಯವರು ಎಲ್ಲರನ್ನೂ ಸ್ವಾಗತಿಸಿದರು. ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ನಾವು ಪ್ರಾದೇಶಿಕ ಸಮಿತಿಯಿಂದ ಮಾಡುವ ಪ್ರತಿಯೊಂದು ಕಾರ್ಯಕ್ರಮಗಳೂ ಸಮಾಜ ಮುಖಿ ಚಿಂತನೆಯ ಕಾರ್ಯಗಳಾಗಿದ್ದು. ಅದರ ಸದುಪಯೋಗವನ್ನು ಈ ಪ್ರಾದೇಶಿಕ ಸಮಿತಿಯ ವ್ಯಾಪ್ತಿಯಲ್ಲಿರುವ ಎಲ್ಲರೂ ಪಡೆದು ಕೊಳ್ಳಬೇಕು. ಆದರೆ ಅದಕ್ಕಾಗಿ ಅವರೆಲ್ಲರೂ ಕಡ್ಡಾಯವಾಗಿ ಬಂಟರ ಸಂಘದ ಸದಸ್ಯರಾಗಿರಬೇಕು. ಸಮಿತಿಯ ಸಕ್ರಿಯ ಕಾರ್ಯಕರ್ತರೆಲ್ಲರೂ ಹೆಚ್ಚು ಹೆಚ್ಚು ಸದಸ್ಯರನ್ನು ಸಂಘಕ್ಕೆ ನೋಂದಾಯಿಸಬೇಕೆಂದರು.
ಅಸೋಷಿಯೇಶನ್ ಆಫ್ ಬಂಟ್ಸ್ ಡಾಕ್ಟರ್ಸ್ ನ ಅಧ್ಯಕ್ಷರಾದ ಡಾ. ಸತ್ಯಪ್ರಕಾಶ್ ಶೆಟ್ಟಿ ಮಾತನಾಡಿ ಪಂಚೇಂದ್ರಿಯಗಳಲ್ಲಿ ಮುಖ್ಯವಾದ ಕಣ್ಣಿನ ಆರೋಗ್ಯ ಕಾಪಾಡುವುದು ಅತೀ ಅಗತ್ಯ. ಪುರುಷರು ಪ್ರತೀ ಮೂರು ತಿಂಗಳಿಗೆ ಒಮ್ಮೆಯಾದರು ಮಹಿಳೆಯರು ನಾಲ್ಕು ತಿಂಗಳಿಗೆ ಒಮ್ಮೆಯಾದರೂ ರಕ್ತ ದಾನ ಮಾಡುವುದು ಉತ್ತಮ ಎನ್ನುತ್ತಾ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯು ಉತ್ತಮ ಕಾರ್ಯವನ್ನು ಹಮ್ಮಿಕೊಂಡಿದೆ ಎಂದು ಶುಭ ಹಾರೈಸಿದರು. ಇದೇ ಸಂಸ್ಥೆಯ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ವಲಯದ ಸಮನ್ವಯಕರಾದ ಡಾ. ತುಷಾರ್ ಹೆಗ್ಡೆಯವರು ಮಾತನಾಡುತ್ತಾ ಸಮಾಜ ಬಾಂಧವರಿಗೆ ಆರೋಗ್ಯದ ಸಮಸ್ಯೆಯಿದ್ದಲ್ಲಿ ಯಾವುದೇ ಸಮಯದಲ್ಲಿ ನಮ್ಮನ್ನು ಸಂಪರ್ಕಿಸಿದಲ್ಲಿ ನಾವು ಸಹಕರಿಸಲು ಸಿದ್ದರಿದ್ದೇವೆ ಎಂದರು.
ಬಂಟ್ಸ್ ಹೆಲ್ತ ಕೇರ್ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಸ್ವರೂಪ್ ಹೆಗ್ಡೆಯವರು ಮಾತನಾಡುತ್ತಾ ಪ್ರೇಮನಾಥ ಶೆಟ್ಟಿ ಕೊಂಡಾಡಿಯವರ ನೇತೃತ್ವದಲ್ಲಿ ಕಳೆದ ಎರಡು ವರ್ಷಗಳಿಂದ ನಾವು ಒಟ್ಟಾಗಿ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದು ಪ್ರೇಮನಾಥ ಶೆಟ್ಟಿ ಕೊಂಡಾಡಿಯವರ ಕಾರ್ಯವೈಖರಿಯನ್ನು ಮೆಚ್ಚಲೇಬೇಕಾಗಿದೆ. ಡಾ. ಸತ್ಯಪ್ರಕಾಶ್ ಶೆಟ್ಟಿ ನೆತೃತ್ವದ ಅಸೋಷಿಯೇಶನ್ ಆಫ್ ಬಂಟ್ಸ್ ಡಾಕ್ಟರ್ಸ್ ನ ಸಹಾಯಹಸ್ತ ಯಾವಾಗಲೂ ನಮಗಿದೆ. ಇದರ ಈ ವಲಯದ ಸಮನ್ವಯಕರಾದ ಡಾ. ತುಷಾರ್ ಹೆಗ್ಡೆಯವರು ಇಲ್ಲಿಯೇ ಇದ್ದಾರೆ.. ಎಲ್ಲಾ ಪ್ರಾದೇಶಿಕ ಸಮಿತಿಗಳು ಅಸೋಷಿಯೇಶನ್ ಆಫ್ ಬಂಟ್ಸ್ ಡಾಕ್ಟರ್ಸ್ ನ ಪ್ರಯೋಜನವನ್ನು ಪಡೆಯಬಹುದು. ಯುವಕರೂ ಈ ಬಗ್ಗೆ ಕಾರ್ಯನಿರತರಾಗಿ ಸಮಾಜದ ಏಳಿಗೆಗೆ ದುಡಿಯಬೇಕೆಂದರು.

ವೇದಿಕೆಯಲ್ಲಿರುವ ಗಣ್ಯರೊಂದಿಗೆ ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷರಾದ ಮಹೇಶ್ ಎಸ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸವಿನ್ ಜೆ ಶೆಟ್ಟಿ, ಹಿರಿಯ ಸಲಹೆಗಾರರಾದ ಮನೋಹರ ಎನ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆ, ಯುವ ವಿಭಾಗದ ಉಪಕಾರ್ಯಾಧ್ಯಕ್ಷ ಪ್ರಜ್ವಲ್ ಎಸ್ ಶೆಟ್ಟಿ, ಕಾರ್ಯದರ್ಶಿ ಸಮೀಕ್ಷಾ ಎ ಶೆಟ್ಟಿ ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಶೋಭಾ ಎಸ್. ಶೆಟ್ಟಿಯವರು ಪ್ರಾರ್ಥನೆ ಹಾಡಿದರು. ರಘುನಾಥ್ ಎನ್ ಶೆಟ್ಟಿ, ಕಾಂದಿವಲಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಅಶೋಕ್ ವಿ ಶೆಟ್ಟಿ LIC ಸಹಕರಿಸಿದರು. ಯುವ ವಿಭಾಗದ ಕಾರ್ಯದರ್ಶಿ ಸಮೀಕ್ಷಾ ಎ ಶೆಟ್ಟಿ ವಂದನಾರ್ಪಣೆ ಗೈದರು.
ಕಾರ್ಯಕ್ರಮದ ಯಶಸ್ಸಿಗೆ ಮಹಾತ್ಮಾ ಗಾಂಧಿ ಬ್ಲಡ್ ಸೆಂಟರಿನ ವಿನಯ್ ಶೆಟ್ಟಿ, ಯೋಗೇಶ್, ನೇಷನಲ್ ಅಸೋಷಿಯೇಶನ್ ಅಫ್ ಬ್ಲೈಂಡ್ ನ ನಿತಿನ್ ಕಾಂಬ್ಲೆ, ವಿಪುಲ್ ಗಾಂಧಿ, ಸುರೇಶ್ ಅಸಿಜ, ಅಸೋಷಿಯೇಶನ್ ಆಫ್ ಬಂಟ್ಸ್ ಡಾಕ್ಟರ್ಸ್ ನ ಡಾ. ಉದಯ್ ಶೆಟ್ಟಿ, ಡಾ. ರಂಜನ್ ಸೇಣವ, ಡಾ. ಶ್ರವಣ್ ಶೆಟ್ಟಿ, ಡಾ. ಸದಾನಂದ ಶೆಟ್ಟಿ,, ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ , ಕಾರ್ಯದರ್ಶಿ ರಮೇಶ್ ಎಂ ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಎಂ ಶೆಟ್ಟಿ , ಜೊತೆ ಕಾರ್ಯದರ್ಶಿ ಜಯ ಶೆಟ್ಟಿ, ಜೊತೆ ಕೋಶಾಧಿಕಾರಿ ರಮೇಶ್ ಹೆಚ್ ಶೆಟ್ಟಿ, ಮಹಿಳಾ ವಿಭಾಗದ ಸಂಚಾಲಕಿ ಶೈಲಜಾ ಎ. ಶೆಟ್ಟಿ, ಉಪಕಾರ್ಯಾಧ್ಯಕ್ಷೆ ರೇಖಾ ವೈ ಶೆಟ್ಟಿ, ಕಾರ್ಯದರ್ಶಿ ಸರಿತಾ ಹೆಚ್ ಶೆಟ್ಟಿ, ಕೋಶಾಧಿಕಾರಿ ಶುಭಾಂಗಿ ಎಸ್ ಶೆಟ್ಟಿ, ಸಲಹೆಗಾರರಾದ ವಿನೋದ ಡಿ ಶೆಟ್ಟಿ, ವಿನೋದ ಎ ಶೆಟ್ಟಿ, ಶಶಿಕಲ ಎ ಮಾಡ, ಯುವವಿಭಾಗದ ಕೋಶಾಧಿಕಾರಿ ವಿಭಾ ಹೆಚ್ ಶೆಟ್ಟಿ, ಜೊತೆ ಕಾರ್ಯದರ್ಶಿ ಕಾರ್ತಿಕ್ ಕೆ ಶೆಟ್ಟಿ , ಜೊತೆ ಕೋಶಾಧಿಕಾರಿ ವಿಶ್ವಾಸ್ ಶೆಟ್ಟಿ, ಮುಖ್ಯ ಸಲಹೆಗಾರರಾದ ಮುಂಡಪ್ಪ, ಎಸ್. ಪಯ್ಯಡೆ, ನಿತ್ಯಾನಂದ ಹೆಗ್ಡೆ, ವಿಜಯ ಆರ್. ಭಂಡಾರಿ ರವೀಂದ್ರ ಎಸ್. ಶೆಟ್ಟಿ, ಎರ್ಮಾಳು ಹರೀಶ್ ಶೆಟ್ಟಿ , ಕಾರ್ತಿಕ್ ಶೆಟ್ಟಿ ಎರ್ಮಾಳ್ ಮೊದಲಾದವರು ಸಹಕರಿಸಿದರು.












