Freedom Fiesta 2025 to be Held on August 15 

Spread the love

Freedom Fiesta 2025 to be Held on August 15 

ಉಡುಪಿ: ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿ ಆಗಸ್ಟ್ 15ರಂದು ದೇಶದ 79ನೇ ಸ್ವಾತಂತ್ರ್ಯೋತ್ಸವವನ್ನು ಉತ್ಸಾಹ ಹಾಗೂ ಸಂಭ್ರಮದಿಂದ ಆಚರಿಸಲಾಗುವುದು  

ಬೆಳಗ್ಗೆ 8:30 ಸಿಟಿ ಸೆಂಟರ್ ಮಾಲ್ ಬಿಲ್ಡಿಂಗ್‌ನಲ್ಲಿ ಧ್ವಜಾರೋಹಣ ನೆರವೇರಲಿದೆ. ಇದರಲ್ಲಿ ಉಡುಪಿ ನಗರಸಭೆಯ ಶಿರಿಬೀಡು ವಾರ್ಡ್ ಸದಸ್ಯ ಟಿ.ಜಿ. ಹೆಗ್ಡೆ, ಭಾರತ್ ಸ್ಕೌಟ್ ಮತ್ತು ಗೈಡ್ಸ್‌ನ ಮುಖ್ಯ ಆಯುಕ್ತ ಜಯಕರ್ ಶೆಟ್ಟಿ ಇಂದ್ರಾಳಿ, ಸಾಗರದ ಉದ್ಯಮಿ ಕೋಡಿ ಇಬ್ರಾಹಿಂ ಮೊಹಮ್ಮದ್, ಉದ್ಯಮಿಗಳಾದ ಉಡುಪಿಯ ಪುರುಷೋತ್ತಮ ಶೆಟ್ಟಿ, ಮಂಗಳೂರಿನ ಹನೀಫ್, ಕುಂದಾಪುರದ ನಿಶ್ಚಿಂತ್ ದಾಮೋದರ್ ಹಾಗೂ ಉಡುಪಿ ಜಾಮೀಯಾ ಮಸೀದಿಯ ಅಧ್ಯಕ್ಷ ರಿಯಾಝ್ ಉಪಸ್ಥಿತರಿರುವರು

ಕಾರ್ಯಕ್ರಮದ ಅಂಗವಾಗಿ ದೇಶಭಕ್ತಿಗೀತೆ, ಸಾಂಸ್ಕೃತಿಕ ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳೂ ನಡೆಯಲಿವೆ. ಅಪರಾಹ್ನ 3:00ಗಂಟೆಯ ಬಳಿಕ ಚಿತ್ರಕಲಾ ಸ್ಪರ್ಧೆ, ಮಕ್ಕಳಿಗಾಗಿ ಕಿಡ್ಸ್ ಫ್ಯಾಶನ್ ಶೋ, ರಸಪ್ರಶ್ನೆ ಸ್ಪರ್ಧೆ (ಕ್ವಿಝ್)ಗಳು ನಡೆಯಲಿವೆ. ವಿಜೇತರಿಗೆ ಬಹುಮಾನ ವಿತರಣೆಯೂ ನಡೆಯಲಿದೆ


Spread the love
Subscribe
Notify of

0 Comments
Inline Feedbacks
View all comments