ಕುಂಜಾಲು ಸ್ಟ್ರೈಕರ್ಸ್ ಮಡಿಲಿಗೆ ಮಟಪಾಡಿ ಪ್ರೀಮಿಯರ್ ಲೀಗ್ – 2026 ಪ್ರಶಸ್ತಿ, ಫ್ರೆಂಡ್ಸ್ ಮಟಪಾಡಿಗೆ ರನ್ನಸ್ ಗೌರವ
ಬ್ರಹ್ಮಾವರ: ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್ ಮಟಪಾಡಿ ಬ್ರಹ್ಮಾವರ ಇವರ ವತಿಯಿಂದ ಮಟಪಾಡಿ ಪ್ರೀಮಿಯರ್ ಲೀಗ್ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಜರುಗಿತು.

ಸ್ಥಳೀಯ ಆಹ್ವಾನಿತ 10 ತಂಡಗಳು ಭಾಗವಹಿಸಿದ್ದು ಕುಂಜಾಲು ಸ್ಟ್ರೈಕರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಪ್ರೆಂಡ್ಸ್ ಮಟಪಾಡಿ ರನ್ನರ್ಸ್ ಆಗಿ ಮೂಡಿ ಬಂದಿತು.
ಪೈನಲ್ ಪಂದ್ಯ ಶ್ರೇಷ್ಠರಾಗಿ ರಂಜಿತ್ ಕುಂಜಾಲು ಸ್ಟ್ರೈಕರ್ಸ್, ಸರಣಿ ಶ್ರೇಷ್ಠರಾಗಿ ಪ್ರದೀಪ್ ಶೆಟ್ಟಿ ಫ್ರೆಂಡ್ಸ್ ಮಟಪಾಡಿ, ಉತ್ತಮ ದಾಂಡಿಗರಾಗಿ ವಿಶಾಲ್ ನಾಯಕ್ ಫ್ರೆಂ ಡ್ಸ್, ಉತ್ತಮ ಎಸೆತಗಾರರಾಗಿ ಗುರುರಾಜ್ ಕುಂಜಾಲು ಸ್ಟ್ರೈಕರ್ಸ್, ಉತ್ತಮ ಕ್ಷೇತ್ರ ರಕ್ಷಕರಾಗಿ ರಾಘವೇಂದ್ರ ಫ್ರೆಂಡ್ಸ್ ಮಟಪಾಡಿ ಬಹುಮಾನ ಗಳಿಸಿದರು. ನಾಯಕ್ ಫ್ರೆಂಡ್ಸ್ ಮಟಪಾಡಿ ಮತ್ತು ನಂದಿ ಫ್ರೆಂಡ್ಸ್ ಮಟಪಾಡಿ ಸೆಮಿಫೈನಲ್ ತಂಡಗಳಾಗಿ ಮೂಡಿ ಬಂದವು.
ಬೆಳಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಮಟಪಾಡಿಯ ಮುಖ್ಯಅರ್ಚಕರಾದ ಸುಬ್ರಹ್ಮಣ್ಯ ಉಂಗ್ರಪಳ್ಳಿ, ಸ್ಟಾಲಿನ್ ಸಿಕ್ವೇರಾ ಮತ್ತು ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ನಂದಿಕೇಶ್ವರ ಯಕ್ಷಗಾನ ಕಲಾಮಂಡಳಿ ಗೌರವಾಧ್ಯಕ್ಷರಾದ ಚಂದ್ರಶೇಖರ ಕಲ್ಕೂರ, ಬ್ರಹ್ಮಾವರ ರೋಟರಿ ರೊಯಲ್ ಅಧ್ಯಕ್ಷರಾದ ಚಂದ್ರಶೇಖರ ನಾಯರಿ, ಮಟಪಾಡಿ ಶಾಲಾಭಿವೃದ್ಧಿ ಟ್ರಸ್ಟಿನ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಉಷಾ ಕೃಷ್ಣ ಪೂಜಾರಿ, ಉದ್ಯಮಿ ಅಲ್ತಾಫ್ ಅಹಮ್ಮದ್, ಯುವ ಉದ್ಯಮಿ ಮಿಥುನ್ ಅಮೀನ್, ಉದಯ್ ಚಿರಾಗ್, ಜಿಲ್ಲಾ ಭೂಮಾಪಕರ ಸಂಘದ ಅಧ್ಯಕ್ಷರಾದ ವಿಜಯ್ ನಾಯಕ್, ಕ್ಲಬ್ಬಿನ ಗೌರವ ಸಲಹೆಗಾರರಾದ ಶರೋನ್ ಸಿಕ್ವೇರಾ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಕ್ಲಬ್ಬಿನ ಅಧ್ಯಕ್ಷರಾದ ಚೇತನ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಜೊಯ್ಸನ್ ಬಾಂಜ್, ಕೋಶಾಧಿಕಾರಿ ಚೇತನ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ಅಂಕುಶ್ ನಾಯಕ್ ಉಪಸ್ಥಿತರಿದ್ದರು.
ಶರೋನ್ ಮತ್ತು ಅಂಕುಶ್ ಸ್ವಾಗತಿಸಿ ಚೇತನ್ ಆಚಾರ್ಯ ಮತ್ತು ಸುಬ್ರಹ್ಮಣ್ಯ ವಂದಿಸಿದರು ಶರತ್ ಮತ್ತು ಸುಬ್ರಹ್ಮಣ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.












