ಮಂಗಳೂರು| ಸಾಮಾಜಿಕ ಜಾಲತಾಣದಲ್ಲಿ ಬಾಂಬ್ ಸ್ಪೋಟದ ಸಂದೇಶ ಪ್ರಕರಣ; ಆರೋಪಿ ಶಂಕರ್‌ ಬಂಧನ

Spread the love

ಮಂಗಳೂರು| ಸಾಮಾಜಿಕ ಜಾಲತಾಣದಲ್ಲಿ ಬಾಂಬ್ ಸ್ಪೋಟದ ಸಂದೇಶ ಪ್ರಕರಣ; ಆರೋಪಿ ಶಂಕರ್‌ ಬಂಧನ

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬಾಂಬ್ ಸ್ಪೋಟದ ಕಾಮೆಂಟ್ ಮಾಡಿ ವೈರಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ

ಬಂಧಿತ ಆರೋಪಿಯನ್ನು ಭಟ್ಕಳ ‌ದೇವಿನಗರ ನಿವಾಸಿ ಶಂಕರ್‌ ಮಸ್ತಪ್ಪ ಮೊಗೆರ್ (35)‌ ಎಂದು ಪೊಲೀಸರು ತಿಳಿಸಿದ್ದಾರೆ.

ಈತ ʼshankar11916ʼ ಎಂಬ Instagram ಖಾತೆಯಲ್ಲಿ “Support maadi bro ullal masjid hatra bomb blast madthini” ಎಂದು ಪೋಸ್ಟ್‌ ಮಾಡಿದ್ದು, ಇದು ವೈರಲ್‌ ಆಗಿತ್ತು.

ಇದನ್ನು ಸಾಮಾಜಿಕ ಜಾಲತಾಣದ ಮೋನಿಟರಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್ ದೊಡ್ಡಮನಿ ಅವರು ಗಮನಿಸಿದ್ದು, ಅವರು ಈ ಬಗ್ಗೆ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments