ಮಂಗಳೂರು| ಟ್ಯಾಂಕರ್ ಢಿಕ್ಕಿ: ದ್ವಿಚಕ್ರ ವಾಹನ ಸವಾರ ಮೃತ್ಯು

Spread the love

ಮಂಗಳೂರು| ಟ್ಯಾಂಕರ್ ಢಿಕ್ಕಿ: ದ್ವಿಚಕ್ರ ವಾಹನ ಸವಾರ ಮೃತ್ಯು

ಮಂಗಳೂರು: ಅರ್ಕುಳ ಬ್ರಿಡ್ಜ್ ಬಳಿ ಟ್ಯಾಂಕರ್‌ಗೆ ದ್ವಿಚಕ್ರ ವಾಹನ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ರವಿವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ.

ಮೃತಪಟ್ಟಿರುವ ದ್ವಿಚಕ್ರ ವಾಹನ ಸವಾರನನ್ನು ಪರಂಗಿಪೇಟೆಯ ನಿವಾಸಿ ಮುಹಮ್ಮದ್ ಆಶ್ಫಕ್ (22) ಎಂದು ಗುರುತಿಸಲಾಗಿದೆ.

ಬೆಳಗ್ಗೆ ಅರ್ಕುಳ ಸೇತುವೆ ಬಳಿ ಇರುವ ಫರ್ನಿಚರ್ ಅಂಗಡಿಯೊಂದರ ಬಳಿ ಬಿ.ಸಿ.ರೋಡ್ ಕಡೆಗೆ ಹೋಗುತ್ತಿದ್ದ ಟ್ಯಾಂಕರ್‌ಗೆ ಹಿಂದಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಢಿಕ್ಕಿ ಹೊಡೆದಿದ್ದು, ಇದರ ಪರಿಣಾಮ ದ್ವಿಚಕ್ರ ವಾಹನ ಸವಾರ ಮುಹಮ್ಮದ್ ಆಶ್ಫಕ್ ಗಂಭೀರ ಗಾಯಗೊಂಡರು. ಗಾಯಾಳುವನ್ನು ತಕ್ಷಣ ಪಡೀಲ್‌ನ ಖಾಸಗಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆ ದಾಖಲಿಸುವ ಹೊತ್ತಿಗೆ ಗಾಯಾಳು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love