ಮಣಿಪಾಲ: ಬೈಕ್ ಸ್ಕಿಡ್ ಆಗಿ ನವವಿವಾಹಿತ ಯುವಕ ಮೃತ್ಯು

Spread the love

ಮಣಿಪಾಲ: ಬೈಕ್ ಸ್ಕಿಡ್ ಆಗಿ ನವವಿವಾಹಿತ ಯುವಕ ಮೃತ್ಯು

ಮಣಿಪಾಲ: ಬೈಕ್ ಸ್ಕಿಡ್ ಆಗಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಲಕ್ಷ್ಮೀಂದ್ರ ನಗರದ ಸುಧಾ ಫರ್ನಿಚರ್ ಬಳಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.

ಮೃತ ಯುವಕನನ್ನು ಇಂದಿರಾನಗರ ಬುಡ್ನಾರ್ ನಿವಾಸಿ ಪ್ರವೀಣ್ ಶೆಟ್ಟಿ (36) ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ ಪ್ರವೀಣ್ ಶೆಟ್ಟಿ ಶುಕ್ರವಾರ ತಡರಾತ್ರಿ ಉಡುಪಿಯಿಂದ ಮಣಿಪಾಲ ಕಡೆಗೆ ತೆರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದು ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೃತ ಪ್ರವೀಣ್ ಶೆಟ್ಟಿ ಸೌಮ್ಯ ಸ್ವಭಾವದರಾಗಿದ್ದು, ಕಳೆದ ಒಂದುವರೆ ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದು ರಿಯಲ್ ಎಸ್ಟೇಟ್ ಸಹಿತ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು.

ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Subscribe
Notify of

0 Comments
Inline Feedbacks
View all comments