ಶಿರೂರು ಪರ್ಯಾಯ ಮಹೋತ್ಸವ: ನಾಳೆ (ಜ.15) ನಗರ ದೀಪಾಲಂಕಾರ ಉದ್ಘಾಟನೆ
ಉಡುಪಿ: ಶ್ರೀ ತಿರೂರು ಮಠ ಪರ್ಯಾಯ ಮಹೋತ್ಸವದ ಪ್ರಯುಕ್ತ ನಗರದಲ್ಲಿ ದೀಪಾಲಂಕಾರ ಉದ್ಘಾಟನೆ ಜನವರಿ 15 ರಂದು ಹಾಗೂ ಶ್ರೀ ಪರಶುರಾಮ ಸ್ವಾಗತ ಗೋಪುರಕ್ಕೆ ಶಿಲಾನ್ಯಾಸ ಜನವರಿ 16 ರಂದು ನಡೆಯಲಿದೆ ಎಂದು ಪರ್ಯಾಯ ಸಮಿತಿ ಅಧ್ಯಕ್ಷರಾದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.

ಅವರು ಬುಧವಾರ ಸುದ್ದಿಗೋಷ್ಠೀಯಲ್ಲಿ ಮಾತನಾಡಿ ಉಡುಪಿ ನಗರಸಭೆ ವತಿಯಿಂದ ಶಾಸಕರಾದ ಸುವರ್ಣ ಇವರ ನೇತೃತ್ವದಲ್ಲಿ ಪರ್ಯಾಯ ಮಹೋತ್ಸವದ ವಿದ್ಯುತ್ ದೀಪ ಅಲಂಕಾರಕ್ಕೆ ರೂಪಾಯಿ 50 ಲಕ್ಷ ಬಿಡುಗಡೆಯಾಗಿದ್ದು ಈಗಾಗಲೇ ದೀಪಾಲಂಕಾರವನ್ನು ಬಹುತೇಕ ಪೂರ್ಣಗೊಳಿಸಿದ್ದು ದಿನಾಂಕ 15 ರಂದು 2026 ಬುಧವಾರ ಸಂಜೆ ಸುಮಾರು 7 ಗಂಟೆಗೆ ಕೋರ್ಟ್ ರಸ್ತೆಯ ಕೆನರಾ ಬ್ಯಾಂಕ್ ಶಾಖೆಯ ಎದುರುಗಡೆ ನೆರವೇರಲಿದೆ. ಇದರ ಉದ್ಘಾಟನೆಯನ್ನು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ನೆರವೇರಿಸಲಿದ್ದಾರೆ.
ಪರಶುರಾಮ ಸ್ವಾಗತ ಗೋಪುರದಶೀಲನ್ಯಾಸ ಉಡುಪಿಯ ದಕ್ಷಿಣ ಭಾಗದಲ್ಲಿ ಈಗಾಗಲೇ ಪುತ್ತಿಗೆ ಮಠದ ವತಿಯಿಂದ ಭವ್ಯವಾದ ಗೀತಾಚಾರ್ಯರ ಸ್ವಾಗತ ಗೋಪುರ ನಿರ್ಮಿಸಿದ್ದು ಇದೀಗ ಉಡುಪಿ ನಗರವನ್ನು ಪ್ರವೇಶಿಸುವ ಉತ್ತರ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್ ನಲ್ಲಿ ತುಳುನಾಡಿನ ಸೃಷ್ಟಿಕರ್ತರಾದ ಭಗವಾನ್ ಶ್ರೀ ಪರಶುರಾಮರ ಭವ್ಯ ಸ್ವಾಗತ ಗೋಪುರವನ್ನು ಶಿರೂರು ಮಠದ ದಿವಾನರು ಪರ್ಯಾಯ ಸ್ವಾಗತ ಸಮಿತಿಯ ವತಿಯಿಂದ ನಿರ್ಮಿಸುವುದೆಂದು ನಿರ್ಧರಿಸಿದ್ದು ಇದರ ಶಿಲಾನ್ಯಾಸವನ್ನು ಸ್ವಾಗತ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳೊಂದಿಗೆ ರವರು ದಿನಾಂಕ 16.01.2026 ಶುಕ್ರವಾರ ಪೂರ್ವಾಹ್ನ 9 ಗಂಟೆಗೆ ದೇವತಾ ಪೂಜೆಯೊಂದಿಗೆ ನೆರವೇರಿಸಲಿದ್ದಾರೆ.
ಅನ್ನ ಸಂತರ್ಪಣೆ ಪರ್ಯಾಯ ಮುನ್ನಾ ದಿನ ಅಂದರೆ 17 ಒಂದು 2026ರಂದು ಶನಿವಾರ ಉಡುಪಿಯ ವಿವಿಧ ಭಾಗಗಳಲ್ಲಿ ಅಂದರೆ ರಾಜಾಂಗಣದ ಪಾರ್ಕಿಂಗ್ ಪ್ರದೇಶ ನಿತ್ಯಾನಂದ ಮಂದಿರ ಬಸ್ಸು ನಿಲ್ದಾಣ ಸಮೀಪ ಬೋರ್ಡ್ ಹೈಸ್ಕೂಲ್ ಮೂರು ಕಡೆಗಳಲ್ಲಿ ಸಾರ್ವಜನಿಕರಿಗೆ ಹಾಗೂ ಗೋವಿಂದ ಕಲ್ಯಾಣ ಮಂಟಪದಲ್ಲಿ ಸಾಂಸ್ಕೃತಿಕ ಕಲಾತಂಡದವರಿಗೆ ಸಂಜೆ 7 ಗಂಟೆಯಿಂದ 12 ಗಂಟೆವರೆಗೆ ಅನ್ನಸಂಪರ್ಪಣೆ ನಡೆಯಲಿದೆ ಸುಮಾರು ಒಂದು ಲಕ್ಷದಷ್ಟು ಜನರು ಭಾಗವಹಿಸುವ ನಿರೀಕ್ಷೆ ಇದ್ದು, ದಿನಾಂಕ ಜನವರಿ 17 ರಿಂದ 22 ರವರೆಗೆ ಪ್ರತಿದಿನ ವಿಶೇಷ ಅನ್ನ ಸಂತರ್ಪಣೆ ನಡೆಯಲಿದ್ದು ನಾಲ್ಕರಿಂದ ಐದು ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.
ಪರ್ಯಾಯ ಶೋಭಾ ಯಾತ್ರೆ ಈ ಬಾರಿಯ ಪರ್ಯಾಯ ಶನಿವಾರ ಮತ್ತು ಭಾನುವಾರ ವಾರಾಂತ್ಯದ ದಿನಗಳು ಬಂದಿರುವುದರಿಂದ ಸುಮಾರು ಎರಡರಿಂದ ಮೂರು ಲಕ್ಷ ಜನರನ್ನು ನಿರೀಕ್ಷಿಸಲಾಗಿದೆ ಪರ್ಯಾಯ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ಅದ್ದೂರಿಯಾಗಿ ವಿಶಿಷ್ಟವಾಗಿ ನಡೆಯಲಿದೆ ಇದರಲ್ಲಿ ಶ್ರೀ ಮಧ್ವ ವಾದಿರಾಜ ಗುರುವರ್ಯರು ಶಿರೂರು ಮಠದ ಯತಿವರ್ಯರ ಪರಂಪರೆ ಪೌರಾಣಿಕ ಚಿತ್ರಗಳು ಎದ್ದು ಕಾಣಲಿದ್ದು, ರಾಷ್ಟ್ರಾದ್ಯಂತ ಬಂದಂತಹ ಸಾಂಸ್ಕೃತಿಕ ತಂಡದಿಂದ ಪ್ರದರ್ಶನವನ್ನು ನೀಡಲಿದ್ದು ಸ್ಥಳೀಯ ಕರ್ನಾಟಕ ರಾಜ್ಯದ ಕಲಾತಂಡಗಳು ಭಜನಾ ತಂಡಗಳು ಖಾಲಿಯೇನು ತಂಡಗಳು ಈ ಶೋಭಾ ಯಾತ್ರೆಯಲ್ಲಿ ಕಾಣಬಹುದಾಗಿದೆ.
ಶೋಭಾ ಯಾತ್ರೆಯು ಜನವರಿ 18 ರವಿವಾರ ಬೆಳಿಗ್ಗೆ ಎರಡು ಗಂಟೆಯಿಂದ ಆರಂಭವಾಗಲಿದ್ದು ಸುಮಾರು ಎರಡು ಗಂಟೆಗಳ ಕಾಲ ಮೆರವಣಿಗೆ ಸಂಚರಿಸಲಿದ್ದು ಎಂದಿನಂತೆ ಕಲ್ಪನಾ ಜಂಕ್ಷನ್ ಮೂಲಕ ರಥ ಬೀದಿಗೆ ಸಾಗಲಿದೆ . ಮುಂದೆ ಶ್ರೀ ಕೃಷ್ಣ ಮಠದಲ್ಲಿ ದೇವತಾ ಕಾರ್ಯಗಳು ನಡೆದು ಶ್ರೀಗಳವರು ಸರ್ವಜ್ಞ ಪೀಠವನ್ನು ಆಲಂಕರಿಸಲಿದ್ದಾರೆ.
ದರ್ಬಾರ್ ಸಭೆ ನೂತನವಾಗಿ ನಿರ್ಮಾಣಗೊಂಡಿರುವ ರಾಜಾಂಗಣದ ವೇದಿಕೆಯನ್ನು ಹೂ ಸಿಂಗಾರಗಳಿಂದ ಎಲ್ಲಾ ಮಠದ ಮಠಾಧೀಶರೊಂದಿಗೆ ನಾಡಿನ ಗಣ್ಯರು ಭಾಗವಹಿಸಲಿದ್ದಾರೆ ಮುಂಜಾನೆ 5:30ಕ್ಕೆ ಆರಂಭವಾಗಲಿರುವ ದರ್ಬಾರ್ ಸಭೆ ಸುಮಾರು 9 ಗಂಟೆಯವರೆಗೆ ನಡೆಯಲಿದ್ದು ಈ ಸಂದರ್ಭದಲ್ಲಿ ಪರ್ಯಾಯ ದೀಕ್ಷೆ ತೆಗೆದುಕೊಂಡಿರುವ ಶ್ರೀ ಶ್ರೀ ವೇದವರ್ಧನ ತೀರ್ಥರು ಇತರ ಸ್ವಾಮೀಜಿಯವರೊಂದಿಗೆ ನಾಡಿನ ಗಣ್ಯರು ಉದ್ಯಮಿಗಳನ್ನು ಶ್ರೀಕೃಷ್ಣ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ ವೇದ ವಿದ್ವಾಂಸರಿಂದ ಪ್ರವಚನ ನಡೆಯಲಿದೆ.
ಕೇಂದ್ರ ಮತ್ತು ರಾಜ್ಯದ ಸಚಿವರು ಗಣ್ಯ ವ್ಯಕ್ತಿಗಳು ಈ ಸಂದರ್ಭದಲ್ಲಿ ಭಾಗವಹಿಸಲಿದ್ದು, ದಿನಾಂಕ 18ರಿಂದ ಪ್ರತಿದಿನ ಸಂಜೆ ಹತ್ತು ದಿನಗಳ ಕಾಲ ಸಭಾ ಕಾರ್ಯಕ್ರಮ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು ಈ ಸಭೆಯಲ್ಲಿ ಕೂಡ ಅನೇಕ ಗಣ್ಯರಿಗೆ ಶ್ರೀ ಕೃಷ್ಣ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಮಠ ಶ್ರೀ ಕೃಷ್ಣ ಮಠ ಮಠದ ರಾಜಾಂಗಣ ಮತ್ತು ರಥ ಬೀದಿ ಸುತ್ತಮುತ್ತ ಹೂ ಮತ್ತು ವಿದ್ಯುತ್ ದೀಪದಿಂದ ಅಲಂಕರಿಸಲಾಗುವುದು ಎಂದು ಹೇಳಿದರು
ಶಿರೂರು ಮಠದ ಪರ್ಯಾಯ ಮಹೋತ್ಸವದ ಈ ಸಂದರ್ಭದಲ್ಲಿ ರಾಯಚೂರು ಭಕ್ತ ವೃಂದದವರಿಂದ 250 ಕ್ವಿಂಟಲ್ ಅಕ್ಕಿ ಸುಮಾರು 12 ಲಕ್ಷದ ಮೊತ್ತದ ಅಕ್ಕಿಯನ್ನು ಪರ್ಯಾಯದ ಅನ್ನಸಂತರ್ಪಣೆಗಾಗಿ ಸಮರ್ಪಣೆಯಾಗಿದೆ
ಶ್ರೀ ಶಿರೂರು ಮಠದ ಶ್ರೀ ಶ್ರೀ ವೇದವರ್ಧನ ಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಉಡುಪಿ ನಗರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಪೂರ್ಣವಾಗಿ ಸಜ್ಜುಗೊಂಡಿದೆ. ಶ್ರೀಗಳ ಪುರ ಪ್ರವೇಶ ಆದ್ದೂರಿಯಾಗಿ ನಡೆದು ಚರಿತ್ರೆ ನಿರ್ಮಾಣವಾಗಿದ್ದು ದಿನಾಂಕ 10 ಜನವರಿಯಿಂದ ಆರಂಭವಾದ ಹಸಿರು ಹೊರೆ ಕಾಣಿಕೆ ಮಠಕೆ ಹರಿದು ಬರುತ್ತಿದ್ದು ದಿನಾಂಕ 17 ಜನವರಿ ಇವರಿಗೂ ಹೊರೆ ಕಾಣಿಕೆ ಹರಿದು ಬರಲಿದೆ.
ಈ ಬಾರಿಯ ಹಸಿರು ಹೊರೆ ಕಾಣಿಕೆಯಲ್ಲಿ ಸಂಗ್ರಹವಾದ ವಸ್ತುಗಳು ದಾಖಲೆ ನಿರ್ಮಾಣವಾಗಲಿದ್ದು ಕನಿಷ್ಠ ಮೂರರಿಂದ ನಾಲ್ಕು ಲಕ್ಷ ಭಕ್ತರಿಗೆ ಅನ್ನ ಸಂತರ್ಪಣೆಗೆ ಪೂರಕವಾಗಿ ಸಂಗ್ರಹ ನಡೆಯುತ್ತಿದೆ. ದಿನಂಪ್ರತಿ ಸಾವಿರಾರು ಭಕ್ತರು ಇದರಲ್ಲಿ ಭಾಗವಹಿಸುತ್ತಿದ್ದಾರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಪರ್ಯಾಯ ಸಮಿತಿಯ ಕಾರ್ಯದರ್ಶಿ ಮಟ್ಟಾರ್ ರತ್ನಾಕರ ಹೆಗ್ಡೆ, ಸಂಚಾಲಕರಾದ ಮೋಹನ್ ಭಟ್ ಹಾಗೂ ಇತರರು ಉಪಸ್ಥಿತರಿದ್ದರು.












