ಶಿರೂರು ಪರ್ಯಾಯ ಪುರಪ್ರವೇಶ: ನಾಳೆ (9) ಉಡುಪಿ ನಗರದಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ

Spread the love

ಶಿರೂರು ಪರ್ಯಾಯ ಪುರಪ್ರವೇಶ: ನಾಳೆ (9) ಉಡುಪಿ ನಗರದಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ

ಉಡುಪಿ: ಶಿರೂರು ಪರ್ಯಾಯ ಮಹೋತ್ಸವದ ಅಂಗವಾಗಿ ಜ. 9 ಶುಕ್ರವಾರ ನಡೆಯಲಿರುವ ಪುರಪ್ರವೇಶ ಹಿನ್ನಲೆಯಲ್ಲಿ ಮದ್ಯಾಹ್ನ 1.00 ಗಂಟೆಯಿಂದ ಸಂಜೆ 07.00 ಗಂಟೆಯವರೆಗೆ ಈ ಕೆಳಕಂಡಂತೆ ವಾಹನಗಳ ಸಂಚಾರ ನಿಷೇಧ ಮತ್ತು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಸ್ವರೂಪಾ ಟಿ ಕೆ ಆದೇಶ ಹೊರಡಿಸಿದ್ದಾರೆ.
ಪರ್ಯಾಯ ಪುರಪ್ರವೇಶ ಮೆರವಣಿಗೆ ನಡೆಯಲಿದ್ದು, ಸದರಿ ಮೆರವಣಿಗೆಯು ಶಾರದಾ ಕಲ್ಯಾಣ ಮಂಟಪದಿಂದ ರಾಹೆ-169(ಎ) ರ ಮಾರ್ಗವಾಗಿ ಶಿರಿಬೀಡು ಜಂಕ್ಷನ್ ತಲುಪಿ ಅಲ್ಲಿಂದ ಸರ್ವೀಸ್ ಬಸ್ ನಿಲ್ದಾಣ-ತ್ರಿವೇಣಿ ಜಂಕ್ಷನ್- ಕನಕದಾಸ ರಸ್ತೆ ಮಾರ್ಗವಾಗಿ ಸಾಗಲಿದ್ದು, ಆದ್ದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡೆತಡೆಗಳು ಉಂಟಾಗುವುದರಿಂದ ಸಂಚಾರ ನಿಷೇಧ ಮತ್ತು ಬದಲಿ ಮಾರ್ಗದ ವಿವರ ಇಂತಿದೆ

1. ಮಣಿಪಾಲದಿಂದ ಉಡುಪಿ ನಗರಕ್ಕೆ ಹೋಗುವಂತಹ ವಾಹನಗಳು ಎಂ.ಜಿ.ಎಂ ಎದುರಿನ ಸುನಾಗ್ ಆಸ್ಪತ್ರೆ ಬಳಿ ಎಡ ತಿರುವು ಪಡೆದು ಸುದೀಂದ್ರ ಕಲ್ಯಾಣ ಮಂಟಪ ಮಾರ್ಗವಾಗಿ ಎಸ್.ಕೆ.ಎಂ ಬಳಿ ಎಡ ತಿರುವು ಪಡೆದು ಬೀಡಿನಗುಡ್ಡೆ-ಚಿಟ್ಟಾಡಿ-ಅಮ್ಮಣ್ಣಿ ರಾಮಣ್ಣ ಹಾಲ್ ಮುಂದಿನ ರಸ್ತೆಯಿಂದ ಮಿಷನ್ ಕಂಪೌಂಡ್ -ಜೋಡುಕಟ್ಟೆ ತಲುಪಿ ಉಡುಪಿ ನಗರಕ್ಕೆ ತೆರಳುವುದು.

2. ಶಿರಬೀಡು ಜಂಕ್ಷನ್ ನಿಂದ ಕಿದಿಯೂರು ಹೋಟೆಲ್ ಮೂಲಕ ಸರ್ವೀಸ್ ಬಸ್ ನಿಲ್ಯಾಣದ ವರೆಗಿನ ಏಕಮುಖ ಸಂಚಾರ ವ್ಯವಸ್ಥೆಯ ರಸ್ತೆಯಲ್ಲಿ ಮೆರವಣಿಗೆ ಪ್ರವೇಶಿಸುವ ಸಮಯದಲ್ಲಿ ವಾಹನ ಸಂಚಾರವನ್ನು ನಿರ್ಭಂದಿಸಲಾಗಿದೆ.

3. ಮಂಗಳೂರು ಕಡೆಯಿಂದ ಉಡುಪಿ ನಗರಕ್ಕೆ ಪ್ರವೇಶಿಸುವ ಎಲ್ಲಾ ವಾಹನಗಳು ಒಲ್ಡ್ ಡಯಾನ ಸರ್ಕಲ್ ನಿಂದ ಮಿತ್ರ ಪ್ರಿಯಾ ಜಂಕ್ಷನ್ ಮುಖೇನಾ ಚಿತ್ತರಂಜನ್ ಸರ್ಕಲ್, ಸಂಸ್ಕೃತ ಕಾಲೇಜ್ ಜಂಕ್ಷನ್ .ಜಾಮೀಯಾ ಮಸೀದಿ ಜಂಕ್ಷನ್ ನಿಂದ ಎಡ ತಿರುವು ಪಡೆದು ಸರ್ವೀಸ್ ಬಸ್ ನಿಲ್ದಾಣ ತಲುಪುವುದು.

ಈ ನಿಷೇಧವು ವಿವಿಐಪಿ ವಾಹನ, ಸರಕಾರಿ ವಾಹನ ಮತ್ತು ಎಲ್ಲಾ ರೀತಿಯ ತುರ್ತುಸೇವೆ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments