ಐವನ್ ಡಿ ಸೋಜ ಕಚೇರಿಯಲ್ಲಿ ಎಸ್‌ಐಆರ್ ಸಹಾಯವಾಣಿ ಕೇಂದ್ರ ಆರಂಭ

Spread the love

ಐವನ್ ಡಿ ಸೋಜ ಕಚೇರಿಯಲ್ಲಿ ಎಸ್‌ಐಆರ್ ಸಹಾಯವಾಣಿ ಕೇಂದ್ರ ಆರಂಭ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಕಟ್ಟಡದಲ್ಲಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಕಚೇರಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಹಾಯವಾಣಿ ಕೇಂದ್ರ ಸೋಮವಾರ ಆರಂಭಗೊಂಡಿದೆ.

ಮಂಗಳೂರು ದಕ್ಷಿಣ ವಿಧಾನ ಸಭಾ ಕೇತ್ರಕ್ಕೆ ಸಂಬಂಧಪಟ್ಟಂತೆ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ತಪ್ಪಿಸಿಕೊಳ್ಳದಂತೆ, ಮತ್ತು ಸರಿಯಾದ ದಾಖಲೆಗಳನ್ನು ಸರಿಯಾದ ಸಮಯದಲ್ಲಿ ನೀಡಿ ಖಾತ್ರಿ ಪಡಿಸಿಕೊಳ್ಳಲು ಸಹಾಯವಾಣಿ ಕೇಂದ್ರವು ಪ್ರಾರಂಭವಾಗಿದೆ.

ಈ ಸಹಾಯವಾಣಿ ಮೊಬೈಲ್ ಸಂಖ್ಯೆ:.8217865120 ಈ ನಂಬರನ್ನು ಸಂಪರ್ಕಿಸಿದಲ್ಲಿ ಸಂಪೂರ್ಣ ಮಾಹಿತಿ ಯೊಂದಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೊಂದಾಯಿಸಲು ಸಹಾಯ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಭಾಸ್ಕರ್ ಮೊಯಿಲಿ, ನವೀನ್ ಡಿ ಸೋಜ, ಪದ್ಮನಾಭ ಪಣಿಕ್ಕರ್, ಪ್ರಕಾಶ್ ಬಿ ಸಾಲ್ಯಾನ್, ಸತೀಶ್ ಪೆಂಗಲ್ ಅಬ್ದುಲ್ ಸಲೀಂ, ಚೇತನ್ ಕುಮಾರ್, ಮನಿಷ್ ಬೋಳಾರ್, ಬಶೀರ್ ಅಹ್ಮದ್ ಉಪಸ್ಥಿತರಿದ್ದರು.


Spread the love
Subscribe
Notify of

0 Comments