ಪರ್ಯಾಯಕ್ಕೆ ವಿಶೇಷ ಅನುದಾನ: ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೌರಭ್ ಬಲ್ಲಾಳ್, ಅರ್ಜುನ್ ನಾಯರಿ ಅಭಿನಂದನೆ
ಉಡುಪಿಯಲ್ಲಿ ಜರುಗಲಿರುವ ಶೀರೂರು ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರ ವಿಶೇಷ ಮುತುವರ್ಜಿಯಿಂದ ಜಿಲ್ಲಾ ಖನಿಜ ಪ್ರತಿಷ್ಠಾನದಲ್ಲಿ ದೀರ್ಘಕಾಲದಿಂದ ಬಳಕೆಯಾಗದ ನಿಧಿಯನ್ನು ಉಡುಪಿಯ ರಸ್ತೆ ಅಭಿವೃದ್ಧಿ ಸೇರಿ ಪರ್ಯಾಯ ಮಹೋತ್ಸವಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾ ಖನಿಜಾ ಪ್ರತಿಷ್ಠಾನಕ್ಕೆ ನಿರ್ದೇಶನವನ್ನು ನೀಡಿ ಆರು ಕೋಟಿ ರೂಪಾಯಿಗಳ ಗರಿಷ್ಠ ಮೊತ್ತದ ಅನುದಾನವನ್ನು ಒದಗಿಸಿರುವುದು ಬಹಳ ಸಂತೋಷದ ವಿಷಯವಾಗಿದೆ.
ಇಂತಹ ದೊಡ್ಡ ಮೊತ್ತದ ಅನುದಾನವನ್ನು ಒದಗಿಸುವಲ್ಲಿ ಸಹಕರಿಸಿದ ರಾಜ್ಯ ಸರ್ಕಾರಕ್ಕೆ, ಕಾಂಗ್ರೆಸ್ ಪಕ್ಷದ ನಾಯಕರಿಗೆ ಹಾಗೂ ಜಿಲ್ಲೆಯ ಶಾಸಕರುಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಅರ್ಜುನ್ ನಾಯರಿ, ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಅಧ್ಯಕ್ಷ ಸೌರಭ್ ಬಲ್ಲಾಳ್ ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ.













