ಉಡುಪಿ: ಪ್ರತಿಭಾನ್ವಿತ ವಿದ್ಯಾರ್ಥಿನಿ ಹನೀಫ ಇಶಾನಾಗೆ ಗೌರವ

Spread the love

ಉಡುಪಿ: ಪ್ರತಿಭಾನ್ವಿತ ವಿದ್ಯಾರ್ಥಿನಿ ಹನೀಫ ಇಶಾನಾಗೆ ಗೌರವ

ಉಡುಪಿ,: ಹೂಡೆ ದಾರುಸ್ಸಲಾಂ ಆಂಗ್ಲ ಮಾಧ್ಯಮ ಶಾಲೆಯ ಎಸೆಸೆಲ್ಸಿಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಹನೀಫ ಇಶಾನಾ ಅವರಿಗೆ ಅತ್ಯುತ್ತಮ ಔಟ್‌ಗೋಯಿಂಗ್ ಸ್ಟುಡೆಂಟ್ ಅವಾರ್ಡ್ ನೀಡಿ ಗೌರವಿಸಲಾಯಿತು.

ಇತ್ತೀಚೆಗೆ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ದಾರುಸ್ಸಲಾಂ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಆಶ್ರಫ್ ಜಿ. ಅವರು ಪ್ರತಿಭಾನ್ವಿತ ವಿದ್ಯಾರ್ಥಿನಿಯನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಅಬ್ದುಲ್ ಶುಕೂರ್ ತೋನ್ಸೆ, ಅಭಿಜಿತ್ ಕರ್ಕೇರ, ಶಾಲಾ ಆಡಳಿತಾಧಿಕಾರಿ ರಾಕೀಬ್ ಕನ್ನಂಗಾರ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಅಶ್ರಫ್ ಹಾಗೂ ಶಿಕ್ಷಕಿ ಉಷಾ ದೇವಿ ಉಪಸ್ಥಿತರಿದ್ದರು.

ಹನೀಫ ಇಶಾನಾ ಅವರು ಭದ್ರಗಿರಿಯ ಮುಹಮ್ಮದ್ ಇಲಿಯಾಸ್ ಮತ್ತು ರೇಶ್ಮಾ ದಂಪತಿಯ ಪುತ್ರಿಯಾಗಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments