ಪರ್ಯಾಯಕ್ಕೆ ಅನುದಾನ ಮೀಸಲಿರಿಸಿದ ಕಾರ್ಕಳ, ಕುಂದಾಪುರ, ಬೈಂದೂರು, ಕಾಪು ಶಾಸಕರಿಗೆ ಯಶ್ಪಾಲ್ ಸುವರ್ಣ ಅಭಿನಂದನೆ
ಉಡುಪಿ: ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿ ನಗರದ ರಸ್ತೆ ಅಭಿವೃದ್ಧಿ ಸಹಿತ ಮೂಲ ಸೌಕರ್ಯ ಅಭಿವೃದ್ಧಿ ಬಗ್ಗೆ ಸಹಕಾರ ನೀಡುವಂತೆ ಮಾಡಿದ ವಿನಂತಿಗೆ ಸ್ಪಂದಿಸಿ ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿಯಿಂದ ಗರಿಷ್ಠ ಅನುದಾನವನ್ನು ಉಡುಪಿ ನಗರ ಭಾಗಕ್ಕೆ ಮೀಸಲಿರಿಸಲು ತಮ್ಮ ಅನುದಾನವನ್ನು ನೀಡಿ ವಿಶೇಷ ಸಹಕಾರ ನೀಡಿದ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ. ಸುನೀಲ್ ಕುಮಾರ್, ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ಯವರಿಗೆ ಉಡುಪಿ ಜನತೆಯ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
ಪರ್ಯಾಯ ಮಹೋತ್ಸವದ ಬಗ್ಗೆ ರಾಜ್ಯ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಲು ನಿರ್ಲಕ್ಷ್ಯ ಧೋರಣೆ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಖನಿಜ ಪ್ರತಿಷ್ಠಾನದ ನಿಧಿಯ ಗರಿಷ್ಠ ಅನುದಾನವನ್ನು ಉಡುಪಿ ನಗರಕ್ಕೆ ಮೀಸಲಿರಿಸುವ ಮೂಲಕ ನೀಡಿರುವ ಸಹಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.













