ಮಂಗಳೂರಿನಿಂದ ಯುವಕ ನಾಪತ್ತೆ; ಪತ್ತೆಗೆ ಪೊಲೀಸರ ಮನವಿ

Spread the love

ಮಂಗಳೂರಿನಿಂದ ಯುವಕ ನಾಪತ್ತೆ; ಪತ್ತೆಗೆ ಪೊಲೀಸರ ಮನವಿ

ಮಂಗಳೂರು, ಮೇ 30: ಮಂಗಳೂರಿನ ಮುಡಿಪುವಿನಲ್ಲಿರುವ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ನಾಪತ್ತೆಯಾಗಿರುವ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನ ಪತ್ತೆಗೆ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

ಪೀರಪ್ಪ ಎಂಬವರು ನೀಡಿದ ದೂರಿನಂತೆ, ಅವರ ತಮ್ಮ ಸುರೇಶ್ (23) ಅವರು ಮುಡಿಪುವಿನ ಶ್ರೀ ಶುಭಾ ಸೇಲ್ಸ್ ವಾಟರ್ ಸಪ್ಲೈ ಸಂಸ್ಥೆಯಲ್ಲಿ ವಾಟರ್ ಕ್ಲಿನಿಂಗ್ ಕೆಲಸ ಮಾಡುತ್ತಿದ್ದರು. ಮೇ 16ರಂದು ಸಂಜೆ ವೇಳೆ ತಾನು ಊರಿಗೆ ತೆರಳುವುದಾಗಿ ಸಹೋದ್ಯೋಗಿ ಫಕೀರಪ್ಪ ಅವರಿಗೆ ತಿಳಿಸಿದ್ದರು. ಬಳಿಕ ಮೇ 17ರಂದು ಬೆಳಿಗ್ಗೆ ಸುಮಾರು 11 ಗಂಟೆಗೆ ದೂರವಾಣಿ ಕರೆ ಮಾಡಿ ವಿಜಯಪುರ ತಲುಪಿರುವುದಾಗಿ ಮಾಹಿತಿ ನೀಡಿದ್ದರು.

ಆ ನಂತರ ಸುರೇಶ್ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಮನೆಗೂ ಆಗಮಿಸದೇ ಹಾಗೂ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದಾರೆ. ಸಂಬಂಧಿಕರು ಹಾಗೂ ಕುಟುಂಬಸ್ಥರು ವಿವಿಧ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಇದುವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮೊ.ನಂ. 59/2026, ಗಂಡಸು ಕಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಕಾಣೆಯಾದ ಯುವಕನ ವಿವರ:

ಹೆಸರು: ಸುರೇಶ್
ತಂದೆ: ಭೀಮರಾಯ ಗೋಡೂರ
ವಯಸ್ಸು: 23 ವರ್ಷ
ಎತ್ತರ: 5 ಅಡಿ 6 ಇಂಚು
ಚಹರೆ: ಕಪ್ಪು ಮೈಬಣ್ಣ, ಸಾಧಾರಣ ಶರೀರ
ವಿಶೇಷ ಗುರುತು: ಬಲಗೈಯಲ್ಲಿ ಹುಲಿ ಚಿತ್ರದ ಟ್ಯಾಟೂ
ಶಿಕ್ಷಣ: 10ನೇ ತರಗತಿ
ಧರಿಸಿದ್ದ ಉಡುಪು: ಕಪ್ಪು ಬಣ್ಣದ ಟೀ-ಶರ್ಟ್ ಹಾಗೂ ನೀಲಿ ಬಣ್ಣದ ಪ್ಯಾಂಟ್
ತಿಳಿದಿರುವ ಭಾಷೆ: ಕನ್ನಡ

ಕಾಣೆಯಾದ ಸುರೇಶ್ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಮಂಗಳೂರು ನಗರ ಪೊಲೀಸ್ ನಿಯಂತ್ರಣ ಕೊಠಡಿ (0824-2220800) ಅಥವಾ ಕೊಣಾಜೆ ಪೊಲೀಸ್ ಠಾಣೆ (0824-2220536, 9480802350) ಸಂಖ್ಯೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.


Spread the love
Subscribe
Notify of

0 Comments