ಅ.22 ರಂದು ಕಪಿಲಾ ಗೋ ಶಾಲೆಯಲ್ಲಿ ಸಾರ್ವಜನಿಕ ಗೋಪೂಜಾ ಕಾರ್ಯಕ್ರಮ

Spread the love

ಅ.22 ರಂದು ಕಪಿಲಾ ಗೋ ಶಾಲೆಯಲ್ಲಿ ಸಾರ್ವಜನಿಕ ಗೋಪೂಜಾ ಕಾರ್ಯಕ್ರಮ

ಮಂಗಳೂರು: ಪ್ರಕೃತಿ- ಪಶು ಸಂರಕ್ಷಣೆ, ಅಳಿವಿನಂಚಿನ ದೇಸಿ ಗೋವು ಸಂತತಿ ರಕ್ಷಣೆ ಹಾಗೂ ಗೋವಿನ ಪಾವಿತ್ರೃತೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಆರಂಭಗೊಂಡ ಕೆಂಜಾರಿನ ಕಪಿಲಾ ಪಾರ್ಕ್ ಗೋ ಶಾಲೆಯಲ್ಲಿ ಅ.22ರಂದು ಬೆಳಗ್ಗೆ 6ರಿಂದ 11.30ರ ವರೆಗೆ 108 ಕಪಿಲಾ ಗೋವಿಗೆ ಸಾರ್ವಜನಿಕ ಗೋಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ಕಪಿಲಾ ಗೋ ಶಾಲೆಯ ಮುಖ್ಯಸ್ಥರಾದ ಪ್ರಕಾಶ್ ಶೆಟ್ಟಿ ಹೇಳಿದರು.

ದೀಪಾವಳಿಯ ವಿಶೇಷ ಸಂದರ್ಭ ಸಾರ್ವಜನಿಕರಿಗೆ ಗೋವಿನ ಅನುಗ್ರಹ ಪ್ರಾಪ್ತಿಗಾಗಿ ಕಪಿಲಾ ಪಾರ್ಕ್ ಗೋ ಶಾಲೆಯಲ್ಲಿ ನಡೆಯಲಿರುವ 108 ಕಪಿಲಾ ಗೋಪುಜಾ ಕಾರ್ಯಕ್ರಮದ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಪೂಜ್ಯನೀಯ ಗೋವಿನ ಸಂತತಿ ರಕ್ಷಣೆಗಾಗಿ 2012ರಲ್ಲಿ ಸ್ಥಾಪಿಸಲಾಗಿದ್ದು, 2ಗೋವುಗಳಿಂದ ಆರಂಭವಾದ ಈ ಕಪಿಲಾ ಗೋ ಶಾಲೆ ಇಂದು 600ಕ್ಕೂ ಅಧಿಕ ಗೋವಿಗಳು ಇಲ್ಲಿ ಪಾಲನೆಯಾಗುತ್ತಿದೆ. ಕಪಿಲಾ ಗೋ ಶಾಲೆಯನ್ನು ಅಳಿವಿನಂಚಿನ ದೇಸಿ ಗೋವು ಸಂತತಿ ರಕ್ಷಣೆ ಉದ್ದೇಶದಿಂದ ಮಾತ್ರ ಮುನ್ನಡೆಸಲಾಗುತ್ತಿದ್ದು, ಯಾವುದೇ ಗೋವು ಸಂಬಂದಿತ ಉದ್ಯಮ ಇಲ್ಲಿ ನಡೆಸಲಾಗುತ್ತಿಲ್ಲ. ದಿನದಿಂದ ದಿನಲ್ಲಿ ಇಲ್ಲಿ ಗೋವುಗಳ ಸಂಖ್ಯೆ ವೃದ್ದಿಯಾಗುತ್ತಿದೆ. ಇಲ್ಲಿನ ಗೋವುಗಳ ಹಾಲನ್ನು ಮಾರಲಾಗುತ್ತಿಲ್ಲ, ಬದಲಾಗಿ ಕರುಗಳಿಗೆ ಉಣಿಸಲಾಗುತ್ತಿರುವುದು ಇಲ್ಲಿನ ವಿಶೇಷ ಎಂದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಾಗೂ ಉದ್ಯಮಿ ಸುರೇಶ್ ಶೆಟ್ಟಿ ಮಾತನಾಡಿ, ಕಪಿಲಾ ಗೋ ಶಾಲೆಯಲ್ಲಿ ದಿನದಿಂದ ದಿನಲ್ಲೆ ಗೋವುಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಗೋವುಗಳಿಗೆ ನಿರಾಳವಾಗಿ ನಡೆದಾಡಲು ಸ್ಥಳದ ಕೊರತೆ ಇದೆ. ಸುಮಾರು 50ಸಾವಿರ ಚ.ಅಡಿ ವಿಸ್ತೀರ್ಣದ ಗೋ ಸಾಲೆಯನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಸುಮಾರು 4 ಕೋ.ರೂ ವೆಚ್ಚದ ಯೋಜನೆಯ ನೀಲನಕಾಶೆ ಸಿದ್ದಪಡಿಸಲಾಗಿದೆ. ದಾನಿಗಳ ಸಹಕಾರದಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲೇ ಸುಸಜ್ಜಿತ ಗೋ ಶಾಲೆ ನಿರ್ಮಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಸಾರ್ವಜನಿಕ ಗೋಪೂಜಾ ಕಾರ್ಯಕ್ರಮ ಜತೆಗೆ ಶ್ರೀ ಅಯ್ಯಪ್ಪ ಭಕ್ತವೃಂದ ಆಕಾಶಭವನ ಹಾಗೂ ಶಿವನಗರ ಭಜಕ ವೃಂದ ಶಿವನಗರ ಕಾವೂರು ತಂಡಗಳಿಂದ ಭಜನಾ ಸಂಕೀರ್ತನಾ ಸೇವೆ ನಡೆಯಲಿದೆ ಎಂದರು.

ರಾಜ್ಯದಲ್ಲೇ ಅತೀ ವಿರಳವಾಗಿರುವ ದೇಸಿ ಗೋವು ಸಂತತಿಯಾದ ಕಪಿಲಾ ಗೋತಳಿಯು ಸಧ್ಯಕ್ಕೆ ಕಪಿಲಾ ಗೋ ಶಾಲೆಯಲ್ಲಿ ಅತೀ ಹೆಚ್ಚಾಗಿ ಸಂರಕ್ಷಿಸಲಾಗಿದೆ. ಪೌರಾಣಿಕವಾಗಿ ಅತೀ ಹೆಚ್ಚಿನ ಮಹತ್ವ ಪಡೆದಿರುವ ಈ ಗೋ ತಳಿ ನಶಿಸುವ ಹಂತದಲ್ಲಿರುವುದರಿಂದ ಅತೀ ಹೆಚ್ಚು ಕಪಿಲಾ ಗೋತಳಿ ಸಂರಕ್ಷಣೆ ಮಾಡಲಾಗಿದೆ. ಉತ್ತಮ ಔಷಧೀಯ ಗುಣಗಳಿರುವ ಇದರ ಹಾಲು ಅಂಮೃತಕ್ಕೆ ಸಮ ಎಂದು ವೇದಗಳಲ್ಲಿ ಉಲ್ಲೇಖವಿರುವುದನ್ನೂ ಕಾಣಬಹುದು, ಜತೆಗೆ ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ ಎಂದು ಕಪಿಲಾ ಗೋ ಶಾಲೆಯ ಮುಖ್ಯಸ್ಥರಾದ ಪ್ರಕಾಶ್ ಶೆಟ್ಟಿ ಹೇಳಿದರು.

ದೀಪಾವಳಿಯ ವಿಶೇಷ ಸಂದರ್ಭ ಸಾರ್ವಜನಿಕರಿಗೆ ಗೋವಿನ ಅನುಗ್ರಹ ಪ್ರಾಪ್ತಿಗಾಗಿ ಕಪಿಲಾ ಪಾರ್ಕ್ ಗೋ ಶಾಲೆಯಲ್ಲಿ ನಡೆಯಲಿರುವ 108 ಕಪಿಲಾ ಗೋಪುಜಾ ಕಾರ್ಯಕ್ರಮದ ಆಮಂತ್ರಣಪತ್ರಿಕೆಯನ್ನು ಬಿಡುಗಡೆಗೊಳಿಸಿ ಪ್ರಕಾಶ್ ಶೆಟ್ಟಿ ಬಿಡುಗಡೆಗೊಳಿಸಿದರು.

ಕಪಿಲಾ ಪಾರ್ಕ್ ಗೋ ಶಾಲೆಯಲ್ಲಿ ನಡೆಯಲಿರುವ 108 ಕಪಿಲಾ ಗೋಪುಜಾ ಕಾರ್ಯಕ್ರಮದ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಲಾಯಿತು. ಜೀರ್ಣೋದ್ದಾರ ಸಮಿತಿ ಸಂಚಾಲಕ ರವಿ ಕಾವೂರ್, ಪ್ರಮುಖರಾದ ಸಂತೋಷ್ ಕಾವೂರು, ಯತೀಶ್ ಕುಮಾರ್ ಉದ್ದರು.


Spread the love
Subscribe
Notify of

0 Comments
Inline Feedbacks
View all comments