ಆನ್‌ಲೈನ್‌ ನಲ್ಲಿ ವಿಡಿಯೋ ಕರೆ ಮಾಡಿ ವಂಚನೆ ಪ್ರಕರಣ: ರಾಜಸ್ತಾನದ ಆರೋಪಿ ಬಂಧನ; ಅಪ್ರಾಪ್ತ ಬಾಲಕ ವಶಕ್ಕೆ

Spread the love

ಆನ್‌ಲೈನ್‌ ನಲ್ಲಿ ವಿಡಿಯೋ ಕರೆ ಮಾಡಿ ವಂಚನೆ ಪ್ರಕರಣ: ರಾಜಸ್ತಾನದ ಆರೋಪಿ ಬಂಧನ; ಅಪ್ರಾಪ್ತ ಬಾಲಕ ವಶಕ್ಕೆ

ಉಡುಪಿ: ಆನ್‌ಲೈನ್‌ನಲ್ಲಿ ವಿಡಿಯೋ ಕರೆ ಮಾಡಿ ಲಕ್ಷಾಂತರ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಾಲಕ ಸೇರಿದಂತೆ ಇಬ್ಬರು ಆರೋಪಿಗಳನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಯುವತಿಗೆ ವಿಡಿಯೋ ಕರೆ ಮಾಡಿದ್ದು, ಯುವತಿ ವಿಡಿಯೋ ಕರೆ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಆಕೆಯ ಮುಖ ಇರುವ ಮಾರ್ಪಿಂಗ್ ಮಾಡಿದ ನಗ್ನ ವಿಡಿಯೋವನ್ನು ಅವರ ವಾಟ್ಸಾಪ್ ನಂಬರಿಗೆ ಕಳುಹಿಸಿ, ಹಣದ ಬೇಡಿಕೆ ಇಡಲಾಗಿತ್ತು.

ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡುವುದಾಗಿ ಬೆದರಿಸಲಾಗಿತ್ತು. ಅದರಂತೆ ಯುವತಿ ಅಪರಿಚಿತ ರಿಗೆ ಹಂತ-ಹಂತವಾಗಿ ಒಟ್ಟು 4,44,999ರೂ. ಹಣವನ್ನು ವರ್ಗಾಯಿಸಿ ಕೊಂಡು ಮೊಸ ಮಾಡಿರುವುದಾಗಿ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಸೆನ್ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಹಾಗೂ ಎಸ್ಸೈ ಹರೀಶ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ, ಆರೋಪಿ ಕಾನೂನು ಸಂಘರ್ಷ ಒಳಗಾದ ಬಾಲಕನನ್ನು ವಶಕ್ಕೆ ಪಡೆದಿದ್ದು, ಆರೋಪಿ, ರಾಜ್ಯಸ್ತಾನದ ಜೈದ್ ಮೊಹಮ್ಮದ್ ಜೈದ್ ಖಾನ್(19) ಎಂಬಾತನನ್ನು ಬಂಧಿಸಿತು. ಇವರಿಂದ ಒಟ್ಟು 5 ಮೊಬೈಲ್ ಪೋನ್ ಹಾಗೂ 2,00,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರಿಗೆ ಶೋಧ ಕಾರ್ಯ ಮುಂದುವರೆಸಲಾಗಿದೆ.

ಪೊಲೀಸ್ ತಂಡವು ರಾಜಸ್ಥಾನ, ಗೋವಾ ರಾಜ್ಯ ವಿವಿಧೆಡೆ ಕಾರ್ಯಾ ಚರಣೆ ನಡೆಸಿ ಆರೋಪಿಯನ್ನು ಗೋವಾ ರಾಜ್ಯದ ಮಡಗಾಂವ್ ನಗರದ ರೈಲು ನಿಲ್ದಾಣದ ಬಳಿ ವಶಕ್ಕೆ ಪಡೆದಿತ್ತು.


Spread the love
Subscribe
Notify of

0 Comments
Inline Feedbacks
View all comments