ಉಡುಪಿ ನಗರಸಭೆಯ ವತಿಯಿಂದ 76 ಮಂದಿ ಫಲಾನುಭವಿಗಳಿಗೆ ಟೈಲರಿಂಗ್ ಯಂತ್ರ ವಿತರಣೆ

Spread the love

ಉಡುಪಿ ನಗರಸಭೆಯ ವತಿಯಿಂದ 76 ಮಂದಿ ಫಲಾನುಭವಿಗಳಿಗೆ ಟೈಲರಿಂಗ್ ಯಂತ್ರ ವಿತರಣೆ

ಉಡುಪಿ:  ನಗರಸಭೆಯ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಶೇ. 7.25 ಬಡಜನರ ಕಲ್ಯಾಣ ಕಾರ್ಯಕ್ರಮದ ಯೋಜನೆಯಡಿ 76 ಮಂದಿ ಫಲಾನುಭವಿಗಳಿಗೆ ಮಂಜೂರಾದ ಟೈಲರಿಂಗ್ ಯಂತ್ರಗಳನ್ನು ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ವಿತರಿಸಿದರು.

ಉಡುಪಿ ನಗರ ಸಭೆಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ರವರು ಉಡುಪಿ ನಗರಸಭೆ ವತಿಯಿಂದ 76 ಫಲಾನುಭವಿಗಳಿಗೆ ವಿತರಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದ ಅರ್ಹ ವ್ಯಕ್ತಿಗಳಿಗೆ ಟೈಲರಿಂಗ್ ವೃತ್ತಿ ನಡೆಸಿ ಸ್ವಾವಲಂಬಿ ಬದುಕು ರೂಪಿಸಲು ಸಹಕಾರ ನೀಡಿದಂತಾಗಿದ್ದು, ಮುಂದಿನ ದಿನಗಳಲ್ಲಿಯೂ ಸ್ವ ಉದ್ಯೋಗ ನಡೆಸಲು ಮುಂದಾಗುವ ವ್ಯಕ್ತಿಗಳಿಗೆ ನಗರಸಭೆ ಮೂಲಕ ಸದಾ ಸಹಕಾರ ನೀಡಲು ವಿಶೇಷ ಆದ್ಯತೆ ವಹಿಸುವುದಾಗಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ನಗರಸಭೆ ಅಧ್ಯಕ್ಷರಾದ  ಪ್ರಭಾಕರ ಪೂಜಾರಿ, ಉಪಾಧ್ಯಕ್ಷರಾದ  ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ  ಸುಂದರ ಕಲ್ಮಾಡಿ, ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments