ಉಡುಪಿ ಬ್ಲಾಕ್ ಕಾಂಗ್ರೆಸ್ಸಿನಿಂದ ನಿವೃತ್ತ ಸೈನಿಕರಿಗೆ ಗೌರವಾರ್ಪಣೆ
ಉಡುಪಿ: ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಕಾರ್ಗಿಲ್ ವಿಜಯ ದಿನದ ನಿಟ್ಟಿನಲ್ಲಿ ನಿವೃತ್ತ ಸೈನಿಕರಾದ ಕೊಡವೂರು ಮೂಡುಬೆಟ್ಟಿನ ಹವಾಲ್ದಾರ್ ನವೀನ್ ಕ್ರಿಸ್ಟೋಫರ್, ತೆಂಕನಿಡಿಯೂರಿನ ಲ್ಯಾಂಸ್ ನಾಯಕ್ ಯಶವಂತ ಪೂಜಾರಿ, ದೊಡ್ಡಣಗುಡ್ಡೆಯ ಏ.ಎಸ್.ಐ/ಆರ್.ಓ ಕೇಶವ ಆಚಾರ್ಯ ಅವರಿಗೆ ಶಾಲು ಹೊದಿಸಿ ಹಾರ ಹಾಕಿ ಗೌರವಿಸಿಲಾಯಿತು.
ಗೌರವಾರ್ಪಣೆ ಪಡೆದುಕೊಂಡ ಮೂವರು ನಿವೃತ್ತ ಸೈನಿಕರಾದ ನವೀನ್ ಕ್ರಿಸ್ಟೋಫರ್, ಯಶವಂತ ಪೂಜಾರಿ, ಕೇಶವ ಆಚಾರ್ಯ ಅವರು ತಾವು ಸೇನೆಯಲ್ಲಿ ಸೇವೆ ಸಲ್ಲಿಸಿದ ದಿನದ ನೆನಪುಗಳನ್ನು ಹಂಚಿಕೊಂಡು ಚಾರಿತ್ರಿಕ ದಿನದಂದು ತಮ್ಮ ಮನೆಗೆ ಬಂದು ತಮ್ಮನ್ನು ಗೌರವಿಸಿದಕ್ಕಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಮಾಜಿ ನಗರಸಭಾ ಸದಸ್ಯರಾದ ಆರ್.ಕೆ.ರಮೇಶ್ ಪೂಜಾರಿ, ಸಂಧ್ಯಾ ತಿಲಕ್ ರಾಜ್, ನಾರಾಯಣ ಕುಂದರ್, ಗಣಪತಿ ಶೆಟ್ಟಿಗಾರ್, ಸತೀಶ್ ಪುತ್ರನ್ ದೊಡ್ಡಣಗುಡ್ಡೆ, ಗಣೇಶ್ ನೆರ್ಗಿ, ತೆಂಕನಿಡಿಯೂರು ಪಂಚಾಯತ್ ಸದಸ್ಯರಾದ ಪ್ರಥ್ವಿರಾಜ್ ಶೆಟ್ಟಿ, ಸತೀಶ್ ನಾಯ್ಕ್, ವೆಂಕಟೇಶ್ ಕುಲಾಲ್, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ, ಸುಂದರಿ ಪುತ್ತೂರು, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳಾದ ಸತೀಶ್ ಮಂಚಿ, ಚಂದ್ರಮೋಹನ್ ಚಿಟ್ಪಾಡಿ, ಸತೀಶ್ ಕೊಡವೂರು, ಅರ್ಚನಾ ದೇವಾಡಿಗ, ಸುಪ್ರೀತಾ, ಜಿಲ್ಲಾ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಸಂಜಯ್ ಆಚಾರ್ಯ, ಕಾಂಗ್ರೆಸ್ ಪಕ್ಷದ ನಾಯಕರಾದ ಉದಯ ಪೂಜಾರಿ ಪಂದುಬೆಟ್ಟು, ಸಾದಿಕ್ ಸಾಹೇಬ್ ಮೂಡುಬೆಟ್ಟು, ದಿನೇಶ್ ಮಧ್ವನಗರ, ಸುಕೇಶ್, ಸುವೀಝ್, ರವಿರಾಜ್, ಸಂಶದ್, ಕಿಶನ್, ವಿಷ್ಣುಮೂರ್ತಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಶ್ರೀನಾಥ್ ಭಟ್, ಕಾರ್ಯದರ್ಶಿ ನಿತಿನ್ ದೊಡ್ಡಣಗುಡ್ಡೆ, ದಿನೇಶ್ ದೊಡ್ಡಣಗುಡ್ಡೆ, ಸುರೇಶ್, ಸೀತಾರಾಮ್, ರಾಮ ಆಚಾರ್ಯ, ನಾಗೇಶ್ ಆಚಾರ್ಯ, ಭವ್ಯ ಡಿ, ಸುಮನ, ರೂಪಾ, ಸುಮತಿ, ಸಂಗೀತಾ, ಉದ್ಯಮಿ ಸಚಿನ್ ಮಣಿಪಾಲ ಹಾಗೂ ಇನ್ನಿತರರು ಉಪಸ್ಥಿತರಿದ್ದರು