ಉಡುಪಿ: ಸರಕಾರದ ಪ್ರಸ್ತಾವಿತ ಅಂಧಶ್ರದ್ಧಾ ನಿರ್ಮೂಲನಾ ಕಾನೂನಿನ ವಿರುದ್ಧ ಆಂದೋಲನ

Spread the love

ಉಡುಪಿ: ಕರ್ನಾಟಕ ಸರಕಾರದ ಪ್ರಸ್ತಾವಿತ ಅಂಧಶ್ರದ್ಧಾ ನಿರ್ಮೂಲನಾ ಕಾನೂನಿನ ವಿರುದ್ಧ ರಾಷ್ಟ್ರೀಯ ಹಿಂದೂ ಆಂದೋಲನ ದಿನಾಂಕ 10ರಂದು ಸರ್ವಿಸ್ ಬಸ್ ನಿಲ್ದಾಣದ ಬಳಿ ನಡೆಸಲಾಯಿತು.

Speech By Sri Dinesh Nayak 1

ಈ ಆಂದೋಲನದಲ್ಲಿ ಹಿಂದೂ ವಿದಿಜ್ಞ ಪರಿಷತ್ತಿನ ಉಡುಪಿಯ ನ್ಯಾಯಾವಾದಿಗಳಾದ ಶ್ರೀ ದಿನೇಶ್ ನಾಯಕ್, ವಿಶ್ವಹಿಂದೂ ಪರಿಷತ್ತಿನ ಶ್ರೀ ಚಿತ್ತರಂಜನ್ ಹೆಗ್ಡೆ, ಭಾರತ್ ಸ್ವಾಭಿಮಾನ್‍ನ ಶ್ರೀ ಹರೀಶ್ ಪಡುಕೆರೆ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ ರಾಮ ಶೆಟ್ಟಿಗಾರ ಮತ್ತು ಇತರ ಧರ್ಮಾಭಿಮಾನಿಗಳು ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ಮಾತನಾಡಿದ ಶ್ರೀ ದಿನೇಶ್ ನಾಯಕ್ ಇವರು ಸರಕಾರವು ಹಿಂದೂ ಮಠಾಧೀಶರನ್ನು, ಧಾರ್ಮಿಕ ನಾಯಕರನ್ನು ಚರ್ಚೆಗೆ ಕರೆಯದೇ ಹಾಗೂ ಅವರ ಅಭಿಪ್ರಾಯವನ್ನು ಪಡೆದುಕೊಳ್ಳದೇ ಈ ಕಾನೂನನ್ನು ಜಾರಿಗೊಳಿಸುವ ಪ್ರಯತ್ನ ಮಾಡುತ್ತಿದೆ. ಈ ಕಾನೂನಿನ ಮಂಡಳಿಯು ಹಿಂದೂ ಧರ್ಮದ ಮೇಲೆ ಶ್ರದ್ಧೆ ಇದರ ಹಾಗೂ ಹಿಂದೂ ವಿರೋಧಿ ವ್ಯಕ್ತಿಗಳಿಂದ ಕೂಡಿದೆ. ಈ ಮಂಡಳಿಯ ಸದಸ್ಯರಲ್ಲಿ ಬುದ್ಧಿ ಜೀವಿ, ಹಿಂದೂ ವಿರೋಧಿ ಹೇಳಿಕೆ ನೀಡುವ ಕೆ.ಎಸ್. ಭಗವಾನ್ ಕೂಡ ಒಬ್ಬರು. ಪ್ರಸ್ತುತ ಸರಕಾರವು ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಗೋ ಹತ್ಯೆಯು ಬಹು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದರೂ ಕೂಡ, ಸರಕಾರವು ಹಿಂದೂಗಳ ಧಾರ್ಮಿಕ ಭಾವನೆಯನ್ನು ಪರಿಗಣಿಸದೆ, ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುತ್ತಿಲ್ಲ. ಪ್ರಸ್ತಾವಿತ ಅಂಧಶ್ರದ್ಧಾನಿರ್ಮೂಲನ ಕಾನೂನು ಜಾರಿಗೊಂಡಲ್ಲಿ ಹಿಂದೂಗಳು ತಮ್ಮ ಧಾರ್ಮಿಕ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ತ ಹಿಂದೂಗಳು ಇದನ್ನು ವಿರೋಧಿಸಬೇಕೆಂದು ಕರೆ ನೀಡಿದರು.

ಹಿಂದೂ ಜನಜಾಗೃತಿ ಸಮಿತಿಯ ಶ್ರೀ ರಾಮ ಶೆಟ್ಟಿಗಾರ ಇವರು ಕರ್ನಾಟಕ ಸರಕಾರವು ಮಹಾರಾಷ್ಟ್ರದಂತೆ ಅಂಧಶ್ರದ್ಧಾ ನಿರ್ಮೂಲನ ಕಾನೂನು ಮಾಡುವ ನಿರ್ಣಯವನ್ನು ಘೋಷಿಸಿದೆ, ಅದು ಭಕ್ತರ ದೃಷ್ಟಿಯಿಂದ ಅನ್ಯಾಯಕಾರಿಯಿದೆ. ಸದ್ಯ ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರದ ಹಾವಳಿಯಿದೆ; ಆದ್ದರಿಂದ ಅದರ ವಿರೋಧದಲ್ಲಿ ಕಾನೂನು ಮಾಡಿ ಆ ಕ್ಷೇತ್ರದಲ್ಲಿಯೇ ನಿರ್ಬಂಧ ಹೇರುವ ಪ್ರಯತ್ನವು ಅಯೋಗ್ಯವಾಗಿದೆ. ಶಾಲೆಯಲ್ಲಿ ಅಯೋಗ್ಯ ಘಟನೆಗಳಾದರೆ ಯಾರೂ ಕಾನೂನು ಮಾಡಿ ಶಾಲೆಯನ್ನೇ ಮುಚ್ಚುವುದಿಲ್ಲ. ಹಿಂದೂ ಧರ್ಮದಲ್ಲಿನ ಸಾಧು-ಸಂತರು ಧರ್ಮದ ಕಲಿಕೆಯನ್ನು ನೀಡುತ್ತ ಧರ್ಮದಲ್ಲಿನ ಅಂಧಶ್ರದ್ಧೆಯ ಸಂದರ್ಭದಲ್ಲಿ ಅಷ್ಟೇ ಸ್ಪಷ್ಟವಾಗಿ ಭಕ್ತರನ್ನು ಜಾಗೃತ ಮಾಡಿದ್ದಾರೆ. ಅದಕ್ಕನುಸಾರ ಈ ಕಾರ್ಯವು ಪ್ರಬೋಧನಾತ್ಮಕ ಸ್ವರೂಪದ್ದಿದ್ದು, ಅದಕ್ಕಾಗಿ ಕಾನೂನು ಅನಾವಶ್ಯಕವಿದೆ. ಈ ಕಾನೂನು ಆಗಬೇಕೆಂದು ಪ್ರಯತ್ನಿಸುವ ತಥಾಕಥಿತ ಪ್ರಗತಿಪರರು ಮತ್ತು ನಾಸ್ತಿಕವಾದಿಗಳಿಗೆ ಶ್ರದ್ಧೆಯೆಂದರೆ ಏನು, ಎಂಬುದರ ಮಾಹಿತಿಯೇ ಇಲ್ಲ. ತಮ್ಮ ವ್ಯಾಪಾರ ನಡೆಯಬೇಕೆಂದು ಅವರ ಈ ಆಗ್ರಹವಿದೆ. ವಿದ್ಯಮಾನ ಭಾರತೀಯ ದಂಡಸಂಹಿತೆಯಲ್ಲಿನ ಕಲಂನುಸಾರ ಅಂಧಶ್ರದ್ಧೆಯ ಸಂದರ್ಭದಲ್ಲಿನ ಎಲ್ಲ ಅಪರಾಧಗಳ ಮೇಲೆ ಕ್ರಮ ಕೈಗೊಳ್ಳಬಹುದು. ಆದ್ದರಿಂದ ಹೊಸಹೊಸ ಕಾನೂನು ಮಾಡುವ ಅವಶ್ಯಕತೆಯಿಲ್ಲ. ಮಹಾರಾಷ್ಟ್ರದಲ್ಲಿ ನಾಸ್ತಿಕವಾದದವರ ಆಗ್ರಹದಿಂದಾಗಿ ಕಾನೂನಿನಲ್ಲಿ ಹಾಕಿದ ಅನೇಕ ತಪ್ಪಿನ ಕಲಂಗಳನ್ನು ನಮ್ಮ ಕಾನೂನುತಜ್ಞರು ಸರಕಾರದ ಗಮನಕ್ಕೆ ತಂದು ಕೊಟ್ಟಿದ್ದರಿಂದ ಸರಕಾರಕ್ಕೆ ಅವುಗಳನ್ನು ಕಡಿಮೆ ಮಾಡಬೇಕಾದವು. ಆದುದರಿಂದ, ಈ ವಿಷಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾನೂನುತಜ್ಞರ ಆಳವಾದ ಅಧ್ಯಯನವಿದ್ದು, ಕರ್ನಾಟಕ ಸರಕಾರವು ಕಾನೂನಿನ ಮಸೂದೆ ಸಮ್ಮತ ಮಾಡುವ ಮೊದಲು ಪ್ರಸಕ್ತ ಕಾನೂನುತಜ್ಞರೊಂದಿಗೆ ಒಮ್ಮೆ ಚರ್ಚಾ ಕೂಟ ಒದಗಿಸಬೇಕು, ಪ್ರಸ್ತಾವಿತ `ಅಂಧಶ್ರದ್ಧಾ ನಿರ್ಮೂಲನ ಕಾನೂನು’ ಧಾರ್ಮಿಕ ಶ್ರದ್ಧೆಗಳ ಅನ್ಯಾಯ ಮಾಡುವಂತಹದ್ದಾಗಿರುವುದರಿಂದ ಕರ್ನಾಟಕ ಸರಕಾರವು ಅದನ್ನು ಸಮ್ಮತ ಮಾಡಬಾರದು.

ಪಾಕಿಸ್ತಾನ ಪುರಸ್ಕೃತ ಜಿಹಾದಿ ಭಯೋತ್ಪಾದಕರಿಂದ ನಾಲ್ಕುವರೆ ಲಕ್ಷಕ್ಕಿಂತಲೂ ಹೆಚ್ಚು ಹಿಂದೂಗಳಿಗೆ ಕಾಶ್ಮೀರ ಕಣಿವೆಯಿಂದ ಇಸವಿ 1990ರಲ್ಲಿ ವಿಸ್ಥಾಪಿತವಾಗಬೇಕಾಯಿತು. ಈ ಘಟನೆಯು ಭಾರತದ ಪ್ರಜಾಪ್ರಭುತ್ವಕ್ಕೆ ಕಳಂಕವನ್ನುಂಟು ಮಾಡುವುದಾಗಿದ್ದರೂ, ಭಾರತ ಸರಕಾರವು ಇದರೆಡೆಗೆ ದುರ್ಲಕ್ಷಿಸಿದೆ. ಈ ಘಟನೆಗೆ 19 ಜನವರಿ 2016 ರಂದು 25 ವರ್ಷಗಳಾಗುತ್ತಿವೆ. ವರ್ಷ 1990 ರಿಂದ ಈ ವಿಸ್ಥಾಪಿತ ಹಿಂದೂಗಳ ಇನ್ನೂ ಪುನರ್ವಸತಿ ಆಗದೇ ಅವರು ನ್ಯಾಯದಿಂದ ವಂಚಿತರಿದ್ದಾರೆ. ಹಾಗೆಯೇ ಕಾಶ್ಮೀರದಲ್ಲಿನ ಹಿಂದೂಗಳ ಸುರಕ್ಷಿತ ಮರಳುವಿಕೆಗೆ ಸ್ವತಂತ್ರವಾಗಿ `ಪನೂನ್ ಕಾಶ್ಮೀರ’ ಹೆಸರಿನ ಕೇಂದ್ರಶಾಸಿತ ಕ್ಷೇತ್ರಕ್ಕೆ ಮನ್ನಣೆ ನೀಡಬೇಕು, ಕಾಶ್ಮೀರಿ ಹಿಂದೂಗಳ ಮೇಲಿನ ದೌರ್ಜನ್ಯಗಳಿಗೆ `ವಂಶಸಂಹಾರ’ ಎಂದು ಗುರುತಿಸಬೇಕು. ನ್ಯಾಯಾಲಯವಾದದ ಮೂಲಕ ನಿರ್ದಿಷ್ಟ ಕಾಲಮಿತಿಯಲ್ಲಿ ಆ ದೌರ್ಜನ್ಯಗಳ ವಿಚಾರಣೆಯಾಗಬೇಕು, ಎಂಬ ಬೇಡಿಕೆಯನ್ನೂ ಮಾಡಲಾಯಿತು.

ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಂಡಳಿಯ ಸದಸ್ಯರಾದ ಶ್ರೀ ಭುಜಂಗ ಶೆಟ್ಟಿ ಇವರು ಹಿಂದೂಗಳಾದ ನಾವು ಭಾರತ ದೇಶದಲ್ಲಿ ಬಹು ಸಂಖ್ಯಾತರಾದರೂ ಕೂಡ ಎಲ್ಲ ಧರ್ಮದವರೊಂದಿಗೆ ಅನ್ಯೋನ್ಯವಾಗಿ ಸಹಕಾರವನ್ನು ಕೊಡುತ್ತಾ ಬಾಳ್ವೆಯನ್ನು ಮಾಡುವವರಾಗಿದ್ದೇವೆ, ಹೀಗಿದ್ದರೂ ಕೂಡ ಅಲ್ಪ ಸಂಖ್ಯಾತರನ್ನು ಓಲೈಸಲು ಬಹು ಸಂಖ್ಯತರಾದ ನಮ್ಮನ್ನು ನಿರ್ಲಕ್ಷ್ಷಿಸಿ ನಮ್ಮ ವಿರುದ್ಧವಾದ ಕಾನೂನನ್ನು ತರಲು ರಾಜ್ಯ ಸರಕಾವು ಪ್ರಯತ್ನಿಸುತ್ತಿದೆ. ಇದನ್ನು ನಾವು ಹಿಂದೂಗಳು ನಿದ್ರೆಯಲ್ಲಿಯೂ ಕೂಡ ಒಪ್ಪುವ ವಿಚಾರವಲ್ಲ. ಇದನ್ನು ನಾವು ವಿರೋಧಿಸಬೇಕೆಂದು ಹೇಳಿದರು.


Spread the love