ಕರ್ನಾಟಕ ರಾಜ್ಯ ಕಂಬಳ ಸಂಘ ರಾಜ್ಯ ಕ್ರೀಡಾ ಸಂಸ್ಥೆಯಾಗಿ ಅಧಿಕೃತ ಮಾನ್ಯತೆ

Spread the love

ಕರ್ನಾಟಕ ರಾಜ್ಯ ಕಂಬಳ ಸಂಘ ರಾಜ್ಯ ಕ್ರೀಡಾ ಸಂಸ್ಥೆಯಾಗಿ ಅಧಿಕೃತ ಮಾನ್ಯತೆ

ಮಂಗಳೂರು: ಉಡುಪಿ ಮೂಲದ ಕರ್ನಾಟಕ ರಾಜ್ಯ ಕಂಬಳ ಸಂಘಕ್ಕೆ ರಾಜ್ಯ ಕ್ರೀಡಾ ಪ್ರಾಧಿಕಾರದಿಂದ ಅಧಿಕೃತ ಮಾನ್ಯತೆ ದೊರೆತಿದೆ. ಈ ಮಾನ್ಯತೆಯು ಕಂಬಳ ಸ್ಪರ್ಧೆಗಳನ್ನು ರಾಜ್ಯಾದ್ಯಂತ ನಡೆಸಲು ಮತ್ತು ಮೇಲ್ವಿಚಾರಣೆ ಮಾಡಲು ಸಂಘಕ್ಕೆ ಅಧಿಕಾರ ನೀಡುತ್ತದೆ, ಜೊತೆಗೆ ವಾರ್ಷಿಕ ಸರ್ಕಾರಿ ಅನುದಾನ ಪಡೆಯಲು ದಾರಿ ಮಾಡಿಕೊಟ್ಟಿದೆ. ಕಂಬಳವನ್ನು ರಾಜ್ಯ ಕ್ರೀಡಾ ಬಜೆಟ್‌ನಲ್ಲಿ ಸೇರಿಸಲಾಗುವುದು ಮತ್ತು ಮುಖ್ಯವಾಹಿನಿಯ ಕ್ರೀಡೆಗಳ ಸೌಲಭ್ಯಗಳು ದೊರೆಯಲಿವೆ.

ಕಂಬಳ ಕ್ರೀಡೆಗೆ ರಾಜ್ಯ ಕ್ರೀಡಾ ಸಂಸ್ಥೆಯಾಗಿ ‘ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್’ಗೆ ಮಾನ್ಯತೆ ನೀಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆದೇಶ ಹೊರಡಿಸಿದೆ. ಈ ಮಾನ್ಯತೆಯು ಮೂರು ವರ್ಷದ ಅವಧಿಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಅನ್ವಯವಾಗಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್ ಆರ್‌. ಅವರು ಈ ಆದೇಶದಲ್ಲಿ ತಿಳಿಸಿದ್ದಾರೆ.

ಕಂಬಳ ಕ್ರೀಡೆಯನ್ನು ಸಂಘಟಿಸುವ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್‌ಗೆ ಮಾನ್ಯತೆ ನೀಡುವಂತೆ ಕೋರಿ ಸಂಸ್ಥೆಯ ಅಧ್ಯಕ್ಷರು ಕರ್ನಾಟಕ ಕ್ರೀಡಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಸೋಸಿಯೇಷನ್‌ಗೆ ಮಾನ್ಯತೆ ನೀಡಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ 2025ರ ಮೇ 5ರಂದು ನಡೆದ ಸಭೆಯಲ್ಲಿ ರಾಜ್ಯದ ಗ್ರಾಮೀಣ ಕ್ರೀಡೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಹಾಗೂ ಕಂಬಳ ಕ್ರೀಡೆಯ ವಿಶೇಷತೆಯನ್ನು ಪರಿಗಣಿಸಿ ಅದಕ್ಕೆ ಮಾನ್ಯತೆ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು.

ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷರಾಗಿರುವ ಈ ಅಸೋಷಿಯೇಷನ್‌ನಲ್ಲಿ 18 ಮಂದಿ ಪದಾಧಿಕಾರಿಗಳಿದ್ದಾರೆ. ಜೀವಂಧರ್ ಬಲ್ಲಾಳ್‌, ಜೀವನದಾಸ ಅಡ್ಯಂತಾಯ ಹಾಗೂ ಗುಣಪಾಲ ಕಡಂಬ ಗೌರವ ಸಲಹೆಗಾರರಾಗಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಂಬಳವನ್ನು ಶಿಸ್ತುಬದ್ಧವಾಗಿ ಸಂಘಟಿಸಲು ಈ ಅಸೋಸಿಯೇಷನ್‌ ಕ್ರಮ ವಹಿಸುತ್ತದೆ. ಕಂಬಳ ಕ್ರೀಡೆಯ ವೇಳಾಪಟ್ಟಿಯನ್ನು ತಯಾರಿಸುತ್ತದೆ.


Spread the love
Subscribe
Notify of

0 Comments
Inline Feedbacks
View all comments