ಕಾರ್ಕಳ ತಾಲೂಕಿನ ವಿವಿಧೆಡೆ ಭಾರಿ ಗಾಳಿ ಮಳೆ – ಅಪಾರ ಹಾನಿ
ಕಾರ್ಕಳ: ರವಿವಾರ ಸಂಜೆ ಕಾರ್ಕಳ ತಾಲೂಕಿನ ವಿವಿಧ ಕಡೆಗಳಲ್ಲಿ ಬೀಸಿದ ಗಾಳೆ ಮಳೆಗೆ ಭಾರಿ ಹಾನಿ ಸಂಭವಿಸಿರುವ ಕುರಿತು ವರದಿಯಾಗಿದೆ.

ಗಾಳಿಯ ರಭಸಕ್ಕೆ ಕಾರ್ಕಳ ನಗರದ ಕುಂಟಲ್ಪಾಡಿ ಅಪಾರ್ಟ್ಮೆಂಟ್ ಮೇಲ್ಪಾವಣಿಗೆ ಅಳವಡಿಸಿದ ಶೀಟ್ ಸುಮಾರು 200 ಮೀಟರ್ ಸುತ್ತುಮುತ್ತು ಹಾರಿ ಹೋಗಿದ್ದು, ಇದರಿಂದ 5 ಮನೆಗಳು ಹಾನಿಗೀಡಾಗಿವೆ. ಗಾಳಿಯ ಅಬ್ಬರಕ್ಕೆ ಇದೇ ಪರಿಸರದ 7 ವಿದ್ಯುತ್ ಕಂಬಗಳು ಹಾನಿಗೀಡಾಗಿದೆ. ಎಪಿಎಂಸಿ ಬಳಿ ಬೃಹತ್ ಮರವೊಂದು ಧರೆಗುರುಳಿದೆ. ಪರನೀರು, ಬಾಲಾಜಿ ಶಿಬಿರ ಬಳಿ ಮನೆಗಳು ಹಾನಿಗೀಡಾಗಿದೆ.
ಅಲ್ಲದೆಗ್ರಾಮೀಣ ಪ್ರದೇಶದ ಗುರುಬೆಟ್ಟು, ಚಿಕ್ಕಬೆಟ್ಟು, ಮುರತ್ತಂಗಡಿ ಭಾಗಗಳಲ್ಲೂ ಭಾರಿ ಗಾಳಿ ಬೀಸಿದ್ದು ಅಪಾರ ಪ್ರಮಾಣದ ನಷ್ಟವುಂಟಾಗಿದೆ.
ನಗರದಲ್ಲಿ 5 :15ರಿಂದ 6 ಗಂಟೆವರೆಗೆ ಸಿಡಿಲು, ಮಿಂಚಿನ ಆರ್ಭಟದೊಂದಿಗೆ ಧಾರಾಕಾರ ಮಳೆಯಾಗಿತ್ತು. ರಾತ್ರಿ ಮತ್ತೆ 7:30ರಿಂದ ಮಳೆ ಪ್ರಾರಂಭವಾಗಿ ಸುಮಾರು ಅರ್ಧ ಗಂಟೆ ಕಾಲ ಮಳೆ ಸುರಿಯಿತು.













![Spanish Ambassador to India Launches ‘The Great Reset [CTRL+ALT+HUMAN]’ in Mangaluru](https://i0.wp.com/www.mangalorean.com/wp-content/uploads/2026/02/The-great-reset.471.jpg?resize=100%2C70&ssl=1)