ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದಿರಾ ಗಾಂಧಿ ಜನ್ಮ ದಿನಾಚರಣೆ
ಕುಂದಾಪುರ: ದೇಶದ ಬಡ ಜನತೆಯ ಜೀವನ ಮಟ್ಟವನ್ನು ಸುಧಾರಿಸುವ ಮತ್ತು ಬಡತನ ನಿರ್ಮೂಲನೆಯನ್ನು ಮಾಡುವ ಗುರಿಯನ್ನು ಹೊಂದಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ರಾಷ್ಟ್ರೀಯ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಿಂದ ಕುಡಿಯುವ ನೀರು , ಕೃಷಿ , ನೀರಾವರಿ , ಆರೋಗ್ಯ, ಶಿಕ್ಷಣಕ್ಕೆ ಒತ್ತು ನೀಡಿ , ಸಾಮಾಜಿಕ ಅಭಿವೃದ್ಧಿಗೆ ಕಾರಣರಾದರು. ಅಂದು ಚಾಲನೆ ನೀಡಿದ ಗರಿಬಿ ಹಟಾವೊ ಕಾರ್ಯಕ್ರಮದ ಮುಂದುವರಿದ ಭಾಗ ರಾಜ್ಯದಲ್ಲಿ ಜಾರಿ ಇರುವ ಗ್ಯಾರಂಟಿ ಯೋಜನೆ ಮತ್ತು ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಅಂತಹ ಯೋಜನೆಗಳು ದೇಶಕ್ಕೆ ಮಾದರಿಯಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಹೇಳಿದರು.

ಅವರು ಕುಂದಾಪುರದ , ಶಾಸ್ತ್ರೀ ಸರ್ಕಲ್ಲಿನಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಸಾರ್ವಜನಿಕರಿಗೆ ಬ್ಲಾಕ್ ಕಾಂಗ್ರೆಸ್ ನಿಂದ ಉಚಿತ ಉಪಹಾರ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ , ಮಹಿಳಾ ಬ್ಲಾಕ್ ಅಧ್ಯಕ್ಷೆ ದೇವಕಿ ಸಣ್ಣಯ್ಯ , ಇಂಟೆಕ್ ಅಧ್ಯಕ್ಷರಾದ ಚಂದ್ರ ಅಮೀನ್ , ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ , ಅಶೋಕ್ ಸುವರ್ಣ , ಸದಾನಂದ ಖಾರ್ವಿ , ಶಶಿಧರ ಕೋಟೆ , ಪಂಚಾಯತ್ ಸದಸ್ಯರಾದ ರೋಷನ್ ಬರೆಟ್ಟೊ , ಹಿರಿಯರಾದ ಶಿವರಾಮ ಪುತ್ರನ್ , ಗ್ಯಾರಂಟಿ ಸಮಿತಿಯ ಸದಸ್ಯರಾದ ಅಭಿಜಿತ್ ಪೂಜಾರಿ , ಆಶಾ ಕರ್ವಾಲ್ಲೊ , ಗಣೇಶ್ , ರಿಕ್ಷಾ ಚಾಲಕರ ಸಂಘದ ಉದಯಕುಮಾರ್, ಇರ್ಫಾನ್ , ಅರುಣ್ ಪಟೇಲ್ , ಡೇನ್ನಿಸ್ , ವಿವೇಕ್ ಚರ್ಚ್ ರಸ್ತೆ , ಕ್ಲಿಫರ್ಡ್ ಡಿಸಿಲ್ವಾ , ಲಕ್ಷ್ಮಣ ಬರೆಕಟ್ಟು , ಕುಮಾರ ಖಾರ್ವಿ ,ಪ್ರಭಾಕರ ಕಡ್ಗಿಮನೆ, ವೇಲಾ ಬ್ರಗಾಂಜ , ಮಂಗಳ ,ಸಾನ್ವಿ ,ಸಮ್ರಧ್ಧ್ , ಡ್ಯಾಫೋಡಿಲ್ ಕ್ರಾಸ್ಟೊ , ಪ್ಯಾಟ್ರಿಕ್ ಇನ್ನಿತರರು ಉಪಸ್ಥಿತರಿದ್ದರು.












