ಕೋಮುದ್ವೇಷ ಭಾಷಣ: ಭರತ್ ಕುಮ್ಡೇಲು ವಿರುದ್ದ ಪ್ರಕರಣ ದಾಖಲು

Spread the love

ಕೋಮುದ್ವೇಷ ಭಾಷಣ: ಭರತ್ ಕುಮ್ಡೇಲು ವಿರುದ್ದ ಪ್ರಕರಣ ದಾಖಲು
ಪುತ್ತೂರು : ಕೋಮುದ್ವೇಷದ ಭಾಷಣ ಮಾಡಿ ಶಾಂತಿ ಮತ್ತು ನೆಮ್ಮದಿಯನ್ನು ಕದಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭರತ್ ಕುಮ್ಡೇಲು ಎಂಬಾತನ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪುತ್ತೂರು ತಾಲೂಕಿನ ಕಸ್ಬಾ ಗ್ರಾಮದ ಬೈಪಾಸ್ ನಲ್ಲಿರುವ ಜೈನ ಭವನದಲ್ಲಿ ಗುರುವಾರ ಸಂಜೆ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಪುತ್ತೂರು ಪ್ರಖಂಡದ ವತಿಯಿಂದ ಇತ್ತೀಚೆಗೆ ಹತ್ಯೆಯಾದ ರೌಡಿ ಶೀಟರ್ ಸುಹಾಸ್ ಶೆಟ್ಟಿಗೆ ನುಡಿನಮನ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಭಾಗವಹಿಸಿದ್ದ ಭರತ್ ಕುಮ್ಡೇಲು ಕೋಮುದ್ವೇಷವನ್ನು ಉಂಟುಮಾಡುವಂತಹ ಭಾಷಣವನ್ನು ಮಾಡಿದ್ದು, ಆರೋಪಿಯ ಮಾತುಗಳಿಂದ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟಾಗುವಂತಹ ಸಾಧ್ಯತೆಗಳಿವೆ ಎಂದು ಆರೋಪಿಸಿ ಪುತ್ತೂರು ನಗರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.

ಆರೋಪಿತನ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ ಕ್ರ 35/2025 ಕಲಂ-196,353(2) BNS 2023. ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


Spread the love
Subscribe
Notify of

0 Comments
Inline Feedbacks
View all comments