ಜಿಲ್ಲೆಯ ಸೌಹಾರ್ದತೆಗೆ ಧಕ್ಕೆ ತರುವ ಹೇಳಿಕೆ ನೀಡಿದ ಶಾಸಕ ಯಶ್ಪಾಲ್ ವಿರುದ್ದ ಕ್ರಮ ಕೈಗೊಳ್ಳಿ – ಎಸ್ ಡಿಪಿಐ

Spread the love

ಜಿಲ್ಲೆಯ ಸೌಹಾರ್ದತೆಗೆ ಧಕ್ಕೆ ತರುವ ಹೇಳಿಕೆ ನೀಡಿದ ಶಾಸಕ ಯಶ್ಪಾಲ್ ವಿರುದ್ದ ಕ್ರಮ ಕೈಗೊಳ್ಳಿ ಎಸ್ ಡಿಪಿಐ

ಉಡುಪಿ: ನಿರಂತರ ಜಿಲ್ಲೆಯ ಸೌಹಾರ್ದತೆಗೆ ದಕ್ಕೆ ತರುವ ಹೇಳಿಕೆ ನೀಡುತ್ತಿರುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಎಸ್ ಡಿ ಪಿ ಐ ಉಡುಪಿ ಜಿಲ್ಲಾಧ್ಯಕ್ಷರಾದ ಆಸಿಫ್ ಕೋಟೇಶ್ವರ ಆಗ್ರಹಿಸಿದ್ದಾರೆ.

ಮೈಸೂರು ಸಂಸ್ಥಾನದ ಇತಿಹಾಸದ ಗಂಧಗಾಳಿ ತಿಳಿಯದ ಮತ್ತು ಸದಾ ಹಿಂದುತ್ವದ ಅಮಲಿನಲ್ಲಿರುವ ಉಡುಪಿ ಶಾಸಕ ಯಶಪಾಲ್ ಸುವರ್ಣ ರವರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ರನ್ನು ಆಯ್ಕೆ ಮಾಡಿರುವುದನ್ನು ವಿರೋಧಿಸಿ ಹೇಳಿಕೆ ನೀಡಿರುವುದು ಖಂಡನೀಯ. ದಸರಾ ಎಂಬುದು “ನಾಡ ಹಬ್ಬ” ನಾಡಿನ ಸರ್ವ ಜನಾಂಗದ ಜನರು ಅವರವರ ವಿಶಿಷ್ಟವಾದ ಆಚರಣೆಯ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸುದು ವಾಡಿಕೆಯಾಗಿದೆ.

ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆಯ ಅಹ್ವಾನವನ್ನು ವಿರೋಧಿಸಿ ಹೇಳಿಕೆ ನೀಡಿರುವುದು ಅವರ ಮುಸ್ಲಿಂ ವಿರೋಧಿ ಮನಸ್ಥಿತಿಯಾಗಿದೆ.

2017ರಲ್ಲಿ ನಿತ್ಯೋತ್ಸವದ ಕವಿ ನಿಸಾರ್ ಅಹ್ಮದ್ರವರು ಸಹ ದಸರಾ ಉದ್ಘಾಟನೆ ಮಾಡಿದ್ದು ಕರ್ನಾಟಕದ ಜನತೆ ಸ್ಮರಿಸುತ್ತಿರುದು ಉಡುಪಿಯ ಶಾಸಕ ಯಶಪಾಲ್ ಸುವರ್ಣರವರು ಮರೆತಂತಿದೆ. ಯಶ್ಪಾಲ್ ಸುವರ್ಣರವರು ಮತಾಂಧತೆ, ಭ್ರಷ್ಟತೆ, ಬೆತ್ತಲೆ ಪ್ರಕರಣ ಹಾಗೂ ಪ್ರತಿಯೊಂದು ವಿಷಯದಲ್ಲೂ ಧರ್ಮವನ್ನು ಹುಡುಕುವ ಚಾಳಿಯಿಂದಾಗಿ ಉಡುಪಿಯ ಮಾನ ಹರಾಜು ಮಾಡಿದ್ದಾರೆ.

ಇತ್ತೀಚೆಗೆ ಯುಟ್ಯೂಬರ್ ಸಮೀರ್ ವಿಷಯಕ್ಕೆ ಸಂಭಂದಿಸಿದಂತೆಯೂ ಗೂಂಡಾಗಳ ರೀತಿ ಹೇಳಿಕೆಯನ್ನು ನೀಡಿದ್ದರು. ತನ್ನ ಸ್ವ ಕ್ಷೇತ್ರಕ್ಕೆ ಹೆಚ್ಚಿನ ಅನುದಾನಕ್ಕೆ ಸರಕಾರವನ್ನು ಒತ್ತಾಯಿಸಬೇಕಾದ ಶಾಸಕರು ಧರ್ಮ ಧರ್ಮಗಳ ಮಧ್ಯ ಗೊಂದಲವನ್ನು ಸೃಷ್ಟಿಸುವ ಕೆಲಸವನ್ನು ಮಾಡುತ್ತಿರುದು ಉಡುಪಿ ಜನತೆಯ ತಲೆತಗ್ಗಿಸುವಂತೆ ಮಾಡಿದೆ.

ಜಿಲ್ಲೆಯ ಸೌಹಾರ್ದತೆಗೆ ಧಕ್ಕೆ ತರುವಂತಹ ಹೇಳಿಕೆ ನಿರಂತರವಾಗಿ ನೀಡುತ್ತಿರುವ ಉಡುಪಿ ಶಾಸಕ ಯಶಪಾಲ್ ಸುವರ್ಣರ ಮೇಲೆ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಕೇಸು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್ ಡಿ ಪಿ ಐ ಉಡುಪಿ ಜಿಲ್ಲಾಧ್ಯಕ್ಷರಾದ ಆಸಿಫ್ ಕೋಟೇಶ್ವರ ರವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments