ಡಿ. 16-17: ಉಡುಪಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ “ನಮ್ಮ ನಡೆ ವಾರ್ಡ್ ಕಡೆಗೆ”

Spread the love

ಡಿ. 16-17: ಉಡುಪಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ “ನಮ್ಮ ನಡೆ ವಾರ್ಡ್ ಕಡೆಗೆ”

ಉಡುಪಿ:  ಉಡುಪಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ವತಿಯಿಂದ ” ನಮ್ಮ ನಡೆ ವಾರ್ಡ್ ಕಡೆಗೆ ” ಕಾರ್ಯಕ್ರಮವು ಡಿಸೆಂಬರ್ 16 ರಂದು ಸರಳೆಬೆಟ್ಟು, ಸೆಟ್ಟಿ ಬೆಟ್ಟು, ಪರ್ಕಳ, ಈಶ್ವರನಗರ, ಮಣಿಪಾಲ, ಸಗ್ರಿ, ಇಂದ್ರಾಳಿ, ಕುಂಜಿಬೆಟ್ಟು, ಇಂದಿರಾನಗರ ಮತ್ತು ಕಸ್ತೂರ್ಬಾ ನಗರ ವಾರ್ಡ್ ಗಳಿಗೆ ಸಂಬಂಧಿಸಿದಂತೆ ಬೆಳಗ್ಗೆ 10 ಗಂಟೆಗೆ ಇಂದ್ರಾಳಿ ಯ ಅಂಬೇಡ್ಕರ್ ಭವನದಲ್ಲಿ ಹಾಗೂ ಗುಂಡಿಬೈಲು, ಕಕ್ಕುಂಜೆ ಕರಂಬಳ್ಳಿ, ಮೂಡು ಪೆರಂಪಳ್ಳಿ, ನಿಟ್ಟೂರು ಗೋಪಾಲಪುರ ಮತ್ತು ಕಡಿಯಾಳಿ ವಾರ್ಡ್ ಗೆ ಸಂಬಂಧಿಸಿದಂತೆ ಅಂದು ಮಧ್ಯಾಹ್ನ 3 ಗಂಟೆಗೆ ಗುಂಡಿಬೈಲು ಜನತಾ ವ್ಯಾಯಾಮ ಶಾಲೆಯಲ್ಲಿ ನಡೆಯಲಿದೆ.

ಡಿಸೆಂಬರ್ 17 ರಂದು ಬಡಗುಬೆಟ್ಟು, ಚಿಟ್ಪಾಡಿ, ಬನ್ನಂಜೆ, ತೆಂಕಪೇಟೆ, ಒಳಕಾಡು, ಬೈಲೂರು, ಕಿನ್ನಿಮೂಲ್ಕಿ, ಅಜ್ಜರಕಾಡು, ಶಿರಿಬೀಡು ಮತ್ತು ಅಂಬಲಪಾಡಿ ವಾರ್ಡ್ ಗಳಿಗೆ ಸಂಬಂಧಿಸಿದಂತೆ ಬೆಳಗ್ಗೆ 10 ಗಂಟೆಗೆ ಅಜ್ಜರಕಾಡು ಪುರಭವನ (ಊಟದ ಹಾಲ್) ನಲ್ಲಿ ಮತ್ತು ಕೊಳ, ವಡಾಭಾಂಡೇಶ್ವರ, ಮಲ್ಪೆ ಸೆಂಟ್ರಲ್, ಕೊಡವೂರು, ಕಲ್ಮಾಡಿ, ಮೂಡುಬೆಟ್ಟು, ಕೊಡಂಕೂರು ಮತ್ತು ಸುಬ್ರಹ್ಮಣ್ಯ ನಗರ ವಾರ್ಡ್ ಗಳಿಗೆ ಸಂಬಂಧಿಸಿದಂತೆ ಅಂದು ಮಧ್ಯಾಹ್ನ 3 ಗಂಟೆಗೆ ಆದಿ ಉಡುಪಿಯ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಉಡುಪಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರ ಕಚೇರಿ ಪ್ರಕಟಣೆ ತಿಳಿಸಿದೆ.


Spread the love
Subscribe
Notify of

0 Comments
Inline Feedbacks
View all comments