ದ.ಕ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಮಂಗಳೂರು: ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ನೆರವೇರಿಸಿ ಸಂದೇಶ ನೀಡಿದರು. ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಜೋಕಿಂ ಡಿಸೋಜ ಧ್ವಜ ಪ್ರಭಾರಿಯಾಗಿ ಕಾರ್ಯ ನಿರ್ವಹಿಸಿದರು.
ಈ ಸಂದರ್ಭ ಶಾಸಕ ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್.ಲೋಬೊ, ಮಾಜಿ ಮೇಯರ್ ಸುರೇಶ್ ಬಳ್ಳಾಲ್, ಡಿಸಿಸಿ ಉಪಾಧ್ಯಕ್ಷರಾದ ಟಿ.ಹೊನ್ನಯ್ಯ, ನೀರಜ್‌ಚಂದ್ರ ಪಾಲ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಸ್. ಅಪ್ಪಿ, ದ.ಕ. ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್, ಬ್ಲಾಕ್ ಅಧ್ಯಕ್ಷ ಜೆ.ಅಬ್ದುಲ್ ಸಲೀಂ, ಕೆ.ಪಿ. ಥಾಮಸ್, ಪಕ್ಷದ ಮುಖಂಡರಾದ ವಿಶ್ವನಾಥ್ ಬಜಾಲ್, ಲುಕ್ಮಾನ್ ಬಂಟ್ವಾಳ್, ಜಯಶೀಲ ಅಡ್ಯಂತಾಯ, ಹಯಾತುಲ್ಲಾ ಖಾಮಿಲ್, ಟಿ.ಕೆ.ಸುಧೀರ್, ಟಿ.ಡಿ. ವಿಕಾಸ್ ಶೆಟ್ಟಿ, ಶಬೀರ್ ಎಸ್, ಭಾಸ್ಕರ್ ರಾವ್, ಗಿರೀಶ್ ಶೆಟ್ಟಿ ಕದ್ರಿ, ಸಬಿತಾ ಮಿಸ್ಕಿತ್, ಚಂದ್ರಕಲಾ ಜೋಗಿ, ಗೀತಾ ಅತ್ತಾವರ, ಡೇನಿಸ್ ಡಿಸೋಜ, ಶೈಲಾ ನೀತು ಡಿಸೋಜ, ರಮಾನಂದ ಪೂಜಾರಿ, ಇ.ಕೆ. ಹುಸೈನ್, ಆಲ್ವಿನ್ ಪ್ರಕಾಶ್, ಲಕ್ಷ್ಮಣ್ ಶೆಟ್ಟಿ, ಅಬ್ದುಲ್ ಸಲೀಂ ಪಾಂಡೇಶ್ವರ, ದುರ್ಗಪ್ರಸಾದ್, ಹಬೀಬುಲ್ಲಾ ಕಣ್ಣೂರು, ಪೃಥ್ವಿರಾಜ್ ಪೂಜಾರಿ, ಗೀತಾ ಪ್ರವೀಣ್, ಫಯಾಝ್ ಅಮ್ಮೆಮ್ಮಾರ್, ಸೌಹಾನ್ ಎಸ್.ಕೆ. ಮತ್ತಿತರರು ಉಪಸ್ಥಿತರಿದ್ದರು.