ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಆರೋಪಿಯ ಬಂಧನ

Spread the love

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಆರೋಪಿಯ ಬಂಧನ

ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಆರೋಪಿಯನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಹಾರಾಷ್ಟ್ರ ಕರಾಡ್ ಗಣೇಶ್ ಲಕ್ಷ್ಮಣ್ ಸಕಟ್ ಎಂದು ಗುರುತಿಸಲಾಗಿದೆ.

ಉರ್ವಾ ಪೊಲಿಸ್ ಠಾಣೆಯಲ್ಲಿ ಬಿಜೈ ಭಾರತಿ ಬಿಲ್ಡರ್ಸ್ ಕಛೇರಿಗೆ ಭೂಗತ ಪಾತಕಿ ರವಿ ಪೂಜಾರಿ ಸಹಚರರು ನಡೆಸಿದ ಶೂಟ್ಔಟ್ ಗೆ ಸಂಬಂದಿಸಿದಂತೆ ಉರ್ವಾ ಪೊಲೀಸ್ ಠಾಣೆಯಲ್ಲಿ 23/2014, ಕಲಂ: 447,120(b) 307 IPC & 27 Arms Act, ರಂತೆ ಪ್ರಕರಣ ದಾಖಲಾಗಿದ್ದು, ಸದ್ರಿ ಪ್ರಕರಣದ ಆರೋಪಿಯಾಗಿದ್ದ, ಮಹಾರಾಷ್ಟ್ರ ಕರಾಡ್ ಗಣೇಶ್ ಲಕ್ಷ್ಮಣ್ ಸಕಟ್ ಈತನು ನ್ಯಾಯಾಲಯಕ್ಕೆ ಹಾಜರಾಗದೆ 2015 ರಿಂದ ತಲೆ ಮರೆಸಿಕೊಂಡಿದ್ದ.

ಈತನ ವಿರುದ್ದ ಮಾನ್ಯ ಜೆಎಂಎಫ್ ಸಿ 3ನೇ ನ್ಯಾಯಾಲಯ ಮಂಗಳೂರು ವಾರಂಟ್ ಹೊರಡಿಸಿದ್ದು, ಈತನನ್ನು ಮಹಾರಾಷ್ಟ್ರ ರಾಜ್ಯದ ಪಂಡರಾಪುರ ಎಂಬಲ್ಲಿ, ಪೊಲೀಸ್ ಆಯುಕ್ತರ ಮಾರ್ಗದರ್ಶನದಂತೆ ಉರ್ವಾ ಪೊಲೀಸ್ ಠಾಣಾ ನಿರೀಕ್ಷಕರ ತಂಡ ಎಎಸ್ಐ ವೇಣುಗೋಪಾಲ್, ಸಿಬ್ಬಂಧಿಗಳಾದ ಹೆಚ್ ಸಿ 949 ಪ್ರಮೋದ್, ಹೆಚ್ ಸಿ 956 ನಾರಾಯಣ, ಹೆಚ್ ಸಿ 622 ಗೋವಿಂದರಾಜ್ ರವರು ದಸ್ತಗಿರಿ ಮಾಡಿ ದಿನಾಂಕ 27.07.2025 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಈತನು ಕಾವೂರು ಪೊಲೀಸು ಠಾಣಾ ಅಪರಾಧ ಕ್ರಮಾಂಕ 44/2014 ಕಲಂ: 448, 507, 120(ಬಿ) ಜೊತೆಗೆ 34 IPC ಪ್ರಕರಣದಲ್ಲಿಯೂ ಆರೋಪಿಯಾಗಿದ್ದು, ಆತನ ವಿರುದ್ದ ನ್ಯಾಯಾಲಯವು ವಾರಂಟ್ ಹೊರಡಿಸಿರುತ್ತದೆ. ಮತ್ತು ಈತನ ವಿರುದ್ದ ಮಹಾರಾಷ್ಟ್ರ ರಾಜ್ಯದ ಸತಾರ ಜಿಲ್ಲೆ ಕರಾಡ್ ನಲ್ಲಿಯೂ ಆರ್ಮ್ಸ ಆ್ಯಕ್ಟ್ ಪ್ರಕರಣ ಇರುತ್ತದೆ.


Spread the love
Subscribe
Notify of

0 Comments
Inline Feedbacks
View all comments