ಪುತ್ತೂರು| ಅಪ್ರಾಪ್ತ ಬಾಲಕ, ಬಾಲಕಿಗೆ ಕಿರುಕುಳ ಆರೋಪ : ಇಬ್ಬರ ಬಂಧನ

Spread the love

ಪುತ್ತೂರು| ಅಪ್ರಾಪ್ತ ಬಾಲಕ, ಬಾಲಕಿಗೆ ಕಿರುಕುಳ ಆರೋಪ : ಇಬ್ಬರ ಬಂಧನ

ಪುತ್ತೂರು: ನಗರದ ಹೊರವಲಯದ ಬೀರಮಲೆ ಗುಡಕ್ಕೆ ಪೃಕೃತಿ ವೀಕ್ಷಣೆಗೆಂದು ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದ ಬಾಲಕ ಮತ್ತು ಬಾಲಕಿಯನ್ನು ತಡೆದು ನಿಲ್ಲಿಸಿದ ತಂಡವೊಂದು ಅವರ ಮೇಲೆ ಅನೈತಿಕ ಪೊಲೀಸ್‌ಗಿರಿ ನಡೆಸಿದ ಪ್ರಕರಣ ಶನಿವಾರ ಪುತ್ತೂರಿನಲ್ಲಿ ನಡೆದಿದೆ.

ಈ ಬಗ್ಗೆ ರವಿವಾರ ಬಾಲಕನ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಅರೋಪಿಗಳನ್ನು ಬಂಧಿಸಿದ್ದಾರೆ.

ಕಡಬ ತಾಲೂಕಿನ ಕುದ್ಮಾರು ನಿವಾಸಿ ಪುರುಷೋತ್ತಮ (43) ಮತ್ತು ಪುತ್ತೂರು ತಾಲೂಕಿನ ಆರ್ಯಾಪು ನಿವಾಸಿ ರಾಮಚಂದ್ರ (38) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕ ಮತ್ತು ಬಾಲಕಿ ಬೀರಮಲೆ ಗುಡ್ಡಕ್ಕೆ ಆಗಮಿಸಿರುವುದನ್ನು ಗಮನಿಸಿದ ದುಷ್ಕರ್ಮಿಗಳ ತಂಡ ಅವರನ್ನು ತಡೆದು ನಿಲ್ಲಿಸಿ ಅವರ ಹೆಲ್ಮೆಟ್ ಕಸಿದುಕೊಂಡು ಹಲ್ಲೆಗೆ ಯತ್ನಿಸಿದ್ದರು ಹಾಗೂ ಬಾಲಕನನ್ನು ‘ನೀನು ಬ್ಯಾರಿಯಾ’ ಎಂದು ಪ್ರಶ್ನಿಸುತ್ತಾ ಬೆದರಿಸುವ ವೀಡಿಯೊ ವೈರಲ್‌ ಆಗಿದೆ. ಇದರಿಂದಾಗಿ ಭಯಗೊಂಡ ಅವರಿಬ್ಬರೂ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬೈಕ್‌ನಲ್ಲಿ ಅಲ್ಲಿಂದ ಹೋಗಿದ್ದಾರೆ. ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಆ ಫೋಟೊ ಮತ್ತು ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು.

ಪ್ರಕರಣದ ಬಗ್ಗೆ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿ ತನ್ನ ಅಪ್ರಾಪ್ತ ಪ್ರಾಯದ ಮಗನು, ಮೋಟಾರು ಸೈಕಲ್ ನಲ್ಲಿ ಶನಿವಾರ ಮಧ್ಯಾಹ್ನ ಆತನ ಪರಿಚಯದ ಬಾಲಕಿಯೊಂದಿಗೆ ಪುತ್ತೂರು ಕಸ್ಬಾ ಗ್ರಾಮದ ಬೀರಮಲೆ ಬೆಟ್ಟ ಎಂಬಲ್ಲಿ ಕುಳಿತುಕೊಂಡಿದ್ದಾಗ, ಅಪರಿಚಿತ ವ್ಯಕ್ತಿಗಳು ಮಗನನ್ನು ಹಾಗೂ ಬಾಲಕಿಯನ್ನು ಅಕ್ರಮವಾಗಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ನಿಮ್ಮ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆಂದು ಬೆದರಿಕೆ ಹಾಕಿದ್ದಾರೆ ಅಲ್ಲದೆ ಮಗನನ್ನು ಬೇರೆ ಧರ್ಮದವನೆಂದು ನಿಂದಿಸಿ, ಸ್ಥಳದಲ್ಲಿದ್ದ ಇತರ ಸಾರ್ವಜನಿಕರನ್ನು ಕರೆದು ಅವಮಾನಿಸಿ ವಿಡಿಯೋ ಮಾಡಿರುತ್ತಾರೆ. ನಂತರ ಅಪರಿಚಿತ ವ್ಯಕ್ತಿಗಳು ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ವಾಟ್ಸಪ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಹರಿಯಬಿಟ್ಟಿದ್ದಾರೆ. ತನ್ನ ಮಗನನ್ನು ಬೇರೆ ಧರ್ಮದವನೆಂದು ಸದ್ರಿ ವೀಡಿಯೋದಲ್ಲಿ ಹೇಳಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ದೂರು ದಾಖಲಿಸಿಕೊಂಡಿರುವ ಪುತ್ತೂರು ನಗರ ಠಾಣೆಯ ಪೊಲೀಸರು ಈ ಘಟನೆಯ ಮೂಲಕ ಕೋಮು ಸಾಮರಸ್ಯ ಕದಡಲು ಹಾಗೂ ಧರ್ಮಗಳ ನಡುವೆ ದ್ವೇಷ ಉಂಟಾಗಲು ಪ್ರಚೋದನೆ ಮಾಡಿದ ಆರೋಪದಲ್ಲಿ ಅ.ಕ್ರ: 54/2025, ಕಲಂ: 126(2), 352, 351(2), 353(1)(ಅ), 57, 196(1)(ಸಿ) ಜೊತೆಗೆ 3(5) ಬಿಎನ್‌ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments