ಪ್ರಿಯಾಂಕ ಖರ್ಗೆ ಇನ್ನೊಂದು ಜನ್ಮ  ಹುಟ್ಟಿ ಬಂದರೂ ಆರ್ ಎಸ್ ಎಸ್ ಮೇಲೆ ಕ್ರಮ ಅಸಾಧ್ಯ – ಯಶ್ಪಾಲ್ ಸುವರ್ಣ

Spread the love

ಪ್ರಿಯಾಂಕ ಖರ್ಗೆ ಇನ್ನೊಂದು ಜನ್ಮ  ಹುಟ್ಟಿ ಬಂದರೂ ಆರ್ ಎಸ್ ಎಸ್ ಮೇಲೆ ಕ್ರಮ ಅಸಾಧ್ಯ – ಯಶ್ಪಾಲ್ ಸುವರ್ಣ

ಉಡುಪಿ: ಪ್ರಿಯಾಂಕ ಖರ್ಗೆ ಇನ್ನೊಂದು ಜನ್ಮದಲ್ಲಿ ಹುಟ್ಟಿ ಬಂದರೂ ಆರ್ ಎಸ್ ಎಸ್ ಮೇಲೆ ಕ್ರಮ ಕೈಗೊಳ್ಳಲು  ಸಾಧ್ಯವಿಲ್ಲ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿದರು.

ಅವರು ಭಾನುವಾರ ಸಚಿವ ಪ್ರಿಯಾಂಕ ಖರ್ಗೆ ನೀಡಿರುವ ಆರ್‌ಎಸ್‌ಎಸ್ ಚಟುವಟಿಕೆ ನಿಷೇಧ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದರ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡಿರುವ  ಕುರಿತು ಮಾಧ್ಯಮಗಳಿಗೆ  ಪ್ರತಿಕ್ರಿಯಿಸಿದರು.

ಡಿ ಕೆ ಶಿವಕುಮಾರ್ ಅವರಿಗೆ   ಆರ್ ಎಸ್ ಎಸ್ ಬಗ್ಗೆ ಮಾತನಾಡುವ ನೈತಿಕತೆ ಮತ್ತು ತಿಳುವಳಿಕೆ ಇಲ್ಲ, ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಚರ್ಚೆ ನಡೆಯುತ್ತಿದೆ ಆದರೆ ಡಿಕೆಶಿಯನ್ನು ಸಿದ್ದರಾಮಯ್ಯ ಮುಂದಿನ ವರ್ಷ ಕಾಂಗ್ರೆಸ್ ನಿಂದ ಹೊರಗೆ ಹಾಕಬಹುದು. ಅವರು ಹೊರ ಬಿದ್ದರೆ ಡಿಕೆಶಿ ಮುಂದಿನ ವರ್ಷ ಗಣವೇಶ ಧರಿಸಿ ಪಥಸಂಚಲನ ನೋಡಬೇಕಾಗಬಹುದು. ಡಿಕೆಶಿ ಗಣವೇಶ ಧರಿಸುವುದನ್ನು ನೋಡುವ ಭಾಗ್ಯ ಕರುನಾಡಿಗೆ ಸಿಗಬಹುದು. ಡಿ ಕೆ ಶಿವಕುಮಾರ್ ಕೂಡ ಮುಂದೆ ಆರ್ ಎಸ್ ಎಸ್ ಗೆ ಬರುತ್ತಾರೆ. ಈ ಹಿಂದೆ ಟೀಕೆ ಮಾಡಿದವರೆಲ್ಲಾ ಆರ್ ಎಸ್ ಎಸ್ ನ್ನು ಒಪ್ಪಿಕೊಂಡಿದ್ದಾರೆ ಎಂದರು.

ಆರ್ ಎಸ್ ಎಸ್ ಚಟುವಟಿಕೆ ಬ್ಯಾನ್ ಮಾಡಬೇಕು ಎಂಬ ಪ್ರಿಯಾಂಕ ಖರ್ಗೆ ಸಿಎಂ ಗೆ ಪತ್ರ ಬರೆದಿರುವ ಕುರಿತು ಮಾತನಾಡಿ ಪ್ರಿಯಾಂಕ ಖರ್ಗೆ ಇನ್ನೊಂದು ಜನ್ಮದಲ್ಲಿ ಹುಟ್ಟಿ ಬಂದರೂ ಆರ್ ಎಸ್ ಎಸ್ ಮೇಲೆ ಕ್ರಮ ಸಾಧ್ಯವಿಲ್ಲ, ಆರ್ ಎಸ್ ಎಸ್ ನಿಷೇಧ ಮಾಡುವ ತಾಕತ್ತು ಅವರಿಗಿಲ್ಲ ಅದು ಸಾಧ್ಯವೂ ಇಲ್ಲ. ಪ್ರಿಯಾಂಕ ಖರ್ಗೆಯವರು ಎಸ್ ಎಸ್ ಎಲ್ ಸಿ ಪಿಯುಸಿಯಲ್ಲಿ ಪ್ರಥಮ 5 ಸ್ಥಾನವನ್ನು ನೀವು ಪಡೆಯಿರಿ. ಕಲಬುರ್ಗಿಯ ಉಸ್ತುವಾರಿ ಸಚಿವರಾಗಿ ಕರ್ತವ್ಯ ಮಾಡಿ ತೋರಿಸಿ ಆನಂತರ ನೀವು ರಾಜ್ಯದ ಜನಕ್ಕೆ ಪಾಠ ಮಾಡಲು ಬನ್ನಿ

ಮುಸ್ಲಿಮರನ್ನು ಓಲೈಕೆ ಮಾಡುವ ಇಂತಹ ಹೇಳಿಕೆಯನ್ನು ಬಿಟ್ಟು ಕಲ್ಬುರ್ಗಿಯಲ್ಲಿ ಮಸೀದಿಯ ಆಜಾದ್ ನಿಷೇಧ ಮಾಡುವ ತಾಖತ್ ತೋರಿಸಿ. ಪತ್ರ ಪರಿಶೀಲಿಸುವ ಮೊದಲು ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳಲಿ. ಸಿಎಂ ಕೂಡ ಇವತ್ತಲ್ಲ ನಾಳೆ ಆರ್ ಎಸ್ ಎಸ್ ಅನ್ನು ಒಪ್ಪುತ್ತಾರೆ ಎಂದರು.


Spread the love
Subscribe
Notify of

0 Comments
Inline Feedbacks
View all comments