ಬನ್ನೂರು ಚರ್ಚಿನ ದಫನ ಭೂಮಿಯಲ್ಲಿ ಸಮಾಧಿ ಒಡೆದು ಹಾಕಿದ ದುಷ್ಕರ್ಮಿಗಳು –ದೂರು ದಾಖಲು

Spread the love

ಬನ್ನೂರು ಚರ್ಚಿನ ದಫನ ಭೂಮಿಯಲ್ಲಿ ಸಮಾಧಿ ಒಡೆದು ಹಾಕಿದ ದುಷ್ಕರ್ಮಿಗಳು –ದೂರು ದಾಖಲು

ಮಂಗಳೂರು: ಕ್ರೈಸ್ತ ದಫನ ಭೂಮಿಯಲ್ಲಿ ಯಾರೋ ದುಷ್ಕರ್ಮಿಗಳು ಸಮಾಧಿಯೊಂದನ್ನು ಒಡೆದು ಹಾಕಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬನ್ನೂರಿನ ಸಂತ ಅಂತೋನಿ ಚರ್ಚ್ ಅಧೀನದಲ್ಲಿರುವ ಕ್ರೈಸ್ತ ದಫನ ಭೂಮಿಯಲ್ಲಿ ಯಾರೋ ದುಷ್ಕರ್ಮಿಗಳು ಸಮಾಧಿಯೊಂದನ್ನು ಒಡೆದು ಹಾಕಿದ್ದು ಈ ಕುರಿತು ಚರ್ಚಿನ ಧರ್ಮಗುರುಗಳಾದ ವಂ|ಬಾಲ್ತಾಜಾರ್ ಪಿಂಟೊ ದೂರು ದಾಖಲಿಸಿದ್ದಾರೆ

ಘಟನಾಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರು ಭೇಟಿ ನೀಡಿ ಪರಿಶೀಲಿಸಿರುತ್ತಾರೆ. ಸದ್ರಿ ಕೃತ್ಯವನ್ನು ನಡೆಸಿದ ದುಷ್ಕರ್ಮಿಗಳ ಪತ್ತೆಗಾಗಿ ವಿಚಾರಣೆ ನಡೆಸಲಾಗುತ್ತಿದೆ.


Spread the love
Subscribe
Notify of

0 Comments
Inline Feedbacks
View all comments