ಮಂಗಳೂರಿಗೆ ಅನಿಲ ಭಾಗ್ಯ: 17,600 ಮೆಟ್ರಿಕ್ ಟನ್ ಅನಿಲ ಹೊತ್ತು ಬಂದ ಕತಾರ್ ಹಡಗು!

Spread the love

ಮಂಗಳೂರಿಗೆ ಅನಿಲ ಭಾಗ್ಯ: 17,600 ಮೆಟ್ರಿಕ್ ಟನ್ ಅನಿಲ ಹೊತ್ತು ಬಂದ ಕತಾರ್ ಹಡಗು!

ಮಂಗಳೂರು: ಮಂಗಳೂರಿನ ಇಂಧನ ಭದ್ರತೆಗೆ ಹೆಚ್ಚಿನ ಬಲ ತುಂಬಲು, ಗುಜರಾತ್‌ನಿಂದ ಹೊರಟಿದ್ದ ‘ಅಪೋಲೊ ಓಷಿಯನ್’ (Apollo Ocean) ಎಂಬ ಬೃಹತ್ ಎಲ್‌ಪಿಜಿ ಟ್ಯಾಂಕ‌ರ್ ಬುಧವಾರ ರಾತ್ರಿ ನವ ಮಂಗಳೂರು ಬಂದರನ್ನು ತಲುಪಿದೆ. ಈ ಹಡಗು ಸುಮಾರು 17,600 ಮೆಟ್ರಿಕ್ ಟನ್ ಅನಿಲವನ್ನು ಹೊತ್ತು ತಂದಿದ್ದು, ಈ ಸರಕು ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಮತ್ತು ಭಾರತ್ ಪೆಟ್ರೋಲಿಯಂ (BPCL) ಸಂಸ್ಥೆಗಳಿಗೆ ಸೇರಿದ್ದಾಗಿದೆ.

ಪಶ್ಚಿಮ ಏಷ್ಯಾದಲ್ಲಿ (West Asia) ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕವಿತ್ತು. ಆದರೆ, ಸತತವಾಗಿ ಬರುತ್ತಿರುವ ಇಂತಹ ಹಡಗುಗಳು ಕರ್ನಾಟಕ ಮತ್ತು ನೆರೆಹೊರೆಯ ರಾಜ್ಯಗಳಿಗೆ ಎಲ್‌ ಪಿಜಿ ಕೊರತೆಯಾಗದಂತೆ ನೋಡಿಕೊಳ್ಳಲಿವೆ. ಇತ್ತೀಚೆಗಷ್ಟೇ ಅಮೆರಿಕದ ಟೆಕ್ಸಾಸ್‌ನಿಂದ ‘ಪಿಕ್ಸಿಸ್ ಪಯೋನೀರ್’ ಎಂಬ ಹಡಗು 16,714 ಟನ್ ಎಲ್‌ ಪಿಜಿ ಹೊತ್ತು ತಂದಿತ್ತು. ಇದರ ಬೆನ್ನಲ್ಲೇ ಈಗ ‘ಅಪೋಲೊ ಓಷಿಯನ್ ಆಗಮಿಸಿರುವುದು ಬಂದರಿನ ಚಟುವಟಿಕೆಯನ್ನು ಚುರುಕುಗೊಳಿಸಿದೆ.

ಕೇಂದ್ರ ಹಡಗು ಸಚಿವಾಲಯವು ಮಾರ್ಚ್ 31ರವರೆಗೆ ಎಲ್‌ ಪಿಜಿ ಮತ್ತು ಕಚ್ಚಾ ತೈಲ ಹಡಗುಗಳಿಗೆ ಕಾರ್ಗೋ ಸಂಬಂಧಿತ ಶುಲ್ಕವನ್ನು ಮನ್ನಾ ಮಾಡಿದ್ದು, ಇದು ಹೆಚ್ಚಿನ ಇಂಧನ ಅಮದಿಗೆ ಪ್ರೇರಣೆ ನೀಡುತ್ತಿದೆ. ಮಂಗಳೂರಿನಲ್ಲಿರುವ ದೇಶದ ಅತಿದೊಡ್ಡ ಭೂಗತ ಎಲ್‌ಪಿಜಿ ಶೇಖರಣಾ ಘಟಕವು (80,000 ಮೆಟ್ರಿಕ್ ಟನ್ ಸಾಮರ್ಥ್ಯ) ಇಂತಹ ದೊಡ್ಡ ಪ್ರಮಾಣದ ಅಮದನ್ನು ನಿರ್ವಹಿಸಲು ಸನ್ನದ್ಧವಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಅಡುಗೆ ಅನಿಲದ ಅಭಾವ ತಲೆದೋರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ.


Spread the love
Subscribe
Notify of

0 Comments
Inline Feedbacks
View all comments