ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಉಳ್ಳಾಲ ಬೀಚ್ ಕ್ಲೀನಿಂಗ್

Spread the love

ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಉಳ್ಳಾಲ ಬೀಚ್ ಕ್ಲೀನಿಂಗ್

ಕರ್ನಾಟಕ ಸರ್ಕಾರದ ಕರಾವಳಿ ಅಭಿವೃದ್ದಿ ಮಂಡಳಿಯ ಸಹಯೋಗದೊಂದಿಗೆ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕದ ವತಿಯಿಂದ ಉಳ್ಳಾಲ ಬೀಚ್ ಕ್ಲೀನಿಂಗ್ ಕಾರ್ಯಕ್ರಮವು ಡಿಸೆಂಬರ್ 6 ರಂದು ಬೆಳಗ್ಗೆ 6 ರಿಂದ 9:30 ರವರೆಗೆ ಜರುಗಿತು.

ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಂ.ಎ.ಗಫೂರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ NSS ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದ ಅವರು ಸ್ವಚ್ಚ ಪರಿಸರವನ್ನು ಕಾಪಾಡುವಲ್ಲಿ ಯುವ ಜನತೆಯ ಪಾತ್ರವನ್ನು ವಿವರಿಸಿದರು.

ಮಂಗಳೂರಿನ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕರಾದ ವಂ.ಫಾ.ಫೌಸ್ಟಿನ್ ಲೂಕಾಸ್ ಲೋಬೋರವರು ಮಾಡನಾಡಿ ಶುದ್ದ ಜಲ, ಆರೋಗ್ಯಕರ ವಾತಾವರಣ ಹಾಗೂ ಶುದ್ದ ಗಾಳಿಯು ಮನುಷ್ಯನಿಗೆ ಅತೀ ಅಗತ್ಯವಾದದ್ದು ಆದರೆ ಅದನ್ನು ಕಾಪಾಡುವಲ್ಲಿ ಇನ್ನೂ ಹೆಚ್ಚಿನ ಪಾತ್ರವನ್ನು ವಹಿಸಬೇಕು, ಆ ನಿಟ್ಟಿನಲ್ಲಿ NSS ಸ್ವಯಂ ಸೇವಕರ ಈ ಸೇವೆಯು ಮಾದರಿಯಾದದ್ದು ಎಂದವರು ಹೇಳಿದರು.

ಕರಾವಳಿ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಗಳಾದ ಪ್ರದೀಪ್ ಡಿ’ಸೋಜ ಹಾಗೂ ಉಳ್ಳಾಲ ನಗರಸಭೆಯ ಪೌರಾಯುಕ್ತರಾದ ತೇಜಮೂರ್ತಿ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಆಡಳಿತಾಧಿಕಾರಿ ವಂ.ಫಾ.ಡೊನಾಲ್ಡ್ ನಿಲೇಶ್ ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪಥಿ ಔಷಧೀಯ ವಿಭಾಗದ ಆಡಳಿತಾಧಿಕಾರಿ ವಂ.ಫಾ.ನೆಲ್ಸನ್ ಧೀರಜ್ ಪಾಯಸ್, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಂ.ಫಾ.ಅಶ್ವಿನ್ ಲಾರೆನ್ಸ್ ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಇ.ಎಸ್.ಜೆ.ಪ್ರಭುಕಿರಣ್, ಉಪಪ್ರಾಂಶುಪಾಲರಾದ ಡಾ.ವಿಲ್ಮಾ ಮೀರಾ ಡಿ’ಸೋಜ, ಫಾರ್ಮಸ್ಯೂಟಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಸತೀಶ್ ಎಸ್, ವೈದ್ಯಕೀಯ ಉಪ ಅಧೀಕ್ಷಕರಾದ ಡಾ.ದೀಪಾ ಪಾಯಸ್, ಯು.ಜಿ.ಉಸ್ತುವಾರಿ ಡಾ.ಅಮಿತಾ, ಪಿ.ಜಿ.ಉಸ್ತುವಾರಿ ಡಾ.ರಾಜಚಂದ್ರ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮಂಜುನಾಥ್ ಶೆಟ್ಟಿ, ಕ್ಯಾ.ವಿಜಯ್ ಕುಮಾರ್, ಉಳ್ಳಾಲ ನಗರಸಭೆಯ ಪರಿಸರ ವಿಭಾಗದ ಎಂಜೀನಿಯರ್ ಪುನೀತ್ ಎಂ.ಎಸ್, ಹಿರಿಯ ಆರೋಗ್ಯಾಧಿಕಾರಿಗಳಾದ ರವಿ ಕೃಷ್ಣ ಹಾಗೂ ಲಿಲ್ಲಿ ನಾಯರ್ ಉಪಸ್ಥಿತರಿದ್ದರು.

ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ NSS ಕಾರ್ಯಕ್ರಮ ಸಂಯೋಜನಾಧಿಕಾರಿಯಾದ ಡಾ.ಧೀರಜ್ ಫೆರ್ನಾಂಡೀಸ್ ಅವರು ಸ್ವಾಗತಿಸಿ, NSS ಘಟಕದ ನಾಯಕರಾದ ಪ್ರಣವ್ ವಂದಿಸಿದರು. ಸ್ವಯಂ ಸೇವಕರಾದ ಶ್ರೀ ರಾಮ್ ಕಾರ್ಯಕ್ರಮ ನಿರೂಪಿಸಿದರು. ವೈದ್ಯಕೀಯ ಸಾಮಾಜಿಕ ಕಾರ್ಯಕರ್ತರಾದ ಶೌವಾದ್ ಅವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜು ಹಾಗೂ ಫಾರ್ಮಾಸ್ಯೂಟಿಕಲ್ ಸೈನ್ಸಸ್ ಕಾಲೇಜಿನ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಳ್ಳಾಲ ಬೀಚ್ ಕ್ಲೀನಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಸ್ವಚ್ಚ ಪರಿಸರದ ಮಹತ್ವವನ್ನು ಸಾರಿದರು.


Spread the love
Subscribe
Notify of

0 Comments
Inline Feedbacks
View all comments