‘ಸರ್ವಜನೋತ್ಸವ’ ಸಮಾವೇಶಕ್ಕೆ ಉಡುಪಿ ಜಿಲ್ಲಾ ಇಫ್ಕಾ ಸಂಘಟನೆ ಬೆಂಬಲ
ಉಡುಪಿ: ಸಂವಿಧಾನವನ್ನು ರಕ್ಷಿಸುವ ಹಾಗೂ ಜಾತ್ಯಾತೀತ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಪರಿಸ್ಥಿತಿಯನ್ನು ಸುಧಾರಿಸುವ ಪ್ರಯತ್ನವಾಗಿ ಸಹಬಾಳ್ವೆ ಉಡುಪಿ ವತಿಯಿಂದ ‘ಸರ್ವಜನೋತ್ಸವ’ ಸಮಾವೇಶಕ್ಕೆ ಅಂತರಾಷ್ಟ್ರಿಯ ಕ್ರೈಸ್ತ ಸಂಘಟನೆಗಳ ಅಂತರಾಷ್ಟ್ರೀಯ ಒಕ್ಕೂಟ (ಇಫ್ಕಾ) ಉಡುಪಿ ಜಿಲ್ಲಾ ಸಮಿತಿ ತನ್ನ ಸಂಪೂರ್ಣ ಬೆಂಬಲ ಸೂಚಿಸಿದೆ.
ದೇಶದಲ್ಲಿ ಫ್ಯಾಸಿಸ್ಟ್ ಮತ್ತು ಕೋಮುವಾದಿ ಶಕ್ತಿಗಳ ಅಟ್ಟಹಾಸ ತೀವ್ರಗೋಳ್ಳುತ್ತಿದ್ದ ಶಾಂತಿ -ಸಾಮರಸ್ಯ ಪ್ರಿಯರು, ಜಾತ್ಯಾತೀತ ಮೌಲ್ಯಗಳ ಬಗ್ಗೆ ಕಾಳಜಿಯುಳ್ಳವರು ಈ ದೇಶವನ್ನು ಒಂದಾಗಿ ಉಳಿಯ ಬಯಸುವವರು ಒಂದಾಗಿ ದೇಶದ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ದ ಒಂದು ಶಕ್ತಿಯಾಗಿ ನಿಲ್ಲಬೇಕಾಗಿದರೆ ನಮ್ಮೆಲ್ಲರ ಒಗ್ಗಟ್ಟು ಪ್ರದರ್ಶನದ ಅಗತ್ಯವಿದೆ.
ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಡುಪಿ ಜಿಲ್ಲೆಯ ಕ್ರೈಸ್ತ ಸಮುದಾಯದ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಇಫ್ಕಾ ಉಡುಪಿ ಜಿಲ್ಲೆ ಇದರ ಅಧ್ಯಕ್ಷ ಡಾ|ನೆರಿ ಕರ್ನೆಲಿಯೊ, ಗೌರವಾಧ್ಯಕ್ಷ ಲೂಯಿಸ್ ಲೋಬೊ, ಜಿಲ್ಲಾ ಕಾರ್ಯದರ್ಶಿ ಸ್ಟೀವನ್ ಕುಲಾಸೊ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.













